October 5, 2024

ಕಳೆದ ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಜನರಿಗೆ ಪುಕ್ಕೆಟೆಗಳ ಆಮಿಷವೊಡ್ಡಿದ ಕಾರಣ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿನ ಕಾಂಗ್ರೆಸ್ ಸರ್ಕಾರ ಅಧಿಕಾರದ ಗದ್ದುಗೆಗೆ ಏರುವಂತಾಗಿ ವಿಧಿಯಿಲ್ಲದೆ ಯಾವುದೆ ಆರ್ಥಿಕ ಸಮತೋಲನದ ಯೋಚನೆ ಮಾಡದೆ ಜನರಿಗೆ ನೀಡಿದ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಕ್ಕೆ ತರಬೇಕಾಯಿತು. ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಯಿಂದಾಗಿ ಸರ್ಕಾರ ದಿವಾಳಿಯಾಗಿದ್ದು ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ಬಿಜೆಪಿ ಮೂಡಿಗೆರೆ ಮಂಡಲ ಅಧ್ಯಕ್ಷ ಟಿ.ಎಂಗಜೇಂದ್ರ ಟೀಕಿಸಿದರು.

ಬಿಜೆಪಿ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಿ ಮಾತನಾಡಿದ ಅವರು ಮುಂಬರುವ ಜಿ.ಪಂ, ತಾ.ಪಂ ಒಳಗೊಂಡಂತೆ ಎಲ್ಲಾ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾಗಿದೆ. ಅದಕ್ಕಾಗಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಜ್ಜುಗೊಳಿಸಬೇಕಾಗಿದೆ. ಈಗಾಗಲೇ ಹೋಬಳಿ ಹಾಗೂ ಭೂತ್‌ಮಟ್ಟದ ಪದಾಧಿಕಾರಿಗಳ ನೇಮಕಾತಿ ಪೂರ್ಣಗೊಂಡಿದೆ. ಮಂಡಲ ಪದಾಧಿಕಾರಿಗಳನ್ನು ಈಗ ನೇಮಕ ಮಾಡಲಾಗಿದೆ. ಜೆಡಿಎಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ ಎಂದು ತಿಳಿಸಿದರು.

ನಾಗಭೂಷಣ್, ಶಶಿಧರ್, ಪಿ.ಜಿ.ಅನುಕುಮಾರ್ (ಪುಟ್ಟಣ್ಣ), ಲಾಯರ್ ಸಿದ್ದಯ್ಯ, ಕೃಷ್ಣೇಗೌಡ, ನಿಡಗೋಡು ಸುನಿಲ್‌ಕುಮಾರ್, ಪ್ರವೀಣ್ ಕುಮಾರ್, ಗೌರಮ್ಮ ಇವರುಗಳು ಬಿಜೆಪಿ ನೂತನ ಮಂಡಲ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದು, ಕಾರ್ಯದರ್ಶಿಗಳಾಗಿ ಭರತ್ ಕನ್ನೇಹಳ್ಳಿ, ಅನಿತಾ ಜಗದೀಪ್, ಎಂ.ಎಲ್.ವಿಜಯೇಂದ್ರ, ಪ್ರಮೀಳಾ, ರಘು, ಪೂರ್ಣಿಮಾ ಮಲ್ಯ, ಪಟೇಲ್ ಮಂಜು, ರಾಧಾಕೃಷ್ಣ ಆಯ್ಕೆಯಾಗಿದ್ದಾರೆ, ನೂತನ ಖಜಾಂಚಿಯಾಗಿ ನಾಗೇಶ್ ನಾಯಕ್ ಮತ್ತು ಕಛೇರಿ ಕಾರ್ಯದರ್ಶಿಯಾಗಿ ಪದ್ಮನಾಭ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ