October 5, 2024

ಐಷಾರಾಮಿ ಆಡಿ ಕಾರ್ ಮರಕ್ಕೆ ಡಿಕ್ಕಿಯಾಗಿ ಭೀಕರ ಅಪಘಾತದಲ್ಲಿ ಹಾಸನ ಮೂಲದ ಓರ್ವ ಸೇರಿ  ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಇತ್ತೊಬ್ಬ ಆಶ್ಚರ್ಯಕರ ರೀತಿಯಲ್ಲಿ ಬಚಾವ್ ಆಗಿರುವ ಘಟನೆ ನಡೆದಿದೆ. ಕೋಲಾರದ ಹೊರವಲಯದಲ್ಲಿ ಈ ಭೀಕರ ದುರಂತ ಸಂಭವಿಸಿದೆ.

ಕೋಲಾರ ‌ಹೊರವಲಯದ ಬಂಗಾರಪೇಟೆ ಮುಖ್ಯ ರಸ್ತೆಯ ಸಹಕಾರ ನಗರ ಬಳಿ ಘಟನೆ ನಡೆದಿದೆ. ಮೃತರು ರೇವಾ ಯೂನಿವರ್ಸಿಟಿ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಮೃತರನ್ನು ಹಾಸನ ಮೂಲದ ಹರ್ಷವರ್ಧನ್, ಬಳ್ಳಾರಿ ಮೂಲದ‌ ಬಸವರಾಜ್ ಹಾಗೂ ಬಂಗಾರಪೇಟೆಯ ನಿಚ್ಚಲ್ ಎಂದು ಗುರುತಿಸಲಾಗಿದೆ.

ಬಂಗಾರಪೇಟೆ ಮೂಲದ ಸಾಯಿ ಗಗನ್ ಬಚಾವ್ ಆಗಿದ್ದಾನೆ. ಅಪಘಾತದ ರಭಸಕ್ಕೆ ಆಡಿ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಚಾವಾದ ಸಾಯಿಗಗನ್‌ ಮನೆಗೆ ಸ್ನೇಹಿತರು ಬಂದಿದ್ದರು. ಮನೆಯಿಂದ ಕೋಲಾರಕ್ಕೆ ಮರಳುವಾಗ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಅತಿ ವೇಗ ಕಾರಣ ಎನ್ನಲಾಗಿದೆ.

ಅಪಘಾತದ ಭೀಕರತೆಗೆ ಕಾರು  ಚಿಂದಿಯಾಗಿದೆ. ಕಾರಿನಲ್ಲಿದ್ದ ಏರ್‌ಬ್ಯಾಗ್‌ಗಳು ಕೂಡ ಚಿಂದಿಚಿಂದಿಯಾಗಿವೆ. ಸುಮಾರು 50 ಲಕ್ಷ ರೂಪಾಯಿ ಬೆಲೆಬಾಳುವ ಕಾರಿನಲ್ಲಿದ್ದ ಅಪಘಾತ ಸುರಕ್ಷತಾ ಕ್ರಮಗಳು ಕೆಲಸ ಮಾಡದಿರುವುದು ಅಚ್ಚರಿಗೆ ಕಾರಣವಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ