October 5, 2024

ಕಾರ್ಯಾಚರಣೆ ನಡೆಸಿದ ಎನ್.ಆರ್.ಪುರ ಠಾಣೆ ಪೊಲೀಸರು

ಚಿಕ್ಕಮಗಳೂರು ಜಿಲ್ಲೆ ಮತ್ತು ರಾಜ್ಯದ ವಿವಿಧ ಕಡೆಗಳಲ್ಲಿ ನಕಲಿ ಆಭರಣಗಳನ್ನು ಅಸಲಿ ಆಭರಣವೆಂದು ನಂಬಿಸಿ, ಹಲವು ಫೈನಾನ್ಸ್ ಮತ್ತು ಗೋಲ್ಡ್ ಕಂಪನಿಗಳಲ್ಲಿ ನಕಲಿ ಚಿನ್ನವನ್ನು ಗಿರವಿ ಇಟ್ಟು, ವಂಚಿಸಿದ್ದ ಇಬ್ಬರು ವ್ಯಕ್ತಿಗಳನ್ನು ಎನ್.ಆರ್. ಪುರ ಪೊಲೀಸ್ ಠಾಣೆ ಪೊಲೀಸರ ತಂಡ ವಶಕ್ಕೆ ಪಡದು, ರೂ. 6.75 ಬೆಲೆಯ ಆಭರಣಗಳು ಮತ್ತು ನಗದು ವಶಪಡಿಸಿಕೊಂಡಿರುತ್ತಾರೆ.
ನಕಲಿ ಆಭರಣಗಳನ್ನು ಅಸಲಿ ಎಂದು ನಂಬಿಸಿ, ವಂಚಿಸಿ ಮೋಸ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು  6,75 ಲಕ್ಷ  ರೂ ಬೆಲೆಯ ಆಭರಣ ಹಾಗೂ ಹಣ ವಶ ಪಡಿಸಿಕೊಂಡಿದ್ದಾರೆ. ಎನ್.ಆರ್.ಪುರ ತಾಲ್ಲೂಕಿನ ಮಡಬೂರು ಗ್ರಾಮದ  ಶರತ್ ರಾಜ್ ಮುತ್ತಿನಕೊಪ್ಪ ವಾಸಿ ಫರಾಜ್ ಬಂಧಿತ ಆರೋಪಿಗಳು.
ಇವರು  ಚಿನ್ನದ ಲೇಪನ ಇರುವ 68 ಗ್ರಾಂ ತೂಕದ ಚಿನ್ನಾಭರಣಗಳನ್ನು ಮುತ್ತೂಟ್ ಫೈನಾನ್ಸ್ ನಲ್ಲಿ  ಗಿರವಿ ಇಟ್ಟಿದ್ದರು. ಅದನ್ನು ಬಿಡಿಸಿ ದಾವಣಗೆರೆಯ
ಶ್ರೀನಿಧಿ ಗೋಲ್ಡ್ ಕಂಪನಿಗೆ  4,19,000 ರೂ ಗಳಿಗೆ ಮಾರಾಟ ಮಾಡಿದ್ದು, ಗೋಲ್ಡ್ ಕಂಪನಿಯವರು ಚಿನ್ನ ಕರಗಿಸಿ ಗಟ್ಟಿ ಮಾಡಿ ನೋಡಿದಾಗ  21% ಮಾತ್ರ ಚಿನ್ನವಿದ್ದು, ಉಳಿದಿದ್ದು ನಕಲಿ ಚಿನ್ನವೆಂದು ತಿಳಿದು ಬಂದಿದೆ. ಈ ಆರೋಪಿಗಳೂ ಚಿನ್ನವೆಂದು ನಂಬಿಸಿ ಮೋಸ ಮಾಡಿದ್ದರಿಂದ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎನ್.ಆರ್.ಪುರ  ಠಾಣೆಗೆ  ದೂರು ನೀಡಿದ್ದರು.
ಆರೋಪಿಗಳನ್ನು   ಬಂಧಿಸಿ ವಿಚಾರಣೆ  ಮಾಡಿದಾಗ  ಹಲವು ಫೈನಾನ್ಸ್ ಹಾಗೂ ಗೋಲ್ಡ್ ಕಂಪನಿಗೆ ವಂಚಿಸಿ ಮೋಸ ಮಾಡಿರುವುದು ಪತ್ತೆಯಾಗಿದೆ.
ಆರೋಪಿ ಶರತ್ ರಾಜ್ ಲ್ಲಿದ್ದ 60,000/- ರೂ ನಗದು ಹಾಗೂ 22.9 ಗ್ರಾಂ ಚಿನ್ನದ ಲೇಪನ ಇರುವ ಬ್ರಾಸ್ ಲೈಟ್ & 26.3 ಗ್ರಾಂ ಚಿನ್ನದ ಲೇಪನ ಇರುವ 1 ಲಕ್ಷ ರೂ ಬೆಲೆಯ ಚೈನ್ ವಶಪಡಿಸಿಕೊಳ್ಳಲಾಗಿದೆ.
ಎನ್.ಆರ್.ಪುರ  ಪಟ್ಟಣದ  ವೆಂಕಟೇಶ್ವರ ಜ್ಯೂವೆಲ್ಲರ್ಸ್ ಹಾಗೂ ಪಾನ್ ಬೋಕರ್ಸ್ ನಲ್ಲಿ ಗಿರವಿ ಇಟ್ಟಿದ್ದ 32 ಗ್ರಾಂ ತೂಕದ ಚಿನ್ನದ ಲೇಪನ ಇರುವ  70 ಸಾವಿರ  ಬೆಲೆಯ ಚೈನ್ ದೊರಕಿದೆ. ಚಿಕ್ಕಮಗಳೂರು ನಗರದ ಕೋಶಮಟ್ಟಂ ಫೈನಾನ್ಸ್ ನಲ್ಲಿ ಗಿರವಿ ಇಟ್ಟಿದ್ದ 35 ಗ್ರಾಂ ಚಿನ್ನದ ಲೇಪನ ಇರುವ ಚೈನ್ ಹಾಗೂ 25 ಗ್ರಾಂ ಚಿನ್ನದ ಲೇಪನ ಇರುವ 2,50,000/-ರೂ ಬೆಲೆಯ ಒಂದು ಕಡಗ ವಶಕ್ಕೆ ಪಡೆದಿದ್ದಾರೆ. ಆರೋಪಿಯ ಸ್ನೇಹಿತ ಸುರೇಶ ನ ಹೆಸರಿನಲ್ಲಿ ಮಣಪುರಂ ಫೈನಾನ್ಸ್ ನಲ್ಲಿ ಗಿರವಿ ಇಟ್ಟಿದ್ದ ಚಿನ್ನದ ಲೇಪನ ಇರುವ ಒಟ್ಟು ಅಂದಾಜು ಬೆಲೆ 90,000/- ರೂ ಮೌಲ್ಯದ 34 ಗ್ರಾಂ ಚೈನ್  ಹಾಗೂ 29 ಗ್ರಾಂ ಬ್ರಾಸ್ ಲೈಟ್  ವಶಪಡಿಸಿಕೊಳ್ಳಲಾಗಿದೆ.
ಪಿಎಸ್ ಐ   ನಿರಂಜನ್ ಗೌಡ   ಮತ್ತು ಪಿಎಸ್ ಐ. ಜ್ಯೋತಿ,  ಎಎಸ್ ಐ ನಟರಾಜ್, ಸಿಬ್ಬಂದಿ ಬಸಂತ್ ಕುಮಾರ್, ಪರಮೇಶ್ ಹಾಗೂ ಶಂಕರ್, ಬಿನು ಪಿ.ಎ, ಯುವರಾಜ್, ಕೌಶಿಕ್, ಗಿರೀಶ್  ಆರೋಪಿಗಳ ಪತ್ತೆ ಕಾರ್ಯ ಕೈಗೊಂಡಿದ್ದರು.

ಪೊಲೀಸರ ಎಚ್ಚರಿಕೆ : 

ಫೈನಾನ್ಸ್ / ಗೋಲ್ಡ್ ಕಂಪನಿ / ಗಿರವಿದಾರರಲ್ಲಿ ಯಾರಾದರೂ ಚಿನ್ನಾಭರಣಗಳನ್ನು ಗಿರವಿ / ಮಾರಾಟ ಮಾಡಲು ಬಂದಲ್ಲಿ, ಕೂಲಂಕುಷವಾಗಿ ಪರಿಶೀಲಿಸಿ, ಆಭರಣಗಳು ಗಿರವಿ ಇಡಲು ಬಂದ ವ್ಯಕ್ತಿಯದ್ದೇ ಎಂದು ಖಚಿತಪಡಿಸಿಕೊಂಡು ನಂತರ ಗಿರವಿ ಇಟ್ಟುಕೊಳ್ಳುವುದು. ಅನುಮಾನ ಬಂದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆ ಅಥವಾ 112 ಗೆ ಕರೆ ಮಾಡಿ ಮಾಹಿತಿ ನೀಡುವುದು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ