October 5, 2024

ಜಿಲ್ಲೆಯಲ್ಲಿ ಮೂಡಿಗೆರೆ ತಾಲೂಕಿನಲ್ಲಿ ಹೆಚ್ಚಾಗಿ ಮಳೆ ಬೀಳುವ ಜತೆಗೆ ಅಧಿಕ ಹಾನಿ ಸಂಭವಿಸಿದೆ. ಈ ಬಗ್ಗೆ ಶಾಸಕಿ ನಯನಾ ಮೋಟಮ್ಮ ಅವರು ಸರಕಾರದ ಗಮನ ಸೆಳೆಯುವ ಮೂಲಕ ಉತ್ತಮ ಕಾರ್ಯ ನಡೆಸುತ್ತಿದ್ದಾರೆಂದು ತಾ.ಪಂ. ಮಾಜಿ ಅಧ್ಯಕ್ಷ ಎ.ಜಿ.ಸುಬ್ರಾಯಗೌಡ ಹೇಳಿದರು.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಸಬಾ, ಗೊಣಿಬೀಡು, ಬಾಳೂರು, ಬಣಕಲ್ ಹೋಬಳಿ ವ್ಯಾಪ್ತಿಯಲ್ಲಿ 75ಕ್ಕೂ ಅಧಿಕ ಮನೆಗಳು ಕುಸಿದಿದೆ. ರಸ್ತೆ, ಸೇತುವೆ ಹಾನಿಗೊಳಗಾಗಿವೆ. ಹಾಗಾಗಿ ಶಾಸಕಿ ನಯನಾ ಮೋಟಮ್ಮ ಅವರು ಸರಕಾರದ ಗಮನ ಸೆಳೆದು ಈಗಾಗಲೇ ಶೇ.100 ಮನೆ ಕುಸಿತಗೊಂಡ 30 ಮನೆಗೆ 1.2 ಲಕ್ಷ ರೂ ರೂ ಪರಿಹಾರದ ಹಣ ವಿತರಿಸಲಾಗಿದೆ. ಅಲ್ಲದೇ ಬಹುತೇಕ ಮನೆಗಳಿಗೆ ಹಕ್ಕು ಪತ್ರ ಇಲ್ಲದಿದ್ದರೂ ಪರಿಹಾರ ನೀಡಲಾಗಿದೆ.

ಅತಿವೃಷ್ಟಿ ಪರಿಹಾರದ ಬಗ್ಗೆ ರೈತರ ಬೇಡಿಕೆಯಿದೆ. ಉದುಸೆ, ಬೆಟ್ಟದಮನೆ, ಹಿರೇಶಿಗರ, ದೊಣಗೂಡು ಸೇರಿದಂತೆ ಮೂಡಿಗೆರೆ ಕಳಸ ಸೇರಿದಂತೆ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಎಲ್ಲಾ ಕಾಫಿ ತೋಟಗಳಲ್ಲಿ ಕಾಫಿ ಕೊಳೆ ರೋಗದ ಜತೆಗೆ ಫಸಲಿಗೆ ಬಂದಿದ್ದ ಕಾಫಿ ಕಾಯಿ ಉದುರುತ್ತಿದೆ. ಈ ಬಗ್ಗೆ ಅಧಿಕಾರಿಗಳು ಸರ್ವೆ ನಡೆಸಿ ವರದಿ ನೀಡಿದ ಬಳಿಕ ಪರಿಹಾರ ದೊರಕಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಮಳೆಯಿಂದ ಜಿಲ್ಲಾಧ್ಯಂತ ಜನರು ವಿದ್ಯುತ್ ಸಮಸ್ಯೆ ಎದುರಿಸಬಾರದೆಂದು ಜಿಲ್ಲೆಗೆ 500 ಮಂದಿ ಮಾನ್ಸೂನ್ ಗ್ಯಾಂಗ್‌ಮೆನ್‌ಗಳನ್ನು ನೇಮಕ ಮಾಡಿದ್ದಾರೆ. ತಾಲೂಕಿನಲ್ಲಿ ಆಗಿರುವ ಹಾನಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ. ಅಲ್ಲದೇ ನಯನಾ ಮೋಟಮ್ಮ ಅವರು ಶಾಸಕರಾದ ಬಳಿಕ ತಾಲೂಕಿನ ಅಂಗನಾಡಿ ಕಟ್ಟಡ, ಶಾಲೆ ದುರಸ್ತಿ, ಸೇರಿದಂತೆ ಇತರೇ ಅಭಿವೃದ್ಧಿ ಕಾರ್ಯಕ್ಕೆ 40 ಕೋಟಿ ಅನುದಾನ ತಂದಿದ್ದಾರೆ. ಈಗ ತಾಲೂಕನ್ನು ಪ್ರವಾಹ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಸರಕಾರಕ್ಕೆ ಒತ್ತಡ ಹಾಕುವ ಜತೆಗೆ ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಹೆಚ್ಚಿನ ಅನುದಾನ ತಂದು ಹಾನಿ ಸಮಸ್ಯೆ ನಿಭಾಯಿಸಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಅವರ ಶ್ರಮಕ್ಕೆ ಕಾಂಗ್ರೆಸ್‌ನ ಎಲ್ಲಾ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದ್ದಾರೆಂದು ಹೇಳಿದರು.

ಗೋಷ್ಠಿಯಲ್ಲಿ ಹಂತೂರು ಗ್ರಾ.ಪಂ. ಸದಸ್ಯ ಡಿ.ಜಿ.ರಮೇಶ್ ಪಟೇಲ್ ಮಾತನಾಡಿದರು, ಮುಖಂಡ ಡಿ.ಕೆ.ಶಂಕರೇಗೌಡ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ