October 5, 2024

ಫೈನಲ್ ಪಂದ್ಯದಲ್ಲಿ ವೈಫಲ್ಯ ಕಂಡ ಭಾರತ ಮಹಿಳೆಯರ ತಂಡ ಆತಿಥೇಯ ಶ್ರೀಲಂಕಾ ವಿರುದ್ಧ 8 ವಿಕೆಟ್​ಗಳ ಸೋಲು ಕಂಡಿದ್ದು, ಮಹಿಳೆಯರ ಏಷ್ಯಾ ಕಪ್​  ಟ್ರೋಫಿ ಉಳಿಸಲು ವಿಫಲಗೊಂಡಿದೆ. ಕಳೆದ ಬಾರಿ ಭಾರತ ಚಾಂಪಿಯನ್ ಆಗಿತ್ತು, ಆದರೆ ಈ ಬಾರಿ ಕಪ್ ಗೆಲ್ಲುವಲ್ಲಿ ಕೊನೇ ಕ್ಷಣದಲ್ಲಿ ಎಡವಿತು. ಇದೇ ವೇಳೆ ಚಾಮರಿ ಅಟ್ಟಪಟ್ಟು ನೇತೃತ್ವದ ಲಂಕಾ ವನಿತೆಯರು ಮೊದಲ ಬಾರಿಗೆ ಏಷ್ಯಾ ಕಪ್​ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಫೈನಲ್​ ಪಂದ್ಯದಲ್ಲಿ ಸಂಪೂರ್ಣವಾಗಿ ಪಾರಮ್ಯ ಮೆರೆದ ಲಂಕಾ ತಂಡ ಟ್ರೋಫಿ ಗೆದ್ದು ಸಂಭ್ರಮಿಸಿತು.

ಈ ಹಿಂದಿನ ಎಂಟು ಆವೃತ್ತಿಗಳಲ್ಲಿ ಭಾರತ 7 ಟ್ರೋಫಿ ಗೆದ್ದಿತ್ತು. ಅಂತೆಯೇ 8ನೇ ಕಪ್​ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದರೆ, ಅದಕ್ಕೆ ಲಂಕಾ ವನಿತೆಯರು ಅವಕಾಶ ಕೊಡಲಿಲ್ಲ. ಕಳೆದ 8 ಆವೃತ್ತಿಗಳಲ್ಲಿ 5 ಬಾರಿ ಫೈನಲ್​​ನಲ್ಲಿ ಪ್ರವೇಶಿಸಿದ್ದ ಲಂಕಾ ಕೊನೆಗೂ 6ನೇ ಪ್ರಯತ್ನದಲ್ಲಿ ಗೆಲುವಿನ ಕನಸು ನನಸಾಗಿಸಿಕೊಂಡಿದೆ.

ಪಲ್ಲೆಕೆಲೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 165 ರನ್ ಬಾರಿಸಿತು. ಪ್ರತಿಯಾಗಿ   ಲಂಕಾ 18.4 ಓವರ್​ಗಳಲ್ಲೇ ಕೇವಲ 2 ವಿಕೆಟ್​ ನಷ್ಟಕ್ಕೆ 167 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ಸವಾಲಿನ ಗುರಿ ಬೆನ್ನಟ್ಟಿದ ಶ್ರೀಲಂಕಾ 7 ರನ್ ಗಳಿಸಿದ್ದಾಗ ಮೊದಲ ವಿಕೆಟ್​ ಕಳೆದುಕೊಂಡು ಆತಂಕಕ್ಕೆ ಬಿತ್ತು. ಆರಂಭಿಕ ಹಿನ್ನಡೆ ಮಧ್ಯೆಯೂ ನಾಯಕಿ ಚಾಮರಿ ಅಟ್ಟಪಟ್ಟು ಭಾರತೀಯ ಬೌಲರ್​ಗಳನ್ನು ಹಿಮ್ಮೆಟ್ಟಿಸಿದರು. ಅವರಿಗೆ ಹರ್ಷಿತಾ ಸಮರವಿಕ್ರಮ ಬೆಂಬಲವಾಗಿ ನಿಂತರು. ಹೀಗಾಗಿ ಎರಡನೇ ವಿಕೆಟ್​ಗೆ ಲಂಕಾ ತಂಡ 87 ರನ್ ಗಳಿಸಿತು. ಇದೇ ವೇಳೆ ಚಾಮರಿ ಅರ್ಧ ಶತಕ ಬಾರಿಸಿದರು.

43 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್​ ಸಹಿತ 61 ರನ್ ಗಳಿಸಿದ್ದ ಚಾಮರಿ ಔಟಾದರೂ ಹರ್ಷಿತಾ ಗೆಲುವಿನ ಕಡೆಗೆ ಮುನ್ನುಗ್ಗಿದರು. ಹರ್ಮನ್ ಪ್ರೀತ್ ಪಡೆಯ ವಿರುದ್ಧ ಸವಾರಿ ಮಾಡಿ ಗೆಲುವಿನತ್ತ ಮುನ್ನಡೆಸಿ ಚೊಚ್ಚಲ ಟ್ರೋಪಿಗೆ ಮುತ್ತಿಟ್ಟರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ