October 5, 2024

ಚಿಕ್ಕಮಗಳೂರು ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್ ಮತ್ತು ಜಿಲ್ಲಾ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಜುಲೈ 26. 27. 28. ರಂದು ಮೂರು ದಿನಗಳ ಕಾಲ ಚಿಕ್ಕಮಗಳೂರು ಒಕ್ಕಲಿಗರ ಸಮುದಾಯ ಭವನ ಜ್ಯೋತಿನಗರದಲ್ಲಿ ರಾಷ್ಟ್ರಮಟ್ಟದ ಆಯ್ಕೆಗಾಗಿ ಕರ್ನಾಟಕ ಒಪನ್ ಅಂಡರ್ 13 ಹಾಗು ಬಾಲಕಿಯರಿಗಾಗಿ ರಾಜ್ಯ ಗರ್ಲ್ಸ್ ಅಂಡರ್ 13 ಫೀಡೆ ರಾಂಕಿಂಗ್ ಚೆಸ್ ಪಂದ್ಯಾವಳಿ ನಡೆಯತ್ತಿದ್ದು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 350ಕ್ಕೂ ಹೆಚ್ಚು ಆಟಗಾರರು ಭಾಗವಹಿಸುತ್ತಿದ್ದು. ಪಂದ್ಯಾವಳಿಯು ಕ್ಲಾಸಿಕ್ ಮಾದರಿಯಲ್ಲಿ ನಡೆಯಲಿದ್ದು. ಇಲ್ಲಿ ಅಯ್ಜೆಯಾದವರು ಮಹಾರಾಷ್ಟ್ರದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ಅರ್ಹತೆ ಪಡೆಯಲಿದ್ದಾರೆ. ದಿನಕ್ಕೆ 3 ರಂತೆ. 3 ದಿನಗಳ ಕಾಲ 9 ಪಂದ್ಯಗಳು ನಡೆಯಲಿದ್ದು. ಅಂತರಾಷ್ಟ್ರೀಯ ರೇಪರಿಗಳ ಸಮ್ಮುಖದಲ್ಲಿ ವಿಜೇತರ ಅಯ್ಕೆ ನಡೆಯಲಿದೆ ಎಂದು ಜಿಲ್ಲಾ ಚೆಸ್ ಅದ್ಯಕ್ಷ ನಯನ ತಳವಾರ ತಿಳಿಸಿದರು

ಮಂಗಳವಾರ ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು : ಹದಿಮೂರು ವರ್ಷ ವಯೋಮಿತಿ ಒಳಗಿನ ಫೀಡೆ ರೇಟಿಂಗ್ ಪಂದ್ಯಾವಳಿ ಮೋದಲ ಭಾರಿಗೆ ಜಿಲ್ಲೆಯಲ್ಲಿ ನಡೆಯುತ್ತಿದ್ದು. ಎರ್ ಡೆಕ್ಕನ್ ವಿಮಾನ ಖ್ಯಾತಿಯ ಕನ್ನಡಿಗ ಕ್ಯಾಪ್ಟನ್‌ ಗೋಪಿನಾಥ್ ರವರು ಪಂದ್ಯಾವಳಿ ಉದ್ಘಾಟಿಸಲಿದ್ದಾರೆ ಎಂದರು.

ಅಸೋಸಿಯೇಷನ್ ಉಪಾದ್ಯಕ್ಷ ರಘು ಜನ್ನಾಪುರ ಮಾತನಾಡಿ. ಈ ಪಂದ್ಯಾವಳಿಯಲ್ಲಿ 72 ಸಾವಿರ ನಗದು ಸೇರಿದಂತೆ 40 ಟ್ರೋಪಿಗಳನ್ನು ನೀಡಲಿದ್ದು. ಭಾಗವಹಿಸುವ ಆಟಗಾರರಿಗೆ ಫಿಡೆ (fide) ರೇಟಿಂಗ್ ಕೂಡ ದೊರೆಯಲಿದೆ. ಕರ್ನಾಟಕದ ನಾನಾ ಭಾಗದಿಂದ ಗ್ರಾಂಡ್ ಮಾಸ್ಟರ್ ಹಾಗೂ ಇಂಟರ್ನ್ಯಾಷನಲ್ ಮಾಸ್ಟರ್ ಆಕಾಂಕ್ಷಿತ ಸ್ಪರ್ಧಾರ್ಥಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ ಪ್ರಾಣೇಶ ಉದ್ಘಾಟಿಸಲಿದ್ದು ಸಂಸದ ಕೋಟಾ ಶ್ರೀನಿವಾಸ ಪುಜಾರಿ. ಶಾಸಕರಾದ  ನಯನ ಮೋಟಮ್ಮ. ಹೆಚ್ ಡಿ ತಮ್ಮಯ್ಯ. ವಿಧಾನಪರಿಷತ್ ಸದಸ್ಯರಾದ ಸಿ.ಟಿ ರವಿ. ಎಸ್.ಎಲ್. ಭೋಜೆಗೌಡ, ಡಾ.ದನಂಜಯ ಸರ್ಜಿ.  ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ರಾಜ್ಯ ಅಸೋಸಿಯೇಷನ್ ಸಹ ಕಾರ್ಯದರ್ಶಿ ಗಿರೀಶ್ ಮಣ್ಣಿಕೆರೆ. ಪ್ರಸನ್ನಕುಮಾರ್. ಶಿವಕಾಶಿ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ