October 5, 2024

ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಬುಧವಾರ 19 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕ ವಿಮಾನವು ಟೇಕಾಫ್ ಸಮಯದಲ್ಲಿ ಪತನಗೊಂಡಿದ್ದು, 18 ಮಂದಿ ಮೃತಪಟ್ಟು ಪೈಲಟ್ ಮಾತ್ರ ಬದುಕುಳಿದಿದ್ದಾರೆ.

ವಿಮಾನವು ದೇಶೀಯ ಶೌರ್ಯ ಏರ್‌ಲೈನ್‌ಗೆ ಸೇರಿದ್ದು, ರಾಜಧಾನಿ ಕಠ್ಮಂಡುವಿನಿಂದ ಪೋಖರಾದ  ಪಟ್ಟಣಕ್ಕೆ ತೆರಳುತ್ತಿತ್ತು, ಇಂದು ಬೆಳಗ್ಗೆ 11:00 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.

ಶೌರ್ಯ ಏರ್‌ಲೈನ್ಸ್ ವಿಮಾನವು ಪರೀಕ್ಷಾ ಹಾರಾಟಕ್ಕಾಗಿ ಇಬ್ಬರು ಸದಸ್ಯರನ್ನೊಳಗೊಂಡ ಸಿಬ್ಬಂದಿ ಮತ್ತು ಕಂಪನಿಯ 17 ಸಿಬ್ಬಂದಿಯನ್ನು ಪರೀಕ್ಷಾರ್ಥ ಉಡಾವಣೆಯಾಗಿ ಹೊತ್ತೊಯ್ಯುತ್ತಿತ್ತು . ವಿಮಾನದ ಪೈಲಟ್‌ನನ್ನು ರಕ್ಷಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನೇಪಾಳಿ ಪೊಲೀಸ್ ವಕ್ತಾರ ಡಾನ್ ಬಹದ್ದೂರ್ ಕರ್ಕಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ವಿಮಾನವು ಹಿಮಾಲಯ ಗಣರಾಜ್ಯದ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾದ ಕಠ್ಮಂಡು ಮತ್ತು ಪೋಖರಾ ನಡುವಿನ ನೇಪಾಳದ ಅತಿ ಹೆಚ್ಚು ಜನಸಂಚಾರವಿರುವ ವಿಮಾನ ಮಾರ್ಗದಲ್ಲಿ ಹಾರಲು ಟೇಕಾಪ್ ಆಗಿತ್ತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ