October 5, 2024

ಮೂಡಿಗೆರೆ ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗಾಗುವ ಅನಾನುಕೂಲ ಹಾಗೂ ವಿವಿಧ ಪ್ರಕರಣ ತಡೆಗಟ್ಟುವ ಬಗ್ಗೆ ಸೋಮವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐ ಶ್ರೀನಾಥ್ ರೆಡ್ಡಿ ಅವರ ನೇತೃತ್ವದಲ್ಲಿ ಪತ್ರಕರ್ತರೊಂದಿಗೆ ಸಮಾಲೋಚನೆ ಸಭೆ ನಡೆಯಿತು.

ಸಭೆಯಲ್ಲಿ ಪಟ್ಟಣದ ಕೆ.ಎಂ.ರಸ್ತೆ ಹೊರತುಪಡಿಸಿದರೆ ಬಹುತೇಕ ರಸ್ತೆಯಲ್ಲಿ ಪಾರ್ಕಿಂಗ್ ಸಮಸ್ಯೆ ಪರಿಹಾರ ದೊರಕಿದೆ. ಆದರೆ ಕೆ.ಎಂ.ರಸ್ತೆ ಬದಿಯಲ್ಲಿ ಗುಂಡಿಗಳು, ಕೆಸರು ಮಣ್ಣಿನಿಂದಾಗಿ ಪಾರ್ಕಿಂಗ್ ಸಮಸ್ಯೆ ಹಾಗೂ ಪಾದಾಚಾರಿಗಳು ನಡೆಯಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಪ.ಪಂ.ಗೆ ಪತ್ರ ಬರೆದು ಸಮಸ್ಯೆ ಬಗೆಹರಿಸಬೇಕು. ಕಾನೂನು ಬಾಹೀರವಾಗಿ ವಾಹನಗಳಲ್ಲಿ ಅಳವಡಿಸಿರುವ ಎಲ್‍ಇಡಿ ಲೈಟ್ ತೆರವುಗೊಳಿಸಬೇಕು. ಎಲ್ಲಾ ಶಾಲೆ ಹಾಗೂ ಬಸ್ ನಿಲ್ದಾಣದ ಬಳಿ ಸಿಸಿ ಕ್ಯಾಮರ ಅಳವಡಿಸುವ ಜತೆಗೆ ನಿರಂತರವಾಗಿ ಪೊಲೀಸ್ ಬೀಟ್ ಹಾಕಬೇಕು. ಈ ಪ್ರದೇಶದಲ್ಲಿ ಮಾದಕ ವಸ್ತು ಬಳಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಸ್ತೆಯಲ್ಲಿ ಪ್ರತಿದಿನ ತಿರುಗಾಡುವ ಬೀಡಾಡಿ ಜಾನುವಾರುಗಳನ್ನು ಹಿಡಿದು ಸಾಗಿಸಬೇಕು. ಅಪ್ರಾಪ್ತ ಬಾಲಕರು ಕಾರು ಹಾಗೂ ಬೈಕ್ ಓಡಿಸುವುದಕ್ಕೆ ಕಡಿವಾಣ ಹಾಕಬೇಕು. ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಭೆ ಕರೆದು ಪಟ್ಟಣದಲ್ಲಿ ಕಾನೂನು ಬಾಹೀರ ಚಟುವಟಿಕೆ ಬಗ್ಗೆ ಗಂಭೀರ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕೆಂದು ಪತ್ರಕರ್ತರು ಸಲಹೆ ನೀಡಿದರು.

ಬಳಿಕ ಪಿಎಸ್‍ಐ ಶ್ರೀನಾಥ್ ರೆಡ್ಡಿ ಮಾತನಾಡಿ, ಈಗಾಗಲೇ ಕೆ.ಎಂ.ರಸ್ತೆ ಹೊರತುಪಡಿಸಿದರೆ ಇತರೇ ರಸ್ತೆಗಳಲ್ಲಿ ತಿಂಗಳುಗಟ್ಟಲೆ ವಾಹನ ನಿಲ್ಲಿಸಿ ಜನರಿಗೆ ತೊಂದರೆ ಕೊಡುತ್ತಿದ್ದರು. ಎಲ್ಲಾ ವಾಹನಗಳಿಗೆ ದಂಡ ವಿಧಿಸುವ ಮೂಲಕ ಸಮಸ್ಯೆ ಬಗೆರಿಸಲಾಗಿದ್ದು, ನಿತ್ಯ ಬೀಟ್ ಕಾರ್ಯ ನಡೆಯುತ್ತಿದೆ. ಟ್ರಾಕ್ಟರ್ ಟ್ರೈಲರ್ ಹಿಂದೆ 3ಎಂ ರೇಡಿಯಂ ಸ್ಟಿಕರ್ ಹಾಕದೇ ಅಪಘಾತ ಸಂಭವಿಸುತ್ತಿದ್ದು, ಟ್ರಾಕ್ಟರ್ ಮಾಲೀಕರಿಗೆ ಟ್ರೈಲರ್‍ಗಳಿಗೆ ಸ್ಟಿಕ್ಕರ್ ಅಳವಡಿಸಲು ಸೂಚಿಸಲಾಗಿದೆ. ಶಾಲೆ ಹಾಗೂ ಬಸ್ ನಿಲ್ದಾಣದಲ್ಲಿ ಪೊಲೀಸ್ ಬೀಟ್ ನಿರಂತರ ನಡೆಯುತ್ತಿದೆ. ಮಾದಕ ವಸ್ತು ಸೇವಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಕಾರ್ಯ ನಡೆಯುತ್ತಿದೆ. ಪಟ್ಟಣದಲ್ಲಿ ಯಾವುದೇ ಕಾನೂನು ಬಾಹೀರ ಚಟುವಟಿಕೆಗಳು ನಡೆದರೆ ಸಾರ್ವಜನಿಕರು ನೇರವಾಗಿ ಪೊಲೀಸರ ಗಮನಕ್ಕೆ ತರಬೇಕು. ಮಾಹಿತಿದಾರರ ಹೆಸರು ಗೌಪ್ಯವಾಗಿಟ್ಟು ಅಕ್ರಮ ತಡೆಗಟ್ಟುವ ಕೆಲಸ ಮಾಡಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ