October 5, 2024

ಚಿಕ್ಕಮಗಳೂರು ನಗರದಲ್ಲಿ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೀವ್ರ ತೊಂದರೆ ನೀಡುತ್ತಿದ್ದ ಬೀಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಬಿಡುವ ಕಾರ್ಯಾಚರಣೆ ನಡೆಸಲಾಯಿತು. ನಗರದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಇತರೆ ವಿವಿಧ ಇಲಾಖೆಗಳ ಸಿಬ್ಬಂದಿ ಸೇರೆ ಭಾನುವಾರ ಬಿಡಾಡಿ ಜಾನುವಾರುಗಳನ್ನು ಬಂಧಿಸಿ ಗೋಶಾಲೆಗೆ ಅಟ್ಟುವ ಮೂಲಕ ದನಗಳ ಮಾಲೀಕರಿಗೆ ಬಿಸಿ ಮುಟ್ಟಿಸಿದರು.

ಪೊಲೀಸ್ ವರಿಷ್ಠಾಕಾರಿ ವಿಕ್ರಂ ಅಮಟೆ ನೇತೃತ್ವದಲ್ಲಿ ನಗರಸಭೆ, ಪಶುಸಂಗೋಪನಾ ಇಲಾಖೆ, ಎಸ್‌ಪಿಸಿ, ಅಗ್ನಿಶಾಮಕದಳ ಮತ್ತಿತರೆ ಸಂಘಸಂಸ್ಥೆಗಳ ಪದಾಕಾರಿಗಳು ಬಿಡಾಡಿ ದನಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ನಗರದ ಎಐಟಿ ವೃತ್ತದಿಂದ ಎಪಿಎಂಸಿ, ನಗರದ ವಿವಿಧ ಬಡಾವಣೆಗಳಲ್ಲಿ ಬೀದಿಬದಿಯಲ್ಲಿ ಬಿಟ್ಟಿದ್ದ ದನಗಳನ್ನು ಹಿಡಿದು ಇಂದಾವರ ಗೋಶಾಲೆಗೆ ಸಾಗಿಸಿದರು.

ದನಗಳ ಹಿಡಿಯುವ ಕಾರ್ಯಾಚರಣೆ ನಡೆಸುತ್ತಾರೆ ಎಂಬ ಮಾಹಿತಿ ಮೊದಲೇ ಗೊತ್ತಿದ್ದರಿಂದ ದನಗಳ ಮಾಲೀಕರು ಇಂದು ಹೆಚ್ಚಾಗಿ ಬೀದಿಗೆ ದನಗಳನ್ನು ಬಿಟ್ಟಿರಲಿಲ್ಲ. ಹೀಗಾಗಿ ಮಧ್ಯಾಹ್ನದ ವೇಳೆಗೆ 3 ಹಸುಗಳನ್ನು ಮಾತ್ರ ಹಿಡಿದು ಸಾಗಿಸಲಾಯಿತು.

ಈ ಸಂದರ್ಭ ಎಸ್ಪಿ ವಿಕ್ರಂ ಅಮಟೆ ಮಾತನಾಡಿ, ಯಾರೂ ದನಗಳನ್ನು ರಸ್ತೆಗೆ ಬಿಡಬಾರದು. ಇದರಿಂದ ರಸ್ತೆ ಅಪಘಾತಗಳಾಗುತ್ತಿವೆ. ಎರಡು ಮಂದಿ ಅಸುನೀಗಿದ್ದಾರೆ. ಜತೆಗೆ ಜಾನುವಾರುಗಳು ಕೂಡ ಸತ್ತಿವೆ. ಇಂದು ಹಿಡಿದ ದನಗಳನ್ನು ಇಂದಾವರ ಗೋಶಾಲೆಗೆ ಸಾಗಿಸಿದ್ದು ಅಲ್ಲಿ ಮಾಲೀಕರು ಮುಚ್ಚಳಿಕೆ ಬರೆದುಕೊಟ್ಟು ದಂಡ ಕಟ್ಟಿ ಹಸುಗಳನ್ನು ಬಿಡಿಸಿಕೊಂಡು ಹೋಗಬಹುದು.

ನಾಳೆಯಿಂದ ಬಿಟ್ಟಲ್ಲಿ ಕ್ರಿಮಿನಲ್ ಕೇಸ್ ದಾಖಲು ಮಾಡುವ ಜತೆಗೆ ಮನೆಯಲ್ಲಿದ್ದ ಹಸುಗಳನ್ನು ಸೀಸ್ ಮಾಡಲಾಗುವುದು ಎಂದು ಎಚ್ಚರಿಸಿದರು. ಕರ್ನಾಟಕ ಕೆಟಲ್ ಟ್ರಸ್‌ಪಾಸ್ ಆಕ್ಟ್ 1966 ಸೆಕ್ಷನ್ 7, 8, 9 ಅಡಿಯಲ್ಲಿ ಬಿಡಾಡಿ ದನಗಳನ್ನು ಹಿಡಿಯಲು ನಗರಸಭೆಗೆ ಅನುಮತಿ ಇದೆ. ಸಾರ್ವಜನಿಕರು ಇನ್ನುಮುಂದೆ ತಮ್ಮ ಜಾನುವಾರುಗಳನ್ನು ಕಟ್ಟಿ ಸಾಕಬೇಕು ಎಂದು ಮನವಿ ಮಾಡಿದರು.

ನಗರಸಭೆ ಆಯುಕ್ತ ಬಸವರಾಜು ಮಾತನಾಡಿ, ಇಂದಾವರ ಕಾಮಧೇನು ಗೋಶಾಲೆಗೆ ದನಗಳನ್ನು ಹಿಡಿದು ಸಾಗಿಸಬೇಕು ಎಂದು ಟೆಂಡರ್ ಕರೆದು ಕಾರ್ಯಾದೇಶ ನೀಡಿದ್ದೇವೆ. ಇಂದು ಪೊಲೀಸ್‌ವರಿಷ್ಟಾಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ. ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದೇವೆ. ಮನೆಯಲ್ಲೇ ದನಗಳನ್ನು ಕಟ್ಟಿ ಸಾಕಿ ಎಂದು ಹೇಳಿದ್ದೇವೆ.

ಇಂದು ದಂಡ ಹಾಕಿದ್ದೇವೆ. ನಾಳೆಯಿದ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ. 1 ರಿಂದ 50 ಸಾವಿರದವರೆಗೆ ದಂಡ ಹಾಕಲು ಅವಕಾಶವಿದೆ. ಇಲಿಯವರೆಗೆ 48 ಹಸುಗಳನ್ನು ಹಿಡಿಸಿ ಬಿಟ್ಟಿದ್ದೇವೆ. ಇಂದು 3 ದನಗಳನ್ನು ಹಿಡಿದಿದ್ದೇವೆ ಎಂದರು.

ಅನಿಮಲ್ ಕೇರ್ ಟ್ರಸ್ಟ್ ಅಧ್ಯಕ್ಷೆ ನಳೀನಾ ಡಿಸಾ ಮಾತನಾಡಿ, ಬೀದಿಯಲ್ಲಿರುವ ದನಗಳಿಂದ ಅಪಘಾತಗಳಾಗುತ್ತಿವೆ. ಗಾಯಾಳು ದನವನ್ನು ಮಾಲೀಕರು ಪುನಾ ಸ್ವೀಕರಿಸುತ್ತಿಲ್ಲ. ಹೀಗಾಗಿ ನಾವೇ ಚಿಕಿತ್ಸೆ ಕೊಡಿಸಿ ಗೋಶಾಲೆಗೆ ಬಿಡುತ್ತೇವೆ. ಆಕ್ಸಿಡೆಂಟ್‌ಗಳು ಆಗಬಾರದು ಎಂಬ ಕಾರಣಕ್ಕೆ ಇಂದು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು. ಪೊಲೀಸ್, ನಗರಸಭೆ ಸಿಬ್ಬಂದಿ, ಪಶುಸಂಗೋಪನಾ, ಅಗ್ನಿಶಾಮಕದಳ, ಅಡ್ವೆಂಚರ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರು,ಎಸ್‌ಪಿಸಿ ಸದಸ್ಯರು ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ