October 5, 2024

ಸಂಸ್ಥೆ ಮಾಡುವ ಯಾವುದೇ ಕಾರ್ಯಕ್ರಮವಾದರೂ ಅದು ಸಮಾಜಕ್ಕೆ ಒಳಿತಾಗುವಂತಾಗಿರಬೇಕೆಂದು ರೋಟರಿ ಸಂಸ್ಥೆಯ ಪಿಡಿಜಿ ಭರ್ತೇಶ್ ಅದಿರಾಜ್ ಹೇಳಿದರು.

ಅವರು ಇತ್ತೀಚೆಗೆ ಮೂಡಿಗೆರೆ ತಾಲ್ಲೂಕು ಗೋಣಿಬೀಡಿನಲ್ಲಿ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖ್ಯವಾಗಿ ಸ್ಥಳೀಯ ಸಮಸ್ಯೆಗೆ ಹೆಚ್ಚು ಒತ್ತು ನೀಡುವ ಮೂಲಕ ಅದನ್ನು ಪರಿಹರಿಸುವ ಪ್ರಯತ್ನ ಮಾಡಬೇಕು. ಪೋಷಕರು ಮಕ್ಕಳನ್ನು ಸಂಸ್ಕøತಿ ಹಾಗೂ ಪ್ರಕೃತಿಯಿಂದ ದೂರ ಇಟ್ಟು ಬೆಳೆಸುತ್ತಿರುವುದರಿಂದ ಭವಿಷ್ಯದಲ್ಲಿ ಅಪಾಯ ಎದುರಿಸಬೇಕಾಗುತ್ತೆದೆ. ಮೊಬೈಲ್ ಬಳಕೆ ಅಧಿಕವಾಗಿ ಮಾಡುತ್ತಿರುವುದರಿಂದ ಕಣ್ಣು ಹಾಗೂ ಆರೋಗ್ಯದ ಸಮಸ್ಯೆ ಮಕ್ಕಳಲ್ಲಿ ಕಂಡು ಬರುತ್ತಿದೆ. ಈ ಬಗ್ಗೆ ಜಾಗೃತರಾಗಬೇಕಿದೆ. ನಿರ್ಗಮಿತ ಅಧ್ಯಕ್ಷರ ಅವದಿಯಲ್ಲಿ ಉತ್ತಮ ಜನಪರ ಕಾರ್ಯಕ್ರಮಗಳು ನಡೆದಿದೆ. ವಿಶೇಷವಾಗಿ ಮಣ್ಣಿನ ಪರೀಕ್ಷೆ ಅರೋಗ್ಯ, ಕೃಷಿ ಬಗ್ಗೆ ಮಾಹಿ, ಬಸ್ ನಿಲ್ದಾಣ ನಿರ್ಮಾಣ ಸೇರಿದಂತೆ ಹಲವಾರು ಕಾರ್ಯಗಳು ಪ್ರಸಾಂಸೆಯವಾಗಿದೆ ಎಂದರು.

ಅಸಿಸ್ಟೆಂಟ್ ಗವರ್ನರ್ ಅರುಣ್ ರಕ್ಷಿದಿ ಮಾತನಾಡಿ, ಒಂದು ಸಂಸ್ಥೆ ನಡೆಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಹಿಂದಿನ ಅಧ್ಯಕ್ಷರ ಶ್ರಮದಿಂದ ಗೋಣಿಬೀಡು ರೋಟರಿ ಸಂಸ್ಥೆ 27 ವಸಂತವನ್ನು ಯಶಸ್ವಿಯಾಗಿ ಪೂರೈಸಿರುವುದು ಶ್ಲಾಘನೀಯ. ನೂತನ ಅಧ್ಯಕ್ಷರು ಈ ಬಾರಿ ಲಯನ್ಸ್ ಜಿಲ್ಲೆಯಿಂದ ಘೋಷಿಸಿರುವ ನಾಲ್ಕು ಪ್ರಮುಖ ಯೋಜನೆಯನ್ನು ಅಚ್ಚುಕಟ್ಟಾಗಿ ಕಾರ್ಯಘಾತಗೊಳಿಸಬೇಕು. ಅಲ್ಲದೆ ಈ ರೋಟರಿ ಸಂಸ್ಥೆಗೆ ಇನ್ನು ಹೆಚ್ಚಿನ ಸದಸ್ಯರನ್ನು ಸೇರ್ಪಡೆಗೊಳಿಸಿ ಸಂಸ್ಥೆಯನ್ನು ಉನ್ನತ ಮಟ್ಟದಲ್ಲಿ ಕೊಂಡೊಯ್ಯಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆ ನಿರ್ಗಮಿತ ಅಧ್ಯಕ್ಷ ಸಂದೀಪ್ ವಹಿಸಿದ್ದರು. ಜೋನ್ ಲೆಪ್ಟನೆಂಟ್ ವೈ.ಡಿ.ಲೋಕೇಶ್, ನಿಕಟಪೂರ್ವ ಕಾರ್ಯದರ್ಶಿ ನಯನ ಗೋಣಿಬಿಡು, ಜೆ.ಎಸ್. ರಘು ಮತ್ತಿತರರಿದ್ದರು.

ಪ್ರಸನ್ನ
ರತನ್ ಕುಮಾರ್

ಸಂಸ್ಥೆಯ ನೂತನ ಅಧ್ಯಕ್ಷರಾಗಿ ಹೆಚ್.ಎಸ್. ಪ್ರಸನ್ನ ಚಂದ್ರಾಪುರ, ಕಾರ್ಯದರ್ಶಿಯಾಗಿ ರತನ್ ಕುಮಾರ್ ಮರಾಬೈಲ್  ಅಧಿಕಾರ ವಹಿಸಿಕೊಂಡರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ