October 5, 2024

ಪಾಕಿಸ್ತಾನ ತಂಡವನ್ನು ಮಣಿಸಿದ ಇಂಡಿಯಾ ಚಾಂಪಿಯನ್ಸ್ ತಂಡ ಪ್ರಥಮ ಆವೃತ್ತಿಯ ಲೆಜೆಂಡ್ಸ್​ ವಿಶ್ವ ಕಪ್​ನಲ್ಲಿ   ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದು ಕ್ರಿಕೆಟ್​ ದೇಶಗಳ ನಿವೃತ್ತ ಆಟಗಾರರನ್ನು ಒಳಗೊಂಡಿರುವ ಟೂರ್ನಿಯಾಗಿದೆ. ಮೊದಲ ಆವೃತ್ತಿಯಲ್ಲಿ ಗೆದ್ದ ಯುವರಾಜ್ ಸಿಂಗ್​ ನೇತೃತ್ವದ ಭಾರತ ತಂಡ 2007ರ ಟಿ20 ವಿಶ್ವ ಕಪ್​ ಟೂರ್ನಿಯನ್ನು ನೆನಪಿಸಿದೆ. ಟಿ20 ವಿಶ್ವ ಕಪ್​ನ ಮೊದಲ ಆವೃತ್ತಿಯಲ್ಲೇ ಧೋನಿ ನೇತೃತ್ವದ ಭಾರತ ತಂಡ ಚಾಂಪಿಯನ್ ಆಗಿತ್ತು. ಅಲ್ಲೂ ಫೈನಲ್ ಗಲ್ಲಿ ಪಾಕಿಸ್ತಾನವನ್ನೇ ಭಾರತ ರೋಚಕವಾಗಿ ಸೋಲಿಸಿತ್ತು.

ಇಂಗ್ಲೇಂಡ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಪರ ಬ್ಯಾಟಿಂಗ್​ನಲ್ಲಿ ಅಂಬಾಟಿ ರಾಯುಡು (50) ಅರ್ಧ ಶತಕ ಬಾರಿಸಿ ಮಿಂಚಿದರೆ ಯೂಸುಫ್ ಪಠಾಣ್​ 16 ಎಸೆತಕ್ಕೆ 30 ರನ್ ಬಾರಿಸಿ ಮಿಂಚಿದರು. ಯುವರಾಜ್ ಸಿಂಗ್​ 15  ರನ್ ಬಾರಿಸಿದರು. ಬೌಲಿಂಗ್​ನಲ್ಲಿ ಅನುರೀತ್ ಸಿಂಗ್ ಮೂರು ವಿಕೆಟ್ ಪಡೆದರು.

ಟಾಸ್ ಗೆದ್ದ ಪಾಕ್ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 156 ರನ್ ಗಳಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ ಇನ್ನೂ ಐದು ಎಸೆತ ಬಾಕಿ ಇರುವಂತೆಯೇ 5 ವಿಕೆಟ್ ನಷ್ಟಕ್ಕೆ 159 ರನ್ ಬಾರಿಸಿ ಗೆಲುವು ಸಾಧಿಸಿತು.

ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಭಾರತ ತಂಡ ಉತ್ತಮ ಆರಂಭವನ್ನು ಪಡೆಯಿತು. ಮೊದಲ ವಿಕೆಟ್​ಗೆ 34 ರನ್​ ಬಾರಿಸಿತು. ಪ್ರಮುಖವಾಗಿ ಅಂಬಾಟಿ ರಾಯುಡು 30 ಎಸೆತಕ್ಕೆ 50 ರನ್ ಬಾರಿಸಿ ಭಾರತ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟರು. ಆದರೆ, ಮತ್ತೊಬ್ಬ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ 10 ರನ್​ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ಸುರೇಶ್ ರೈನಾ ಕೂಡ 4 ರನ್​ಗೆ ವಿಕೆಟ್​ ಒಪ್ಪಿಸಿ ಆತಂಕ ತಂದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಗುರುಕೀರತ್​ ಸಿಂಗ್ ಮಾನ್​ 33 ಎಸೆತಕ್ಕೆ 34 ರನ್ ಬಾರಿಸಿ ಆಧಾರವಾದರು. ಕೊನೆ ಹಂತದಲ್ಲಿ ಯೂಸುಫ್ ಪಠಾಣ್​ ಭರ್ಜರಿಯಾಗಿ ಬ್ಯಾಟ್ ಬೀಸಿ 30 ರನ್ ಬಾರಿಸಿ ಗೆಲುವು ತಂದುಕೊಟ್ಟರು.

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವೂ ಉತ್ತಮ ಮೊತ್ತ ಪೇರಿಸಿತು. ಕಮ್ರಾನ್ ಅಕ್ಮಲ್​ 24 ರನ್ ಬಾರಿಸಿದರೆ ಶ್ರಜೀಲ್ ಖಾನ್ 12 ರನ್ ಬಾರಿಸಿದರು. ಶೋಯೆಬ್ ಮಕ್ಸೂದ್ 21 ರನ್ ಗಳಿಸಿದರೆ ಶೋಯೆಬ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 36 ಎಸೆತಕ್ಕೆ 41 ರನ್ ಗಳಿಸಿದರು. ಅವರ ವೇಗದ ರನ್​ ಗಳಿಕೆಯಿಂದಾಗಿ ಪಾಕಿಸ್ತಾನ ಉತ್ತಮ ಮೊತ್ತದತ್ತ ಸಾಗಿತು. ಮಿಸ್ಬಾ ಉಲ್ ಹಕ್​ 18 ರನ್ ಬಾರಿಸಿದ ಬಳಿಕ ಗಾಯಗೊಂಡು ನಿವೃತ್ತರಾದರು. ಕೊನೆಯಲ್ಲಿ ಸೋಹೈಲ್ ತನ್ವೀರ್ 9 ಎಸೆತಕ್ಕೆ 19 ರನ್ ಬಾರಿಸಿದರು. ಭಾರತ ಪರ ಬೌಲಿಂಗ್​ನಲ್ಲಿ ಅನುರೀತ್ ಸಿಂಗ್​ 3 ವಿಕೆಟ್​ ಪಡೆದರೆ, ವಿನಯ್ ಕುಮಾರ್​, ಪವನ್ ನೇಗಿ ಹಾಗೂ ಇರ್ಪಾನ್ ಪಠಾಣ್​ ತಲಾ ಒಂದು ವಿಕೆಟ್ ತಮ್ಮದಾಗಿಸಿಕೊಂಡರು.

ಜುಲೈ 3 ರಿಂದ ಆರಂಭವಾಗಿದ್ದ ನಿವೃತ್ತ ಆಟಗಾರರ ಈ ಪಂದ್ಯಾವಳಿಯಲ್ಲಿ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಇಂಗ್ಲೇಡ್ ಮತ್ತು ದಕ್ಷಿಣ ಆಪ್ರೀಕಾ ತಂಡಗಳು ಭಾಗವಹಿಸಿದ್ದವು.

ಮೊದಲ ಸೆಮಿಫೈನಲ್ ನಲ್ಲಿ ಪಾಕಿಸ್ತಾನ ವೆಸ್ಟ್ ಇಂಡೀಸ್ ತಂಡವನ್ನು ಹಾಗೂ ಭಾರತ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದವು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ