October 5, 2024

ಕಳಸ ರೋಟರಿ ಸಂಸ್ಥೆಯ 25ನೇ ಅಧ್ಯಕ್ಷರಾಗಿ ಕೆ.ಆರ್.ಪ್ರಭಾಕರ್ ಹಾಗೂ ಇನ್ನರ್ ವೀಲ್ ಅಧ್ಯಕ್ಷೆಯಾಗಿ ನಳಿನಾಕ್ಷಿ ಪ್ರಸನ್ನ ಶನಿವಾರ ಅಧಿಕಾರ ಸ್ವೀಕರಿಸಿದರು.

ಕೆ.ಆರ್. ಪ್ರಭಾಕರ್

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತರಾದ ಜಿ.ಭೀಮೇಶ್ವರ ಜೋಷಿ : ಸಂಸ್ಥೆ ಆರೋಗ್ಯಪೂರ್ಣವಾಗಿದ್ದಾಗ ಸಮಾಜ ಅರ್ಥಪೂರ್ಣವಾಗಿರುತ್ತದೆ. ಸಂಸ್ಥೆಗಳು ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಸಮಾಜ ರಚನಾತ್ಮಕವಾಗಿ ಬದಲಾವಣೆಗಳು ಆಗುತ್ತವೆ. ಈ ನಿಟ್ಟಿನಲ್ಲಿ ಕಳಸ ರೋಟರಿ ಸಂಸ್ಥೆ ಕಳೆದ 24 ವರ್ಷಗಳಿಂದ ಸಾಕಷ್ಟು ಸಮಾಜಮುಖಿಯಾಗಿ ನಿಷ್ಠೆಯಿಂದ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಈ ವರ್ಷ ಕಳಸ ರೋಟರಿ ಕ್ಲಬ್ 25ನೇ ವರ್ಷದ ವರ್ಷಾಚರಣೆಯಲ್ಲಿ ಇರುವುದು ಸಂತಸ ತಂದಿದೆ ಎಂದರು.

ಕಳಸ ರೋಟರಿ ಸಂಸ್ಥೆಯ 25ನೇ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಆರ್.ಪ್ರಭಾಕರ್ ಅಧಿಕಾರ ಸ್ವೀಕರಿಸಿದರು. ಸಹಾಯಕ ಗವರ್ನರ್ ನಟೇಶ್ ಹೆಚ್.ಎಸ್ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿದರು. ಪಿ.ಎ.ಕುಮಾರಸ್ವಾಮಿ ಕಾರ್ಯದರ್ಶಿ, ಪಣೀಶ್ ಖಜಾಂಚಿ, ಮಹೇಂದ್ರ ಹೆಚ್.ಜಿ, ಅಭಿನಂದನ್ ಬಳ್ಳಾಲ್,ರಾಘವ್, ಬ್ರಹ್ಮದೇವ, ರಿತೇಶ್, ಸಂದೀಪ್, ಸುಗಮ್, ಕಿರಣ್ ಶೆಟ್ಟಿ, ಕೆ.ಕೆ.ಬಾಲಕೃಷ್ಣ ಭಟ್, ವಿಕ್ರಮ್ ಪ್ರಭು, ಸಂತೋಷ್ ಪೂಜಾರಿ, ರಾಜಗೋಪಾಲ್ ಜೋಷಿ, ಭಾಸ್ಕರ್ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು.

ಇನ್ನರ್‍ವೀಲ್ ಸಂಸ್ಥೆಯ ಅಧ್ಯಕ್ಷರಾಗಿ ನಳಿನಾಕ್ಷಿ,ಕಾರ್ಯದರ್ಶಿ ಮಾಳವಿಕ, ಖಜಾಂಚಿ ವೈಶಾಲಿ ಜೋಷಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಮಿತ ಕಿರಣ್ ಶೆಟ್ಟಿ, ಶ್ರೀವಾಣಿ, ಉಷಾ ಕುಮಾರ್, ನಿತ್ಯಾ ಸಂದೀಪ್, ಲೀಲಾ ಶ್ರೀಕಾಂತ್, ಕವಿತ ಪ್ರಕಾಶ್ ಅಧಿಕಾರ ಸ್ವೀಕರಿಸಿದರು. ನವೀನ್ ಲಾಯ್ಡ್ ಮಿಸ್ಕಿತ್,  ಇನ್ನರ್ ವೀಲ್ ನಿರ್ಗಮಿತ ಅಧ್ಯಕ್ಷೆ ಸಂಧ್ಯಾ ರಿತೇಶ್ ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ