October 5, 2024

ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪದ ಬಗ್ಗಸಗೋಡಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಉಚಿತ ಕಣ್ಣಿನ ತಪಾಸಣೆ ನಡೆಸಲಾಯಿತು.

ದೇಹದಲ್ಲಿ ಕಣ್ಣುಗಳು ಜೀವನದ ಬೆಳಕು ಇದ್ದಂತೆ.ಅವುಗಳನ್ನು ಸಂರಕ್ಷಣೆ ಮಾಡುವುದರಿಂದ ನಾವು ನಮ್ಮ ಜೀವನ ಸಂರಕ್ಷಿಸಲು ಸಾಧ್ಯ ಎಂದು  ಬಣಕಲ್ ನೇತ್ರಾಧಿಕಾರಿ ಬಿ.ಎಲ್.ರಂಗನಾಥ್ ತಿಳಿಸಿದರು.

ಬಣಕಲ್ ಸಮೀಪದ ಬಗ್ಗಸಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಪುಚಿನ್ ಕೃಷಿಕ ಸೇವಾಕೇಂದ್ರ, ವಿಮುಕ್ತಿ ಬಣಕಲ್ ವತಿಯಿಂದ ನಡೆದ ಉಚಿತ ಕಣ್ಣಿನ ತಪಾಸಣೆ ಹಾಗೂ ನೇತ್ರಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಣ್ಣಿನ ಸಂರಕ್ಷಣೆ ಮಾಡಲು ಎ’ವಿಟಮಿನ್ ಇರುವ ಪಪ್ಪಾಯಿ, ಕ್ಯಾರೆಟ್, ಸೊಪ್ಪು ಮತ್ತಿತರ ತರಕಾರಿ ಸೇವಿಸಿ ದೃಷ್ಟಿ ದೋಷ ಬರದಂತೆ ಕಾಪಾಡಿಕೊಳ್ಳಬೇಕು. ಕಣ್ಣಿನ ಸಮಸ್ಯೆ ಇದ್ದಾಗ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯಬೇಕು’ ಎಂದು ಮಕ್ಕಳಿಗೆ ಸಲಹೆ ನೀಡಿದರು.

70 ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಲಾಯಿತು. 10 ಮಕ್ಕಳಿಗೆ ಕನ್ನಡಕ ಅವಶ್ಯಕತೆ ಇರುವುದರಿಂದ ಅವರಿಗೆ ಉಚಿತ ಕನ್ನಡಕ ನೀಡಲಾಯಿತು.

ಈ ಸಂದರ್ಭದಲ್ಲಿ  ವಿಮುಕ್ತಿ ಮಹಿಳಾ ಒಕ್ಕೂಟದ ನಿರ್ದೇಶಕ ಫಾ.ಎಡ್ವಿನ್ ರಾಕೇಶ್ ಡಿಸೋಜ,  ಸರ್ಕಾರಿ ಶಾಲೆಯ  ಮುಖ್ಯ ಶಿಕ್ಷಕ ರಘುನಾಥ್,ವಿಮುಕ್ತಿ ಸದಸ್ಯರಾದ ಮಂಜುಳ,ಲೀಲಾವತಿ,ಚೈತ್ರ,ಸುಶೀಲ,ಸರೋಜ, ರೇಣುಕ, ವಿಮುಕ್ತಿ ಸಂಸ್ಥೆಯ ಸಂಯೋಜಕಿ ವಿಂದ್ಯಾ ಯೋಗೀಶ್ ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ