October 5, 2024

ಅನಂತ್ ಎಂ.ಎಸ್.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‍ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಭರತ್ ಶೆಟ್ಟಿ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಕಾಫಿನಾಡಿಲ್ಲೂ ಈ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು ಶಾಸಕ ಭರತ್ ಶೆಟ್ಟಿಯಂತಹ ಬಿ.ಜೆ.ಪಿ. ಪಕ್ಷದ ನಾಯಕರ ಹೇಳಿಕೆಗಳಿಂದಲೇ ದೇಶದ ಯುವಜನತೆ ಪ್ರಚೋಧನೆಗೊಳಗಾಗಿ ಹಿಂಸಾತ್ಮಕ ಕೃತ್ಯಗಳಿಗೆ ಕೈ ಹಾಕುತ್ತಿದ್ದಾರೆ. ಇತ್ತೀಚಿಗೆ ಸಂಸತ್ ಮೇಲೆ ದಾಳಿ ಮಾಡಿದ ಘಟನೆಗೆ ಇಂತಹ ಹೇಳಿಕೆಗಳೇ ಕಾರಣ ಇಂತಹ ಹೇಳಿಕೆ ನೀಡಿರುವ ಶಾಸಕ ಭರತ್ ಶೆಟ್ಟಿಯನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಚಿಕ್ಕಮಗಳೂರು  ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಎಸ್. ಅನಂತ ಆಗ್ರಹಿಸಿದ್ದಾರೆ.

ಈ ಸಂಬಂಧ ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಇತಿಹಾಸ ಹೊಂದಿದೆ. ಕಾಂಗ್ರೆಸ್ ಪಕ್ಷದ ನಾಯಕರಾದ ನೆಹರು, ಇಂದಿರಾಗಾಂಧಿ, ರಾಜೀವ್‍ಗಾಂಧಿ ದೇಶದ ಪ್ರಧಾನಿಗಳಾಗಿ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಪ್ರಧಾನಿಗಳ ಕುಟುಂಬದವರಾಗಿರುವ ರಾಹುಲ್‍ಗಾಂಧಿ ಸದ್ಯ ದೇಶ ಮುನ್ನಡೆಸುವ ಸಂಸತ್ತಿನ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಸಂಸತ್ ವಿರೋಧ ಪಕ್ಷದ ನಾಯಕನಿಗೆ ಪ್ರಧಾನಿಯ ನೆರಳು (ಶ್ಯಾಡೋ ಪಿ.ಎಂ.) ಎಂಬ ಅನ್ವರ್ಥವೂ ಇದೆ. ಇದು ವಿರೋಧ ಪಕ್ಷದ ನಾಯಕನ ಸ್ಥಾನಮಾನಕ್ಕಿರುವ ಗೌರವಕ್ಕೆ ಸಾಕ್ಷಿಯಾಗಿದ್ದು, ದೇಶದ ಪ್ರಧಾನಿಗೆ ಇರುವಷ್ಟೇ ಗೌರವ ವಿರೋಧ ಪಕ್ಷದ ನಾಯಕನಿಗೂ ಇದೆ. ವಿರೋಧ ಪಕ್ಷದ ನಾಯಕ ರಾಹುಲ್‍ಗಾಂಧಿ ವಿರುದ್ಧ ಶಾಸಕ ಭರತ್ ಶೆಟ್ಟಿ ನೀಡಿರುವ ಹೇಳಿಕೆ ಖಂಡನೀಯ. ಪ್ರಚೋಧನಕಾರಿ ಹೇಳಿಕೆ ನೀಡಿರುವ ಶಾಸಕ ಭರತ್ ಶೆಟ್ಟಿ ಪುಡಿರೌಡಿಯಂತೆ ಮಾತನಾಡಿದ್ದು, ಇದು ಕರಾವಳಿಯ ಮುಗ್ಧ ಯುವಜನರನ್ನು ಹಾದಿ ತಪ್ಪಿಸಲು, ಗಲಭೆ ಸೃಷ್ಟಿಸಲು ಉದ್ದೇಶಪೂರ್ವಕವಾಗಿ ನೀಡಿದ ಹೇಳಿಕೆಯಾಗಿದೆ. ಆದ್ದರಿಂದ ಶಾಸಕನನ್ನುಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕುಎಂದು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಸಂಸತ್ತಿನಲ್ಲಿ ತಮ್ಮ ಮೊದಲ ಭಾಷಣದಲ್ಲಿ ವಿರೋಧ ಪಕ್ಷದ ನಾಯಕರಾಹುಲ್‍ಗಾಂಧಿ ಮಾತನಾಡಿರುವುದನ್ನುಇಡೀ ದೇಶದ ಜನತೆ ನೋಡಿದೆ. ತಮ್ಮ ಭಾಷಣದಲ್ಲಿ ಅವರು ಹಿಂದೂಧರ್ಮದ ಹೆಸರಿನಲ್ಲಿ ಹಿಂಸೆ ನಡೆಸುವವರನ್ನು ಟೀಕಿಸಿದ್ದಾರೆಯೇ ಹೊರತು, ಹಿಂದೂಧರ್ಮ ಮತ್ತು ಹಿಂದೂಗಳ ಬಗ್ಗೆ ಯಾವುದೇ ಟೀಕೆ ಮಾಡಿಲ್ಲ. ಅವಹೇಳನಕಾರಿಯಾಗಿಯೂ ಮಾತನಾಡಿಲ್ಲ. ರಾಹುಲ್‍ಗಾಂಧಿ ಅವರ ಮಾತು ಶಾಸಕ ಭರತ್ ಶೆಟ್ಟಿಯಂತಯ ಅವಿವೇಕಿಗಳು, ಅಜ್ಞಾನಿಗಳಿಗೆ ಅಪಥ್ಯವಾಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ಪ್ರಧಾನಿಯಷ್ಟೇ ಗೌರವದ ಸ್ಥಾನಮಾನ ಹೊಂದಿರುವ ವಿರೋಧ ಪಕ್ಷದ ನಾಯಕನ ವಿರುದ್ಧ ಪ್ರಚಾರಕ್ಕಾಗಿ ಬಾಯಿಗೆ ಬಂದಂತೆ ಮಾತನಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ. “ಸಂಸತ್ತಿನೊಳಗೆ ಹೋಗಿ ರಾಹುಲ್‍ ಕೆನ್ನೆಗೆ ಹೊಡೆಯಬೇಕು” ಎಂದು ಶಾಸಕ ಭರತ್ ಶೆಟ್ಟಿ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಹಿಂಬಾಲಕರಿಗೆ ಕರೆ ನೀಡಿದ್ದಾರೆ. ಇಂತಹ ಹೇಳಿಕೆಯಿಂದ ಪ್ರಚೋಧನೆಗೆ ಒಳಗಾಗುವ ಕಿಡಿಗೇಡಿಗಳು ಸಂಸತ್‍ಗೆ ನುಗ್ಗಿ ತಮ್ಮ ನಾಯಕರ ಅಣತಿಯನ್ನು ಪಾಲಿಸಿದರೂ ಆಶ್ಚರ್ಯಪಡಬೇಕಿಲ್ಲ. ಇದಕ್ಕೆ ಕೆಲ ತಿಂಗಳ ಹಿಂದೆ ಸಂಸತ್ ಒಳಗೆ ನುಗ್ಗಿ ಹೊಗೆ ಬಾಂಬ್ ಸಿಡಿಸಿದ ಘಟನೆಯೇ ಸಾಕ್ಷಿ. ಈ ಘಟನೆಯಲ್ಲಿ ಸಂಸದ ಪ್ರತಾಪ್‍ಸಿಂಹ ಅವರಿಂದ ಪಾಸ್ ಪಡೆದ ಮೈಸೂರು ಮೂಲಕ ಯುವಕನೊಬ್ಬನ ತಂಡ ಬಾಗಿಯಾಗಿದ್ದನ್ನುಇಡೀ ದೇಶಕಂಡಿದೆ. ಶಾಸಕ ಭರತ್ ಶೆಟ್ಟಿಯಂತಹ ಕೋಮುವಾದಿ ಮನಸ್ಥಿತಿಯ ನಾಯಕರ ಹೇಳಿಕೆಗಳೇ ಇಂತಹ ಘಟನೆಗಳಿಗೆ ಕಾರಣ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನಲ್ಲಿ ಬಿಜೆಪಿ ಯುವಮೋರ್ಚಾ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಾಸಕ ಭರತ್ ಶೆಟ್ಟಿ ಅವಿವೇಕಿಯಂತೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ವಿರೋಧ ಪಕ್ಷದ ನಾಯಕನ ಸ್ಥಾನಮಾನಕ್ಕಿರುವಗೌರವವನ್ನು ಲೆಕ್ಕಿಸದೇಯುವಜನರನ್ನು ಪ್ರಚೋಧಿಸುವ ಹೇಳಿಕೆ ನೀಡಿದ್ದಾರೆ. ರಾಹುಲ್‍ಗಾಂಧಿ ಮಾತನಾಡಿರುವುದು ಶಾಸಕ ಭರತ್ ಶೆಟ್ಟಿಯಂತಹ ನಕಲಿ ಹಿಂದುತ್ವವಾದಿಗಳ ಬಗ್ಗೆಯೇ, ಹಿಂದೂಧರ್ಮ ಹಿಂಸೆಗೆ ಎಂದೂ ಪ್ರಚೋಧನೆ ನೀಡುವುದಿಲ್ಲ, ಜಾತಿ, ಧರ್ಮದ ಅಫೀಮಿನ ಮಧವನ್ನುತಲೆಗೆ ಏರಿಸಿಕೊಂಡು ಕೋಮುಗಲಭೆ ನಡೆಸುವ ಹಿಂಸಾವಾಧಿ ಕೋಮುವಾದಿಗಳ ಕುರಿತು ರಾಹುಲ್‍ಗಾಂಧಿ ಮಾತನಾಡಿದ್ದಾರೆ. ರಾಹುಲ್‍ಗಾಂಧಿ ಹೇಳಿರುವುದರಲ್ಲಿ ಕೊಂಚವೂ ಸುಳ್ಳಿಲ್ಲ ಎಂಬುದಕ್ಕೆ ಶಾಸಕ ಭರತ್ ಶೆಟ್ಟಿಯುವಜನರನ್ನು ಪ್ರಚೋಧಿಸುವಂತಹ ಹೇಳಿಕೆ ನೀಡಿರುವುದೇ ಸಾಕ್ಷಿಎಂದಿದ್ದಾರೆ.

ರಾಹುಲ್‍ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಕುಟುಂಬದ ಕುಡಿಯಾಗಿದ್ದಾರೆ. ಇಡೀ ದೇಶಾದ್ಯಂತ ಪಾದಯಾತ್ರೆ ನಡೆಸಿ ಜನರ ಸಮಸ್ಯೆಗಳನ್ನು ಕಣ್ಣಾರೆಕಂಡು ಶಾಂತಿ, ಸೌಹಾರ್ದ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಅವರ ದೇಶಪ್ರೇಮಕಂಡು ಉತ್ತರಪ್ರದೇಶ ಮತ್ತು ಕೇರಳ ಎರಡೂ ರಾಜ್ಯಗಳಲ್ಲಿ ಪ್ರಚಂಡ ಮುನ್ನಡೆಯಲ್ಲಿ ಮತದಾರರು ಸಂಸತ್‍ಗೆ ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ ಮುಕ್ತ ದೇಶ ಮಾಡುತ್ತೇವೆಎನ್ನುತ್ತಿದ್ದ ಪ್ರಧಾನಿ ಮೋದಿ ಪಟಾಲಂ ಲೋಕಸಭೆ ಚುನಾವಣೆ ವೇಳೆ ರಾಹುಲ್‍ಗಾಂಧಿಗೆ ಬೆದರಿ ಸುಳ್ಳು ಪ್ರಚಾರ ನಡೆಸಿತ್ತು. ಚುನಾವಣೆ ಫಲಿತಾಂಶದ ಬಳಿಕ ರಾಹುಲ್‍ಗಾಂಧಿಗೆ ಸಿಕ್ಕ ಜನಮನ್ನಣೆ ಕಂಡು ಮೋದಿ ಪಟಾಲಂ ಮತ್ತೆ ಬೆದರಿದೆ. ಸದ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದು, ಮೋದಿ ಸರ್ಕಾರ ಕಳೆದ 10 ವರ್ಷದಲ್ಲಿ ನಡೆಸಿದ ಜನವಿರೋಧಿ ಆಡಳಿತ ಹಾಗೂ ಕೋಮುಭಾವನೆ ಕೆರಳಿಸಿ ದೇಶಒಡೆಯುವ ಹುನ್ನಾರದಂತಹಆಟ ಇನ್ನೂ ಮುಂದೆ ನಡೆಯುವುದಿಲ್ಲ ಎಂಬುದನ್ನುಅರಿತಿರುವ ಬಿಜೆಪಿ ನಾಯಕರು ಸಣ್ಣ ಸಣ್ಣ ವಿಚಾರಗಳನ್ನೇ ನೆಪ ಮಾಡಿಕೊಂಡುಯುಜನರನ್ನು ಪ್ರಚೋಧಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನುದೇಶನಜನತೆ ನೋಡುತ್ತಿದ್ದು, ಭವಿಷ್ಯದಲ್ಲಿ ಬಿಜೆಪಿಗೆತಕ್ಕ ಪಾಠ ಕಲಿಸಿದ್ದಾರೆ.

ಸಿ.ಟಿ.ರವಿ, ಪ್ರತಾಪ್‍ಸಿಂಹ, ಅನಂತ್‍ಕುಮಾರ್ ಹೆಗ್ಡೆ, ಈಶ್ವರಪ್ಪ, ನಳೀನ್‍ಕುಮಾರ್ ಕಟೀಲ್‍ನಂತಹ ಬಿಜೆಪಿ ಮುಖಂಡರುಕಾಂಗ್ರೆಸ್ ನಾಯಕರು ಮತ್ತು ಪಕ್ಷದ ಮೇಲೆ ಬಾಯಿಗೆ ಬಂದಂತೆ ಮಾತನಾಡಿಯೇ ಸದ್ಯ ಮೂಲೆಗುಂಪಾಗಿದ್ದಾರೆ. ಬಿಜೆಪಿ ನಾಯಕರುಇನ್ನಾದರೂತಮ್ಮ ನಾಲಿಗೆ ಮೇಲೆ ಹಿಡಿತ ಸಾಧಿಸದಿದ್ದಲ್ಲಿಕಾಂಗ್ರೆಸ್ ಪಕ್ಷದಕಾರ್ಯಕರ್ತರೇಇಂತಹವರಿಗೆ ಬುದ್ಧಿ ಕಲಿಸಲಿದ್ದಾರೆಎಂದು ಹೇಳಿಕೆ ಮೂಲಕ ಎಚ್ಚರಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ