October 5, 2024

ಇತ್ತೀಚಿನ ಕೆಲವು ರಸ್ತೆ ಅಭಿವೃದ್ಧಿ ಕಾಮಗಾರಿ ಗಮನಿಸುತ್ತಿದ್ದೇನೆ, ವಿಶೇಷವಾಗಿ ರಸ್ತೆ ಅಗಲೀಕರಣ ಮತ್ತು ತಗ್ಗು ಪ್ರದೇಶದಲ್ಲಿ ಮಣ್ಣು ಹಾಕಿ ರಸ್ತೆ ಎತ್ತರ ಮಾಡುವಾಗ ಎಲ್ಲಿಂದನೋ ಸಾವಿರ ಸಾವಿರ ಲಾರಿ ಲೋಡ್ ಗಲ್ಲಿ ಮಣ್ಣು ತಂದು ಕಾರ್ಯ ಮಾಡುತ್ತಿರುತ್ತಾರೆ, ಮಳೆಗಾಲದಲ್ಲಿ ಹರಿದು ಬರುವ ನೀರು ತಗ್ಗಿರುವ ಜಾಗದಲ್ಲಿ ಕೆಳಕ್ಕೆ ಹರಿದು ಅ ನೀರು ಹರಿಯುವ ಜಾಗದ ಮಣ್ಣನ್ನು ಲೋಡ್ ಗಳ ಲೆಕ್ಕದಲ್ಲಿ ತನ್ನೊಂದಿಗೆ ಕೊಚ್ಚಿ ತೆಗೆದುಕೊಂಡು ಹೋಗುತ್ತದೆ, ಮತ್ತೆ ಮಳೆ ಮುಗಿದ ಮೇಲೆ ಮತ್ತೆಲ್ಲಿoದನೋ ನೂರಾರು ಲೋಡ್ ಮಣ್ಣು ತಂದು ಕೊಚ್ಚಿ ಹೋದ ಜಾಗಕ್ಕೆ ತುಂಬುತ್ತಾರೆ.

ಕೋಟಿ ಗಟ್ಟಲೆ ಕಾಮಗಾರಿ ಯಲ್ಲಿ ಈ ತರ ಚಿಕ್ಕ ಪುಟ್ಟ ವಿಷಯ ಯಾವ ಲೆಕ್ಕವು ಅಲ್ಲ ಕಾಂಟ್ರಾಕ್ಟ್ ದಾರನಿಗೆ, ಆದರೆ ಪ್ರಕೃತಿ ಸಾವಿರಾರು ವರ್ಷಗಳಿಂದ ನಿರ್ಮಿಸಿದ ಈ ಮಣ್ಣು ಕೊಚ್ಚಿ ಹೋಗಿದ್ದು ಪ್ರಕೃತಿಗೆ ದೊಡ್ಡ ನಷ್ಟ ಅಲ್ಲವೆ, ಅ ಮಣ್ಣನ್ನು ತೆಗೆದ ಜಾಗದಲ್ಲಿ ಭರಸಲು ಮತ್ತೆ ಸಾಧ್ಯವೇ, ಇದಕ್ಕೆ ಯಾರನ್ನು ಹೊಣೆ ಮಾಡಬೇಕು ? ಸ್ವಲ್ಪ ಕಾಳಜಿ ವಹಿಸಿದರೆ ಈ ನಷ್ಟ ತಪ್ಪಿಸ ಬಹುದಲ್ಲವೇ, ದುಡ್ಡನ್ನು ಇಂದು ಖರ್ಚು ಮಾಡಿ ನಾಳೆ ಅಥವಾ ನಾಡಿದ್ದು ದುಡಿಯಬಹುದು, ಆದರೆ ಕೊಚ್ಚಿಹೋದ ಮಣ್ಣು  ?

ರಸ್ತೆ ಎತ್ತರ, ಮತ್ತು ವಿಶಾಲ ಮಾಡುವಾಗ ಮಳೆ ನೀರು ಹರಿದು ಹೋಗುವ ಜಾಗಗುರುತು ಮಾಡಿ ಮೇಲಿನಿಂದ ಅಲ್ಲಿ ಸ್ವಲ್ಪ ದಪ್ಪಗಿನ ಟಾರ್ಪಲ್ ಹಾಕಿ ಅದು ಕೆಳಗಿನ ಸಮತಟ್ಟಾದ ಪ್ರದೇಶದ ಒಂದು 10 ಅಡಿ ಉದ್ದದ ವರೆಗೂ ಹಾಕಬೇಕು, ಹರಿದು ಬಂದ ನೀರು ಟಾರ್ಪಲ್ ಮೇಲೆ ಹರಿದು ಹೋಗಿ ಕೆಳಗಿನ ಸಮತಟ್ಟು ಪ್ರದೇಶಕ್ಕೆ ಹೋಗುವವರೆಗೂ ಟಾರ್ಪಲ್ ಹಾಕಿದರೆ ಯಾವುದೇ ಮಣ್ಣು ಕೊಚ್ಚಿ ಹೋಗುವುದಿಲ್ಲ, ಈ ತರ ವ್ಯವಸ್ಥೆ ಕೆಲವೆ ಸಾವಿರ ರೂ ನಲ್ಲಿ ಮಾಡಿದರೆ ನಷ್ಟ ಆಗುವ ಸಾವಿರಾರು ಲಕ್ಷಾಂತರ ರೂ ಉಳಿಸಬಹುದು, ಬಹು ಮುಖ್ಯವಾಗಿ ಪುನರ್ ಸೃಷ್ಟಿ ಮಾಡಲು ಸಾಧ್ಯವಿಲ್ಲದ ಬೆಲೆ ಕಟ್ಟಲಾಗದ ಮಣ್ಣನ್ನು ಉಳಿಸಬಹುದು… ಯಾವುದೇ ಇರಲಿ ಸದ್ಭಳಿಕೆ ಆಗಲಿ ಅಷ್ಟೆ.

✍️ ಅವರೇಕಾಡು ಪೃಥ್ವಿ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ