October 5, 2024

ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಎಂಬ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ   ಸಂಭವಿಸಿದ್ದು, 116 ಮಂದಿ ಮೃತಪಟ್ಟಿದ್ದಾರೆ. ನಾರಾಯಣ ಸಕಾರ್‌ ಹರಿ  ಅಥವಾ ಸಕಾರ್‌ ವಿಶ್ವ ಹರಿ ಅಥವಾ ಭೋಲೆ ಬಾಬಾ   ಅವರು ಸತ್ಸಂಗ ನೆರವೇರಿಸಿದ ಬಳಿಕ ಉಂಟಾದ ಕಾಲ್ತುಳಿತವು ನೂರಾರು ಜನರ ಸಾವಿಗೆ ಕಾರಣವಾಗಿದೆ.

ಸತ್ಸಂಗ ಮುಗಿದ ಬಳಿಕ ನೂರಾರು ಜನ ಹೊರಗೆ ಬಂದಿದ್ದಾರೆ. ಎತ್ತರದ ಚರಂಡಿ ಮೇಲೆ ನಿರ್ಮಿಸಿದ ರಸ್ತೆ ಮೇಲೆ ಸಾವಿರಾರು ಜನ ನಿಂತಿದ್ದಾರೆ. ಆಗ  ರಸ್ತೆಯ ಒಂದು ಭಾಗ ಚರಂಡಿಯೊಳಗೆ ಕುಸಿದಿದೆ. ಕೂಡಲೇ ಹತ್ತಾರು ಜನ ಚರಂಡಿಯೊಳಗೆ ಬಿದ್ದಿದ್ದು, ಒಬ್ಬರ ಮೇಲೆ ಒಬ್ಬರು ಬಿದ್ದ ಕಾರಣ ಹೆಚ್ಚಿನ ಜನ ಸಾವಿಗೀಡಾಗಿದ್ದಾರೆ. ಇನ್ನು ಚರಂಡಿ ಮೇಲಿನ ರಸ್ತೆ ಕುಸಿದ ಸುದ್ದಿ ಹರಿದಾಡುತ್ತಲೇ ಎಲ್ಲರೂ ಓಡಲು ಶುರು ಮಾಡಿದರು. ಆಗಲೂ ಒಬ್ಬರ ಮೇಲೆ ಒಬ್ಬರು ಬಿದ್ದು, ತುಳಿದಾಡಿದ ಕಾರಣ ಸಾವಿನ ಸಂಖ್ಯೆ ಜಾಸ್ತಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ಘಟನೆ ಕುರಿತು ವಿವರ ನೀಡಿದ್ದಾರೆ.

ಇನ್ನೊಂದಿಷ್ಟು ಮೂಲಗಳ ಪ್ರಕಾರ, ಸಣ್ಣದೊಂದು ಹಾಲ್‌ನಲ್ಲಿ ಸತ್ಸಂಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೊರಗಡೆ ಚರಂಡಿ ಮೇಲಿನ ಸ್ಲ್ಯಾಬ್‌ ಕುಸಿದಿದೆ ಎಂಬ ಸುದ್ದಿ ಕೇಳಿ ಎಲ್ಲರೂ ಓಡಲು ಶುರು ಮಾಡಿದರು. ಹೊರಗೆ ಹೋಗುವ ಗೇಟ್‌ ಚಿಕ್ಕದಿದ್ದ ಕಾರಣ ಎಲ್ಲರೂ ನುಗ್ಗಿದಾಗ ಕಾಲ್ತುಳಿತ ಸಂಭವಿಸಿದೆ. ಹೆಣ್ಣುಮಕ್ಕಳು ಓಡಲೂ ಆಗದೆ, ನೂಕುತ್ತಿದ್ದ ಪುರುಷರನ್ನು ಹಿಮ್ಮೆಟ್ಟಿಸಲೂ ಆಗದೆ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಯಾರಿವರು ಭೋಲೆ ಬಾಬಾ?

ಭೋಲೆ ಬಾಬಾ ಅವರು ಉತ್ತರ ಪ್ರದೇಶದ ಎತಾಹ್‌ ಜಿಲ್ಲೆಯ ಬಹದ್ದೂರ್‌ ಗ್ರಾಮದವರಾಗಿದ್ದಾರೆ. ಇವರು ಈಗ ಪ್ರಮುಖ ಧಾರ್ಮಿಕ ಮುಖಂಡರೆನಿಸಿದ್ದು, ಇವರ ಭಾಷಣ, ಬೋಧನೆಗಳನ್ನು ಕೇಳಲು ಸಾವಿರಾರು ಜನ ಆಗಮಿಸುತ್ತಾರೆ. ಇವರು ದೇಶದ ಗುಪ್ತಚರ ಇಲಾಖೆಯಲ್ಲಿ (IB) ಕಾರ್ಯನಿರ್ವಹಿಸಿದ್ದು, 26 ವರ್ಷಗಳ ಹಿಂದೆಯೇ ಸರ್ಕಾರಿ ನೌಕರಿ ತೊರೆದು, ಸ್ವಯಂಘೋಷಿತ ದೇವಮಾನವರಾಗಿದ್ದಾರೆ.

ಭೋಲೆ ಬಾಬಾ ಅವರಿಗೆ ಭಾರತದಾದ್ಯಂತ ಅನುಯಾಯಿಗಳು ಇದ್ದಾರೆ. ಅದರಲ್ಲೂ, ಉತ್ತರ ಪ್ರದೇಶದ ಪಶ್ಚಿಮ ಭಾಗ, ಉತ್ತರಾಖಂಡ, ಹರಿಯಾಣ, ರಾಜಸ್ಥಾನ ಹಾಗೂ ದೆಹಲಿಯಲ್ಲಿ ಹೆಚ್ಚು ಅನುಯಾಯಿಗಳು ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿರದಿದ್ದರೂ ಇವರ ಧಾರ್ಮಿಕ ಕಾರ್ಯಕ್ರಮವನ್ನು ಭಕ್ತರು ತಪ್ಪಿಸಿಕೊಳ್ಳುವುದಿಲ್ಲ. ಪ್ರತಿ ಮಂಗಳವಾರ ಅಲಿಗಢದಲ್ಲಿ ಅವರ ಕಾರ್ಯಕ್ರಮ ನಡೆಯುತ್ತದೆ. ಅಲ್ಲಿಯೂ ಸಾವಿರಾರು ಜನ ಸೇರುತ್ತಾರೆ. ಕೊರೊನಾ ನಿರ್ಬಂಧದ ಮಧ್ಯೆಯೂ ಸಾವಿರಾರು ಜನರನ್ನು ಸೇರಿಸಿ, ಸತ್ಸಂಗ ಆಯೋಜಿಸಿದ್ದು ವಿವಾದಕ್ಕೂ ಕಾರಣವಾಗಿತ್ತು.

ಈ ನಡುವೆ ನಿನ್ನೆಯ ಕಾಲ್ತುಳಿತ ಪ್ರಕರಣದ ನಂತರ ಬಾಬಾ ಸ್ಥಳದಿಂದ ಕಾಲ್ಕಿತ್ತಿದ್ದು, ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ