October 5, 2024

ವೈದ್ಯರ ಸೇವೆಯನ್ನು ಯಾವಾಗಲು ಗೌರವದಿಂದ ಕಾಣಬೇಕು. ದೇವರನ್ನು ಯಾರು ನೋಡಿಲ್ಲ. ಕಣ್ಣಿಗೆ ಕಾಣುವ ದೇವರೆಂದರೆ ಅದು ವೈದ್ಯರು ಎಂದು ಜೆಸಿಐ ಅಧ್ಯಕ್ಷ ಸುಪ್ರೀತ್ ಹೇಳಿದರು.

ಅವರು ಇತ್ತೀಚೆಗೆ ಪಟ್ಟಣದ ಎಂಜಿಎಂ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ವೈದ್ಯರ ದಿನಾಚರಣೆಯ ಕಾರ್ಯಕ್ರಮದಲ್ಲಿ ಕರ್ತವ್ಯ ನಿರತ ವೈದ್ಯರನ್ನು ಸನ್ಮಾನಿಸಿ ಮಾತನಾಡಿದರು.

ಜಗತ್ತಿನಲ್ಲಿ ಶ್ರೇಷ್ಠವಾದ ಕಾರ್ಯ ವೈದ್ಯರ ಸೇವೆ ಹಗಲು ರಾತ್ರಿ ಎನ್ನದೆ ಎಂತಹ ಸಂದರ್ಭದಲ್ಲು ರೋಗಿಗಳನ್ನು ತಾಳ್ಮೆಯಿಂದ ಪರೀಕ್ಷಿಸಿ ಸೇವೆ ಸಲ್ಲಿಸುತ್ತಾರೆ. ಅದಕ್ಕಾಗಿಯೇ ವೈದ್ಯೋ ನಾರಾಯಣ ಹರಿ ಎಂದು ಕರೆಯುತ್ತಾರೆಂದು ಹೇಳಿದರು.

ತಾಲೂಕು ವೈದ್ಯಾಧಿಕಾರಿ ಡಾ. ಸುಂದ್ರೇಶ್ ಮಾತನಾಡಿ, ನಾವು ನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತೇವೆ. ಅದಕ್ಕೆ ರೋಗಿಗಳು ಹಾಗೂ ಅವರ ಸಹಚರರು ಸಹಕರಿಸಬೇಕು. ಇತ್ತೀಚಿಗೆ ಡೆಂಗೆ ರೋಗ ಡಂಗೂರ ಸಾರುತ್ತಿದ್ದು, ಇದನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ಎಂಜಿಎಂ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಪ್ರಿಯಾಂಕ, ಜೇಸಿ ಪೂರ್ವಧ್ಯಕ್ಷ ಅತುಲ್ ರಾವ್,  ಕೆ.ಎಲ್.ಎಸ್  ತೇಜಸ್ವಿ, ಸೌಭಾಗ್ಯ ಅತುಲ್ ರಾವ್, ಹಮಿದ್ ಸಬ್ಬೆನಹಳ್ಳಿ, ಶ್ರುತಿ ದೀಕ್ಷಿತ್, ರಮ್ಯಾ ಸಂದೇಶ್, ವಿಶ್ವಕುಮಾರ್, ಅಕ್ಷತ್, ನಿಶ್ಚಿತಾ ಯತೀಶ್, ಸಂದೇಶ್, ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ