October 5, 2024

ಬಹಳ ವರ್ಷಗಳ ಹಿಂದಿನಿಂದಲೂ ಕಾಡಿಗೆ ಅಂಟಿಕೊಂಡಿರುವಂತಹ ಪ್ರದೇಶದಲ್ಲಿ ಕೃಷಿ ತೋಟಗಳನ್ನು ಮಾಡಿ ಜೀವಿಸುತ್ತಿದ್ದ ಬಹಳಷ್ಟು ಮಂದಿ ಕುಟುಂಬವನ್ನು ಅರಣ್ಯವನ್ನು ಒತ್ತುವರಿ ಮಾಡಿದ್ದೀರಾ ಎಂಬ ಕಾರಣ ನೀಡಿ ಒಕ್ಕಲೆಬ್ಬಿಸುವ ಮೂಲಕ ಅದರಲ್ಲಿ ಕೆಲವು  ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸಿದ ಸರ್ಕಾರವು ಇನ್ನೂ ಕೆಲವರನ್ನು ಅತಂತ್ರ ಸ್ಥಿತಿಯಲ್ಲಿ ಹಾಗೆಯೇ  ಬಾಕಿ ಬಿಟ್ಟಿದೆ ಎಂದು ಕುಂದೂರು ಗ್ರಾಮಸ್ಥರು ಆರೋಪಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ  ಕುಂದೂರು ಗ್ರಾಮದಲ್ಲಿ ಈ ಹಿಂದೆ ಇದ್ದ ಸುಮಾರು 70 ಕುಟುಂಬದಲ್ಲಿ 68 ಕುಟುಂಬಗಳಿಗೆ ಒಕ್ಕಲೆಬ್ಬಿಸಿ ಅವರಿಗೆ ವಿವಿಧ ಭಾಗಗಳಲ್ಲಿ ಪುನರ್ವಸತಿ ಕಲ್ಪಿಸುವುದರ ಜೊತೆಗೆ ಇನ್ನುಳಿದ 2 ಕುಟುಂಬಗಳಿಗೆ ಕೇವಲ ಆಶ್ವಾಸನೆಯ ಕುಂಟು ನೆಪವನ್ನು  ನೀಡುತ್ತಾ ಅಧಿಕಾರಿಗಳು ಹಾಗೂ  ಜನಪ್ರತಿನಿಧಿಗಳು ಬಡ ರೈತರ ಜೀವ ಹಾಗೂ ಜೀವನದ ಜೊತೆ ಚೆಲ್ಲಾಟವಾಡುತ್ತ ಕಾಲ ಕಳೆಯುತ್ತಿದ್ದಾರೆ ಎಂದು ಮಂಡಗುಳಿಹರ  ಗ್ರಾಮದ ರೈತ ರಾಜೇಶ್ ಹಾಗೂ ಇತರರು ನೇರವಾಗಿ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ನಾವು ಹಿಂದಿನಿಂದಲೂ ಕುಂಡ್ರ ಅರಣ್ಯ ಪ್ರದೇಶದ ಹತ್ತಿರ ಇರುವ ಮುಂಡಗುಳಿಹರ ದಲ್ಲಿ ಕೃಷಿ ಚಟುವಟಿಕೆಗಳು ಮಾಡುತ್ತಾ ಬಂದಿದ್ದು ನಮಗೆ ಇದುವರೆಗೂ ಸರ್ಕಾರದಿಂದ ಹಾಗೂ ಅಧಿಕಾರಿಗಳಿಂದ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಕೇವಲ ಮಾತಿನಲ್ಲಿ ಚುನಾವಣೆ ಸಂದರ್ಭದಲ್ಲಿ ಭರವಸೆಯನ್ನು ಕೊಡುವ ಜನಪ್ರತಿನಿಧಿಗಳು ಕೇವಲ ಪ್ರಚಾರಕ್ಕಾಗಿ   ಹಳ್ಳಿಯ ಬಗ್ಗೆ ಹಳ್ಳಿಯ ರೈತರ ಬಗ್ಗೆ ಹಿತ ಕಾಯುವ ಕುರಿತು ಮಾತನಾಡುತ್ತಾರೆ ಆದರೆ ಹಳ್ಳಿಯಲ್ಲಿರುವ ಕಾಡಿಗೆ ಅಂಟಿಕೊಂಡಂತೆ ಅಥವಾ ಅದರ ಸಮೀಪದಲ್ಲಿರುವ ರೈತರ ಬಾಳು ಸಾಕಷ್ಟು  ದುರುಳವಾಗಿದೆ ಇದನ್ನು ಇಲ್ಲಿನ ಜನಪ್ರತಿನಿಧಿಗಳು ಹಾಗೂ ಶಾಸಕರು ಖುದ್ದು ಭೇಟಿ ನೀಡುವ ಮೂಲಕ ಇಲ್ಲಿನ ಜೀವಂತ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಬೇಕಾಗುತ್ತದೆ.  ಅದನ್ನು ಬಿಟ್ಟು ಕೇವಲ ಅಧಿಕಾರದ ದರ್ಪ ತೋರಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅಲ್ಲಿನ ನಿವಾಸಿ  ಶ್ರೀಮತಿ ಗೀತಾ ; ನಾವು ಈ ಕಾಡು ಪ್ರದೇಶದಲ್ಲಿ ಬಹಳಷ್ಟು ವರ್ಷಗಳಿಂದ ವಾಸ ಮಾಡುತ್ತಾ ಬಂದಿದ್ದೇವೆ ಅದರಲ್ಲಿ ಸುಮಾರು 68 ಕುಟುಂಬಗಳನ್ನು ಒಕ್ಕಲೆಬ್ಬಿಸುವ ಮೂಲಕ ಸರ್ಕಾರವು ಈಗಾಗಲೇ ಅವರಿಗೆ ಪುನರ್ವಸತಿ ಕಲ್ಪಿಸಿಕೊಟ್ಟಿದೆ ಆದರೆ ಈಗ ಈ ದಟ್ಟ ಕಾಡಿನ ಮಧ್ಯೆ ಇರುವಂತಹ ತೋಟದಲ್ಲಿ ಕೇವಲ ಎರಡು ಮನೆಗಳು ಮಾತ್ರ ಇದೆ ಆದರೆ ನಮಗೆ ಯಾವುದೇ ಮೂಲಸೌಕರ್ಯ ಇರುವುದಿಲ್ಲ  ಈ ಕುರಿತು ನಾವು ಸಂಬಂಧಪಟ್ಟವರನ್ನು ಭೇಟಿಯಾದಾಗ ನಮ್ಮನ್ನು ಬೇರೆಡೆಗೆ ಸ್ಥಳಾಂತರಸುವ ಹಾಗೂ ನಮಗೆ ಪುನರ್ವಸತಿ ಕಲ್ಪಿಸುವ ಭರವಸೆಯನ್ನು ಈ ಹಿಂದಿನಿಂದಲೂ ಅಧಿಕಾರಿಗಳು ನೀಡುತ್ತಾ ಬಂದಿದ್ದಾರೆ  ಆದರೆ ಪುನರ್ವಸತಿ ಬಿಡಿ  ನಮ್ಮ ಕೃಷಿ ತೋಟಗಳಿಗೆ ಹಾಗೂ ವಾಸಿಸುವ ಮನೆಗಳಿಗೆ ವಿದ್ಯುತ್ ಸೌಕರ್ಯ, ಸೇರಿದಂತೆ ರಸ್ತೆ ,ಕುಡಿಯುವ ನೀರು, ಆಸ್ಪತ್ರೆಗಳು, ಯಾವುದೇ ರೀತಿಯ ಮೂಲ ಸೌಲಭ್ಯ ಇಲ್ಲ ಇದರ ಮಧ್ಯೆ ನಾವು ಬದುಕುತ್ತಿದ್ದೇವೆ ನಮ್ಮ ಮಕ್ಕಳಿಗೆ ಏನಾದರೂ ಆರೋಗ್ಯ ಕೈ ಕೊಟ್ಟರೆ ಕಾಡು ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಕಾಡು ಪ್ರಾಣಿಗಳ ಹಾವಳಿಗೆ ನಮ್ಮ ನಮ್ಮ ಜೀವವನ್ನು ಕೈಯಲ್ಲಿ ಹಿಡಿದು ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ನಮ್ಮಲ್ಲಿ ಈ ಹಿಂದಿನಿಂದಲೂ ಕಾಡು ಪ್ರಾಣಿಗಳಿಂದ ಬಹಳಷ್ಟು ನಷ್ಟ ಹಾಗೂ  ಸಾಕಷ್ಟು ಪ್ರಾಣ ಹಾನಿ ಸಂಭವಿಸಿರುವ ಘಟನೆಗಳು ಈಗಿರುವ ಶಾಸಕರಿಗೆ ಚೆನ್ನಾಗಿ ತಿಳಿದಿದೆ ಆದ್ದರಿಂದ ಇಂತಹ ಘಟನೆಗಳು ಇನ್ನೂ ಮರುಕಳಿಸಿದರೆ ಇದಕ್ಕೆ ಈಗಿರುವ ಶಾಸಕರು ಹಾಗೂ ಅಧಿಕಾರಿಗಳೇ ನೇರವಾಗಿ ಹೊಣೆಯನ್ನು ಹೊರಬೇಕಾಗುತ್ತದೆ ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಗುಡುಗಿದರು.

ಗ್ರಾಮದ ಸಂತ್ರಸ್ತ ಕಾರ್ತಿಕ್ ಮಾತನಾಡಿ ಶಾಸಕರು ಎಂದರೆ ಇಡೀ ಕ್ಷೇತ್ರಕ್ಕೆ ಅವರು ಶಾಸಕರು ಅದು ಬಿಟ್ಟು ಕೆಲವೊಂದು ಸ್ಥಳಕ್ಕೆ ಮಾತ್ರ ಅವರ ಕೆಲಸ ಸೀಮಿತವಾದಂತಿದೆ ನಾವು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ನಮಗೆ ಅಪಘಾತವಾದ ನಂತರ ಹಾಗೂ ಕಾಡು ಪ್ರಾಣಿಗಳ ಹಾವಳಿಯಿಂದ ನಷ್ಟಗಳಾದ ನಂತರ ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಹಾರ ಕೊಡುವ ನೆಪವನ್ನು ಮಾಡಿ  ಫೋಟೋಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ತಮ್ಮ ತಮ್ಮ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತಾರೆ ಇದರಿಂದ ರೈತರ ಬದುಕು ಸುಧಾರಿಸುವುದಿಲ್ಲ ಸತ್ತ ಮೇಲೆ ಪರಿಹಾರ ಧನ ಕೊಡುವ ಬದಲು ಅದೇ ಹಣದಿಂದ ನಮಗೆ ಹಾಗೂ ನಮ್ಮ ಕುಟುಂಬಕ್ಕೆ ಸುರಕ್ಷಿತ ಜೀವನಕ್ಕೆ ಅನುವು ಮಾಡಿಕೊಟ್ಟರೆ ನಿಮ್ಮನ್ನು ನಾವು ಜೀವನಪರ್ಯಂತ ನೆನೆಯುತ್ತೇವೆ ಈಗಾಗಲೇ ನಾವು ಬಹಳಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದು ಕೂಡಲೇ ಇಲ್ಲಿನ ಶಾಸಕರಾದ ನಯನಾ ಮೊಟಮ್ಮ ರವರು ಅಧಿಕಾರಿಗಳ ಜೊತೆ ನಮ್ಮ ಗ್ರಾಮಕ್ಕೆ ಬಂದು ನಮ್ಮ ಕಷ್ಟಕ್ಕೆ ಸ್ಪಂದಿಸಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ ಹಾಗೆಯೇ ಇಂತಹ ಕಷ್ಟದ ಪರಿಸ್ಥಿತಿಯನ್ನು ಪರಿಗಣಿಸದೆ ನಮ್ಮನ್ನು ಕಡೆಗಣಿಸಿದರೆ ಮುಂದಾಗುವ ಅನಾಹುತದ ಜವಾಬ್ದಾರಿಯನ್ನು ತಾವೇ ಹೊರಬೇಕಾಗುತ್ತದೆ ಎಂದರು. ನಮಗೆ ಪುನರ್ವಸತಿ ಕಲ್ಪಿಸಲು ಸಾಧ್ಯವಾಗದಿದ್ದರೆ ನಮಗೆ ದಯಾಮರಣ ನೀಡಿ ಎಂದು ಇಲ್ಲಿನ ನಿವಾಸಿಗಳು ತಮ್ಮ ರೋಧನ ವ್ಯಕ್ತಪಡಿಸಿದ್ದಾರೆ.

ಸ್ಥಳದಲ್ಲಿ ಗ್ರಾಮಸ್ಥರಾದ ಪುಟ್ಟರಾಜು, ಲೋಕಮ್ಮ, ರತ್ನಮ್ಮ, ವಿಪುಲ್ ಹುಲ್ಲೇಮನೆ, ಗೀತಾ, ಅಕ್ಷತಾ ಹಾಗೂ ಇತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ