October 5, 2024

ಐದೂವರೆ ತಿಂಗಳ ಹೆಣ್ಣು ಮಗುವೊಂದು ಫೋಟೋಗಳನ್ನು ನೋಡಿ ಅದರಲ್ಲಿರುವ ವಸ್ತುವನ್ನು ಗುರುತಿಸುವ ಮೂಲಕ ಅಂತಾರಾಷ್ಟ್ರೀಯ ದಾಖಲೆಗೆ ಪಾತ್ರವಾಗಿದೆ.

ಮೂಡಿಗೆರೆ ತಾಲ್ಲೂಕು ಬೈದುವಳ್ಳಿ ಗ್ರಾಮದ ಜಿ.ಎಸ್. ಕಾಳೇಗೌಡರ ಮಗ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜಿ.ಕೆ. ಭರತ್ ಮತ್ತು ಶ್ರೀಮತಿ ದಂಪತಿಯ ಐದುವರೆ ತಿಂಗಳ ಆರ್ವಿ ಎಂಬ ಹೆಣ್ಣು ಮಗು ಸುಮಾರು 125ಕ್ಕೂ ಹೆಚ್ಚು ಚಿತ್ರಗಳನ್ನು ಗುರುತಿಸುವ ಮೂಲಕ ನೋಬೆಲ್‌ ವರ್ಲ್ಡ್‌ ರೆಕಾರ್ಡ್‌, ಇಂಟರ್‌ ನ್ಯಾಷನಲ್‌ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ನಿರ್ಮಿಸಿದ್ದಾಳೆ.

ಭಾರತೀಯ ಸೇನೆಯಲ್ಲಿ ಪ್ರಸ್ತುತ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭರತ್ ಹಾಗೂ ಹಾಸನ ನಗರದ ರಂಜಿತಾ ದಂಪತಿಗಳ ಪುತ್ರಿ ಆರ್ವಿ ಐದುವರೆ ತಿಂಗಳು ಇರುವಾಗಲೇ ಪ್ಲೇ ಕಾರ್ಡ್‌ನಲ್ಲಿರುವ ಹಣ್ಣು, ತರಕಾರಿ, ಪ್ರಾಣಿ, ಪಕ್ಷಿ ಸೇರಿ 125ಕ್ಕೂ ವಿವಿಧ ವಸ್ತುಗಳನ್ನು ಗುರುತಿಸಿ ದಾಖಲೆ ನಿರ್ಮಿಸಿ, ಸೂಪರ್‌ ಟ್ಯಾಲೆಂಟೆಡ್‌ ಕಿಡ್‌ ಎಂಬ ಬಿರುದು ಪಡೆದುಕೊಂಡಿದ್ದಾಳೆ.

‘ಆರ್ವಿಗೆ ಪಸ್ತುತ 7 ತಿಂಗಳಾಗಿದ್ದು, 5 ತಿಂಗಳು ಇರುವಾಗಲೇ ಅವಳ ಎದುರು ಕಾರ್ಡ್‌ಗಳನ್ನು ಹಿಡಿದು ಇವುಗಳಲ್ಲಿನ ನಿರ್ಧಿಷ್ಟ ವಸ್ತುಗಳನ್ನು ಗುರುತಿಸುವಂತೆ ಹೇಳಿದರೆ ಕೈ ಬೆರಳಿನಲ್ಲಿ ತೋರಿಸುವ ಮೂಲಕ ಗುರುತಿಸುತ್ತಿದ್ದಳು.

ಇದನ್ನು ಗಮನಿಸಿದ ಪೋಷಕರು, ಆಕೆಯ ಪ್ರತಿಭೆಯನ್ನು ಗುರುತಿಸಿ ವಿಡಿಯೋ ಮಾಡಿ ನೋಬೆಲ್‌ ವರ್ಲ್ಡ್‌ ರೇಕಾರ್ಡ್‌, ಇಂಟರ್‌ ನ್ಯಾಷನಲ್‌ ಬಕ್‌ಆಫ್‌ ರೆಕಾರ್ಡ್‌ ಕಳುಹಿಸಿಕೊಟ್ಟಿದ್ದರು. ಇದನ್ನು ಪರಿಶೀಲಿಸಿದ ಸಂಸ್ಥೆ ವರ್ಲ್‌ ರೆಕಾರ್ಡ್‌ ಆಗಿ ಪರಿಗಣಿಸಿ ಪ್ರಶಸ್ತಿ ನೀಡಿ ಪುರಸ್ಕರಿಸಿದೆ ಎಂದು ಪೋಷಕರು ಮಾಹಿತಿ ನೀಡಿದ್ದಾರೆ.

ತಮ್ಮ ಮಗಳ ಈ ವಿಶೇಷ ಪ್ರತಿಭೆಯ ಬಗ್ಗೆ ಪೋಷಕರು ಅತೀವ ಹರ್ಷ ವ್ಯಕ್ತಪಡಿಸಿದ್ದು, ಮುಂದೆ ತಮ್ಮ ಮಗಳಿಗೆ ಹೆಚ್ಚಿನ ತರಬೇತಿ ನೀಡಿ ಇನ್ನಷ್ಟು ವಿಶೇಷ ಸಾಧನೆಗೆ ಪ್ರೇರಣೆ ನೀಡಲು ಈ ದಾಖಲೆ ಸ್ಪೂರ್ತಿಯಾಗಿದೆ ಎಂದಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ