October 5, 2024

ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಆಡಳಿತ ನಡೆಸುವವರಿಗೆ ಮಾದರಿಯಾಗಿದೆ. ಹದಿನೈದನೇಯ ಶತಮಾನದಲ್ಲಿಯೇ ಅವರು ರೂಢಿಗೆ ತಂದ ಅಭಿವೃದ್ಧಿ ಕಾರ್ಯಗಳು, ಸರ್ವ ಜನಾಂಗದ ಏಳಿಗೆಗೆ ಅವರು ಹಾಕಿದ ಬುನಾದಿ ಶ್ರೇಷ್ಠವಾದುದು ಎಂದು ಸಾಹಿತಿ ಆಗುಂಬೆ ಗಣೇಶ್ ಹೆಗ್ಡೆ ಅಭಿಪ್ರಾಯಿಸಿದರು.

ಅವರು ಶನಿವಾರ ಮೂಡಿಗೆರೆ ಪಟ್ಟಣದ ರೈತಭವನದಲ್ಲಿ ಕೆಂಪೇಗೌಡ ಒಕ್ಕಲಿಗರ ವೇದಿಕೆ ವತಿಯಿಂದ ವಿವಿಧ ಒಕ್ಕಲಿಗರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಕೆಂಪೇಗೌಡರ ವಂಶಸ್ಥರನ್ನು ಬೆಂಗಳೂರಿನ ಯಲಹಂಕದ ಪ್ರಭುಗಳೆಂದು ಕರೆಯುತ್ತಾರೆ. ಯಲಹಂಕದಲ್ಲಿ ಸಾಮ್ರಾಜ್ಯ ಕಟ್ಟಿ ಇಡೀ ಬೆಂಗಳೂರು ನಗರವನ್ನು ಜಗತ್ತೇ ತಿರುಗಿ ನೋಡುವಂತೆ ಸುಂದರವಾಗಿ ನಿರ್ಮಿಸಲಾಗಿದೆ. ಅವರ ಆಳ್ವಿಕೆಯಲ್ಲಿ ಒಕ್ಕಲಿಗ ಸೇರಿದಂತೆ 57 ಸಮುದಾಯದವರಿಗೆ ಬದುಕು ಕಟ್ಟಿಕೊಳ್ಳಲು ಆಯಾ ಕಸುಬು ನಡೆಸಲು ಅವಕಾಶ ಮಾಡಿಕೊಡಲಾಗಿದೆ. ಆಂದ್ರ, ಕೇರಳ, ತಮಿಳುನಾಡಿನ ಕೆಲ ಭಾಗಗಳಲ್ಲಿ ಕೂಡ ಕೆಂಪೇಗೌಡರು ಆಳ್ವಿಕೆ ನಡೆಸಿದ್ದಾರೆ. ಇತಿಹಾಸಕಾರರು ಸುಳ್ಳು ಮಾಹಿತಿ ನೀಡುವ ಮೂಲಕ ನಮ್ಮ ಸಮಾಜ ದೂರ ಉಳಿಯುವಂತಾಗಿದೆ ಎಂದ ಅವರು, ಒಕ್ಕಲಿಗರ ಸಮುದಾಯದ ಮಕ್ಕಳು ಸಂಪ್ರದಾಯ, ಪರಂಪರೆಯನ್ನು ಮರೆಯದಂತೆ ಪೋಷಕರು ಎಚ್ಚರ ವಹಿಸಬೇಕಿದೆ. ಒಕ್ಕಲಿಗರಲ್ಲಿಯೇ ಹಲವು ಪಂಗಡಗಳಿದ್ದು, ಅದನ್ನು ಒಟ್ಟುಗೂಡಿಸಿದ ಶ್ರೇಷ್ಟತೆ ಬಾಲಗಂಗಾಧರನಾಥ ಸ್ವಾಮೀಜಿಗೆ ಸಲ್ಲುತ್ತದೆ. ದೇಶದಲ್ಲಿ 19 ಕೋಟಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿರಗ ಸಮುದಾಯವಿದ್ದು, ಎಲ್ಲರೂ ಸಮುದಾಯದ ಪ್ರಗತಿಗೆ ಶ್ರಮಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಒಕ್ಕಲಿಗ ಜನಾಂಗ ಉನ್ನತಮಟ್ಟದಲ್ಲಿ ಅಭಿವೃದ್ಧಿ ಹೊಂದಬೇಕಾದರೆ ನಾವೆಲ್ಲರೂ ರಾಜಕೀಯ ನುಸುಳದಂತೆ ಸಂಘಟಿತರಾದಾಗ ಮಾತ್ರ ಸಮುದಾಯಕ್ಕೆ ಶಕ್ತಿ ಬರುತ್ತದೆ ಎಂದರು.
500 ವರ್ಷದ ಹಿಂದೆ ರಾಜ್ಯವನ್ನಾಳಿದ ನಮ್ಮ ಒಕ್ಕಲಿಗ ಸುಮುದಾಯದ ಧೀಮಂತ ನಾಯಕರನ್ನು ಈಗಲಾದರೂ ನೆನಪು ಮಾಡುತ್ತಿರುವುದು ಉತ್ತಮ ಕಾರ್ಯ. ಸರಕಾರ ಕೂಡ ಇಷ್ಟು ವರ್ಷ ಅವರ ನೆನಪನ್ನು ಮಾಡದಿರುವುದು ನಿಜವಾಗಿಯೂ ದುರ್ದೈವ. ಹಾಗಾಗಿ ಇನ್ನಾದರೂ ನಮ್ಮ ಜನಾಂಗದ ಮಹನೀಯರ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಒಕ್ಕಲಿಗ ಸಮುದಾಯದ ಸಾಧಕರನ್ನು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಂಪೇಗೌಡ ಒಕ್ಕಲಿಗರ ವೇದಿಕೆ ಅಧ್ಯಕ್ಷ ಬ್ರಿಜೇಶ್‍ಗೌಡ ಕಡಿದಾಳು ವಹಿಸಿದ್ದರು.

ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್, ಮುಖಂಡರಾದ ಹಳಸೆ ಶಿವಣ್ಣ, ಬಿ.ಎಸ್.ಜಯರಾಂ, ಡಾ. ಅನಂತ ಪದ್ಮನಾಭ, ಜಿ.ಎಚ್.ಹಾಲಪ್ಪಗೌಡ, ರಂಜನ್ ಅಜಿತ್ ಕುಮಾರ್, ಕೆ. ಮಂಚೇಗೌಡ, ಬಿ.ಆರ್. ಬಾಲಕೃಷ್ಣ, ಆಶಾ ಮೋಹನ್, ಕಲಾವತಿ ರಾಜಣ್ಣ, ಎಚ್.ಜಿ.ಸುರೇಂದ್ರ, ಎಂ.ಆರ್.ಜಗದೀಶ್, ಡಿ.ಬಿ. ಜಯಪ್ರಕಾಶ್ ಡಿ.ಕೆ.ಲಕ್ಷ್ಮಣ್‍ಗೌಡ, ಗಬ್ಬಳ್ಳಿ ಚಂದ್ರೇಗೌಡ, ಟಿ.ಎಂ. ಗಜೇಂದ್ರ, ವಿ.ಕೆ. ಚಂದ್ರೇಗೌಡ, ಮೀನಾಕ್ಷಿ ಲಕ್ಷ್ಮಣಗೌಡ, ಕೆಂಪೇಗೌಡ ಒಕ್ಕಲಿಗ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಬಕ್ಕಿ, ಸಂಘದ ಪದಾಧಿಕಾರಿಗಳು, ಹೋಬಳಿ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಮೂಡಿಗೆರೆ ಪಟ್ಟಣದಲ್ಲಿ ಕೆಂಪೇಗೌಡರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ