October 5, 2024

ವಿಎಂಪಿಎಂ(ವಸ್ತಾರೆ ಮಂಜಮ್ಮ ಪುಟ್ಟಸ್ವಾಮಿ ಸ್ಮರಣಾರ್ಥ) ಟ್ರಸ್ಟ್‍ನ ದಶಮಾನೋತ್ಸವವನ್ನು ಮೂಡಿಗೆರೆ ಪಟ್ಟಣದ ತಾ.ಪಂ. ಪಂಡಿತ್ ದೀನ್ ದಯಾಳ್ ಉಪಾದ್ಯಾಯ ಸಭಾಂಗಣದಲ್ಲಿ ಜುಲೈ 2ರಂದು ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಟ್ರಸ್ಟ್‍ನ ಅಧ್ಯಕ್ಷ ವಿ.ಪಿ.ನಾರಾಯಣ್ ಹೇಳಿದರು.

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ : ವಿಎಂಪಿಎಂ ಟ್ರಸ್ಟ್ ಪ್ರಾರಂಭಗೊಂಡು 9 ವರ್ಷ ಕಳೆದಿದ್ದು, ಈಗ ದಶಮಾನೋತ್ಸವದ ವರ್ಷಕ್ಕೆ ಕಾಲಿಟ್ಟಿದೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮೊದಲ ಆಧ್ಯತೆ ನೀಡುವುದೇ ಟ್ರಸ್ಟ್‍ನ ಮುಖ್ಯ ಉದ್ದೇಶವಾಗಿದೆ. ಅಲ್ಲದೇ ಸ್ವದೇಶಿ ವಸ್ತುಗಳ ಬಳಕೆ ಬಗ್ಗೆ ಜಾಗೃತಿ, ಜಲ ಸಂರಕ್ಷಣೆ, ನೇತ್ರದಾನ ಅರಿವು, ಅತೀ ಹೆಚ್ಚು ಅಂಕ ಗಳಿಸಿದ ಬಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕಾನೂನು ಅರಿವು ಸೇರಿದಂತೆ 50ಕ್ಕೂ ಅಧಿಕ ವಿವಿಧ ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಸಾಹಿತಿಗಳು ರಚಿಸಿರುವ ಬರಹಗಳನ್ನೊಳಗೊಂಡ ಹಾಗೂ 10 ವರ್ಷ ಟ್ರಸ್ಟ್‍ನ ಸಾಧನೆಯ ಕುರಿತು ದಶಮಾನೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.

ಕಾರ್ಯಕ್ರಮವನ್ನು ಶಾಸಕಿ ನಯನಾ ಮೋಟಮ್ಮ ಉದ್ಘಾಟಿಸಲಿದ್ದು, ಮೈಸೂರಿನ ಭಾಷಾಂತರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಅವರೇಕಾಡು ವಿಜಯಕುಮಾರ್ ಉಪನ್ಯಾಸ ನೀಡಲಿದ್ದಾರೆ. ಸಾಹಿತಿ ಹಳೆಕೋಟೆ ರಮೇಶ್, ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂಗೌಡ, ಮಹಿಳಾ ಮತ್ತು ಮಕ್ಕಳ ಸಮಿತಿ ರಾಜ್ಯಾಧ್ಯಕ್ಷೆ ಡಾ.ಲಕ್ಷ್ಮೀ, ಬಿಇಒ ಹೇಮಂತಚಂದ್ರ, ಕೆ.ವೆಂಕಟೇಶ್, ಎಂ.ಎಸ್.ಅನಂತ್, ನಿರ್ಮಲಾ ಮಂಚೇಗೌಡ, ಕವಿತಾ ಲೋಕೇಶ್ ಭಾಗವಹಿಸಲಿದ್ದಾರೆ  ಎಂದರು.

ಗೋಷ್ಠಿಯಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ಭಾಗ್ಯ ನಾರಾಯಣ್, ಹಳೇಮೂಡಿಗೆರೆ ಗ್ರಾ.ಪಂ. ಸದಸ್ಯ ಮಂಜುನಾಥ್, ಸ್ಮರಣ ಸಂಚಿಕೆ ಸಂಪಾದಕ ಎಂ.ಎಸ್.ನಾಗರಾಜ್, ಟ್ರಸ್ಟ್ ನ ಸದಸ್ಯರಾದ ರಾಜೇಶ್, ಮಹೇಶ್, ಶ್ರೀಕಾಂತ್, ಆಶ್ರಿತ್ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ