October 5, 2024

ದೇಶ ಹಾಗೂ ನಾಡಿಗಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ ಮಹಾನ್ ನಾಯಕರ ಜಯಂತಿಗಳು ಕೇವಲ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಬಾರದು. ಅವರ ಆದರ್ಶಗಳು ಯುವ ಜನಾಂಗಕ್ಕೆ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ ಎಂದು ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.

ಅವರು ಗುರುವಾರ ಪಟ್ಟಣದ ತಾ.ಪಂ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ನಾಡ ಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಠ್ಯ ಪುಸ್ತಕದಲ್ಲಿ ಮಹಾನ್ ವ್ಯಕ್ತಿಗಳ ಇತಿಹಾಸವನ್ನು ಸೇರಿಸಿರುವುದು ಬಾಲ್ಯದಲ್ಲಯೇ ಮಕ್ಕಳು ಮಹಾ ಪುರುಷರ ಬಗ್ಗೆ ತಿಳಿದುಕೊಳ್ಳುವಂತಾಗಲಿ ಎಂದೇ ವಿನಃ, ಕೇವಲ ಕಾರ್ಯಕ್ರಮಗಳಿಗೆ ಮಾತ್ರವಲ್ಲ. ಎಲ್ಲಾ ಮಹನೀಯರ ಜಯಂತಿಗಳಲ್ಲಿ ಅಧಿಕಾರಿಗಳು ಮಾತ್ರ ಭಾಗವಹಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ಮುಂದಿನ ದಿನದಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಮಹನೀಯರ ಜಯಂತಿ ಆಚರಿಸಬೇಕು ಎಂದು ಅವರು, ಕೆಂಪೇಗೌಡರು ಕಟ್ಟಿರುವ ಬೆಂಗಳೂರು ಮಹಾ ನಗರವನ್ನು ಇಂಗ್ಲೆಂಡ್‍ನಂತಹ ರಾಷ್ಟ್ರ ಅದೇ ಮಾದರಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಆದರೆ ನಾವು ಇಂತಹ ಯೋಚನೆ ಮಾಡದಿರುವುದು ದುರುಂತ ಎಂದು ಹೇಳಿದರು.

ಕೆಂಪೇಗೌಡ ಒಕ್ಕಲಿಗರ ಸಂಘದ ಕಾರ್ಯದರ್ಶಿ ಪ್ರಸಾಧ್ ಬಕ್ಕಿ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಇತಿಹಾಸ ತಿಳಿಯದವರು ಎಂದೂ ಇತಿಹಾಸವನ್ನು ಸೃಷ್ಟಿಸಲಾರರು ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಕೆಂಪೇಗೌಡರು ಬಾಲ್ಯದಲ್ಲಿಯೇ ಬೆಂಗಳೂರು ನಗರ ನಿರ್ಮಾಣದ ಕನಸು ಕಟ್ಟಿಕೊಂಡಿದ್ದರು. ಅದರಂತೆಯೇ ಬೆಂಗಳೂರು ನಿರ್ಮಾಣದಲ್ಲಿ ಹಗಲಿರುಳು ಶ್ರಮಿಸಿ ಮಾದರಿ ನಗರವನ್ನಾಗಿ ಮಾಡಿದ್ದಾರೆ. ಯಾವುದೇ ಬೇರೆ ರಾಜ್ಯದಿಂದ ಆಕ್ರಮಿಸಬಾರದೆಂದು ಕೋಟೆ ನಿರ್ಮಾಣ ಮಾಡಿದ್ದಾರೆ. ಅಲ್ಲದೇ ನಗರದೊಳಗೆ ಸ್ಥಳ ನಿಗದಿ ಮಾಡಿ ಚಿಕ್ಕಪೇಟೆ, ದೊಡ್ಡಪೇಟೆ, ಕಾಟನ್‍ಪೇಟೆಗಳಂತೆ ಅನೇಕ ಪ್ರದೇಶವನ್ನು ವ್ಯಾಪಾರ ವಹಿವಾಟುಗಳಿಗೆ ಮೀಸಲಿರಿಸಿದ ಸ್ಥಳಗಳೇ ಇಂದಿನ ಬೆಂಗಳೂರಿನ ಹೃದಯಭಾಗವಾಗಿವೆ. ಅಲ್ಲಿ ವಾಸಿಸುವ ಜನರಿಗೆ ನೀರಿನ ಅಭಾವ ಸೃಷ್ಟಿಯಾಗಬಾರದೆಂದು ಎಲ್ಲಲ್ಲಿ ಕೆರೆ ಕಟ್ಟೆಗಳನ್ನು ನಿರ್ಮಿಸಿ ಸುಂದರ ನಗರವನ್ನಾಗಿ ಮಾಡಿದ್ದಾರೆ. ಇಂದು ಬೆಂಗಳೂರು ನಗರ ಇನ್ನಷ್ಟು ಅಭಿವೃದ್ಧಿ ಹೊಂದುತ್ತಿದ್ದರೂ ನಮ್ಮ ತಾಲೂಕು ಮಾತ್ರ ಇಂದಿಗೂ ಹಿಂದೆ ಉಳಿದಿದೆ. ಕೆಂಪೇಗೌಡರ ಆಲೋಚನೆಯಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾಡಿದಾಗ ಮಾತ್ರ ಮೂಡಿಗೆರೆ ಪಟ್ಟಣವನ್ನು ಅಭಿವೃದ್ಧಿಪಡಿಸಲು ಸಾಧ್ಯ ಎಂದು ಹೇಳಿದರು.

ಮಾಜಿ ಸಚಿವೆ ಮೋಟಮ್ಮ, ಪ.ಪಂ. ಸದಸ್ಯರಾದ ಆಶಾ ಮೋಹನ್, ರಮೇಶ್ ಹೊಸಕೆರೆ, ಹಂಜಾ, ತಹಸೀಲ್ದಾರ್ ಶೈಲೇಶ್ ಎಸ್.ಪರಮಾನಂದ, ತಾ.ಪಂ. ಇಒ ದಯಾವತಿ, ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಕಲಾವತಿ ರಾಜಣ್ಣ, ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಭಾಲಕೃಷ್ಣ, ಅಶ್ವಥ್ ಬೆಟ್ಟಗೆರೆ, ಡಿ.ಕೆ. ಲಕ್ಷ್ಮಣ್‍ಗೌಡ, ಅಣ್ಣೇಗೌಡ ಮತ್ತಿತರರಿದ್ದರು.

ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಗೌರವಿಸಲಾಯಿತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ