October 5, 2024

ಹಾವೇರಿಯ ಬ್ಯಾಡಗಿ ತಾಲೂಕಿನ ಗುಂಡೆನಹಳ್ಳಿ ಕ್ರಾಸ್ ಬಳಿ ಶುಕ್ರವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 13 ಮಂದಿ ಸಾವನ್ನಪ್ಪಿದ್ದು, ಭಾರತದ ಅಂಧರ ಪುಟ್ ಬಾಲ್ ಮಹಿಳಾ ತಂಡದ ಕ್ಯಾಪ್ಟನ್ ಮಾನಸ ಸಹ ಮೃತರಲ್ಲಿ ಒಬ್ಬರಾಗಿದ್ದಾರೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದ ಕುಟುಂಬದ ಸದಸ್ಯರು ಹಾವೇರಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವರ ದರ್ಶನಕ್ಕೆಂದು ತೆರಳಿ ಮರಳುವ ವೇಳೆ ನಿಂತಿದ್ದ ಟ್ರಕ್ ಗೆ ಟಿಟಿ ಅಪ್ಪಳಿಸಿದ ಪರಿಣಾಮ 13 ಮಂದಿ ಸಾವನ್ನಪ್ಪಿದ್ದಾರೆ.   ಮೃತರು ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ ಒಂದೇ ಕುಟುಂಬದ  ಸದಸ್ಯರು.

ಮೃತಪಟ್ಟ 13 ಮಂದಿಯಲ್ಲಿ ಭಾರತದ ದೃಷ್ಟಿಚೇತನರ ಮಹಿಳಾ ಫುಟ್‌ಬಾಲ್‌ ತಂಡದ ಕ್ಯಾಪ್ಟನ್‌ 24 ವರ್ಷದ ಮಾನಸ ಕೂಡ ಒಬ್ಬರು. ಅಂಧೆಯಾದರೂ ಸಾಧನೆಯಿಂದ ಎಎಸ್ಸಿ ಪದವಿ ಮಾಡಿದ್ದ ಮಾನಸ ಅಂಧರ ಪುಟ್ ಬಾಲ್ ನಲ್ಲಿ ಭಾರತ ಕ್ಯಾಪ್ಟನ್ ಆಗಿದ್ದರು. ಹಲವು ಪಂದ್ಯಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದರು.

ಬ್ರೈನ್ ಲಿಪಿ ಮೂಲಕ ಎಎಸ್ಪಿ ಮಾಡಿದ ಭದ್ರಾವತಿ ಮೂಲದ ಯುವತಿ ಮಾನಸ ಐಎಎಸ್ ಕನಸು ಕಂಡಿದ್ದರು. ಮಾನಸ ಅದಕ್ಕಾಗಿ ಬೆಂಗಳೂರಿನಲ್ಲಿ ಅಭ್ಯಾಸ ಮಾಡುತ್ತಿದ್ದರು. ಐಎಎಸ್ ತನ್ನ ಪರಮ ಗುರಿ ಎಂದುಕೊಂಡಿದ್ದ ಮಾನಸ ದೇವರ ಬಳಿ ಆಶಿರ್ವಾದ ಪಡೆಯಲೆಂದು ಕುಟುಂಬಸ್ಥರೊಂದಿಗೆ ಹೋಗಿದ್ದರು ಎಂದು ಅವರ ಸಮೀಪ ಬಂಧುಗಳು ಹೇಳುತ್ತಾರೆ.

ಅಪಘಾತದಲ್ಲಿ 13 ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ