October 5, 2024

ಟಿ.20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೇಡ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದೆ. ನಿನ್ನೆ ವೆಸ್ಟ್ ಇಂಡೀಶ್ ನ ಗಯಾನದಲ್ಲಿ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಭಾರತ ತಂಡ ಆಂಗ್ಲರ ವಿರುದ್ಧ ಸುಲಭ ಜಯ ಪಡೆದು ಫೈನಲ್ ಪ್ರವೇಶಿಸಿದೆ.

ಅಕ್ಷರ್​ ಪಟೇಲ್​(23ಕ್ಕೆ 3), ಕುಲ್​ದೀಪ್​ ಯಾದವ್​(19ಕ್ಕೆ 3) ಜೋಡಿಯ ಸ್ಪಿನ್​ ದಾಳಿ ಹಾಗೂ ರೋಹಿತ್​ ಶರ್ಮ(57) ಅವರ ಅರ್ಧಶತಕದ ನೆರವಿನಿಂದ ಭಾರತ  ಇಂಗ್ಲೆಂಡ್​ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ 68 ರನ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ 10 ವರ್ಷಗಳ ಬಳಿಕ ಫೈನಲ್​ ಪ್ರವೇಶಿಸಿದ ಸಾಧನೆ ಮಾಡಿದೆ. ಜತೆಗೆ 2022ರ ಸೆಮಿಫೈನಲ್​ ಪಂದ್ಯದ ಸೋಲಿನ ಸೇಡು ತೀರಿಸಿಕೊಂಡಿದೆ. ಶನಿವಾರ ಬಾರ್ಬಡೋಸ್​ನಲ್ಲಿ ನಡೆಯುವ ಫೈನಲ್​ ಪಂದ್ಯದಲ್ಲಿ ರೋಹಿತ್​ ಪಡೆ ದಕ್ಷಿಣ ಆಫ್ರಿಕಾದ ಸವಾಲು ಎದುರಿಸಲಿದೆ.

ಟಾಸ್ ಗೆದ್ದು ಇಂಗ್ಲೇಂಡ್ ತಂಡ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕ ವಿರಾಟ್ ಕೊಹ್ಲಿ ಯವರ ವಿಕೆಟ್ ಬೇಗನೆ ಕಳೆದುಕೊಂಡಿತು. ರಿಷಬ್ ಪಂತ್ ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಮೂರನೇ ವಿಕೆಟ್ ಗೆ ಜೊತೆಯಾದ ನಾಯಕ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಉತ್ತಮ ಜೊತೆಯಾಟವಾಡಿದರು. ಅಂತಿಮವಾಗಿ ಭಾರತ 7 ವಿಕೆಟ್ ನಷ್ಟಕ್ಕೆ 171 ರನ್ ಗಳಲ್ಲಿ ಕೆಲಹಾಕಿತು.

ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೇಂಡ್ ಭಾರತ ಬೌಲರ್ ಗಳ ಎದುರು ರನ್ ಗಳಿಸಲು ಪರದಾಡಿತು, ಇಂಗ್ಲೆಂಡ್​ ನಾಟಕೀಯ ಕುಸಿತ ಕಂಡು 16.4 ಓವರ್​ಗಳಲ್ಲಿ 103 ರನ್​ಗೆ ಸರ್ವಪತನ ಕಂಡಿತು.

ಈ ಮೂಲಕ ಹಾಲಿ ಟಿ 20 ಚಾಂಪಿಯನ್ ಇಂಗ್ಲೇಂಡ್ ತಂಡವನ್ನು ಮಣಿಸುವ ಮೂಲಕ 2022 ರ ಟಿ.20 ವಿಶ್ವಕಪ್ ಸೆಮಿಫೈನಲ್ ಸೋಲಿಗೆ ಭಾರತ ಸೇಡು ತೀರಿಸಿಕೊಂಡಿತು. 10 ವರ್ಷಗಳ ನಂತರ ಟಿ-20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ.

ಟೂರ್ನಿಯಲ್ಲಿ ಆಜೇಯರಾಗಿ ಫೈನಲ್ ಪ್ರವೇಶಿಸಿರುವ ಭಾರತ ಮತ್ತು ದಕ್ಷಿಣ ಆಪ್ರಿಕಾ ನಡುವಿನ ಶನಿವಾರದ ಫೈನಲ್ ಕದನ ಈಗ ತೀವ್ರ ಕುತೂಹಲ ಕೆರಳಿಸಿದೆ.

India  (20 ovs maximum)
BATTING R B M 4s 6s SR
b Rashid 57 39 57 6 2 146.15
b Topley 9 9 10 0 1 100.00
c Bairstow b Curran 4 6 12 0 0 66.66
c Jordan b Archer 47 36 40 4 2 130.55
c Curran b Jordan 23 13 17 1 2 176.92
not out 17 9 24 2 0 188.88
c †Buttler b Jordan 0 1 1 0 0 0.00
c Salt b Jordan 10 6 10 0 1 166.66
not out 1 1 1 0 0 100.00
Extras (lb 2, w 1) 3
TOTAL 20 Ov (RR: 8.55) 171/7
Fall of wickets: 1-19 (Virat Kohli, 2.4 ov), 2-40 (Rishabh Pant, 5.2 ov), 3-113 (Rohit Sharma, 13.4 ov), 4-124 (Suryakumar Yadav, 15.4 ov), 5-146 (Hardik Pandya, 17.4 ov), 6-146 (Shivam Dube, 17.5 ov), 7-170 (Axar Patel, 19.5 ov) • DRS
BOWLING O M R W ECON 0s 4s 6s WD NB
3 0 25 1 8.33 8 3 1 0 0
4 0 33 1 8.25 7 4 0 0 0
2 0 25 1 12.50 3 2 2 0 0
4 0 25 1 6.25 9 3 0 0 0
3 0 37 3 12.33 4 0 4 0 0
4 0 24 0 6.00 9 1 1 1 0
England  (T: 172 runs from 20 ovs)
BATTING R B M 4s 6s SR
b Bumrah 5 8 20 0 0 62.50
c †Pant b Patel 23 15 13 4 0 153.33
st †Pant b Patel 8 10 18 0 0 80.00
b Patel 0 3 2 0 0 0.00
b Kuldeep Yadav 25 19 21 3 0 131.57
lbw b Kuldeep Yadav 2 4 4 0 0 50.00
run out (Kuldeep Yadav/Patel) 11 16 24 0 0 68.75
lbw b Kuldeep Yadav 1 5 6 0 0 20.00
lbw b Bumrah 21 15 17 1 2 140.00
run out (Yadav) 2 2 2 0 0 100.00
not out 3 3 6 0 0 100.00
Extras (lb 2) 2
TOTAL 16.4 Ov (RR: 6.18) 103
Fall of wickets: 1-26 (Jos Buttler, 3.1 ov), 2-34 (Phil Salt, 4.4 ov), 3-35 (Jonny Bairstow, 5.1 ov), 4-46 (Moeen Ali, 7.1 ov), 5-49 (Sam Curran, 8.1 ov), 6-68 (Harry Brook, 10.4 ov), 7-72 (Chris Jordan, 12.2 ov), 8-86 (Liam Livingstone, 14.5 ov), 9-88 (Adil Rashid, 15.2 ov), 10-103 (Jofra Archer, 16.4 ov) • DRS
BOWLING O M R W ECON 0s 4s 6s WD NB
2 0 17 0 8.50 5 3 0 0 0
2.4 0 12 2 4.50 8 1 0 0 0
4 0 23 3 5.75 10 0 1 0 0
4 0 19 3 4.75 12 2 0 0 0
3 0 16 0 5.33 6 1 0 0 0
1 0 14 0 14.00 1 1 1 0 0

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ