October 5, 2024

ಶ್ರೀ ಕ್ಷೇತ್ರ ಧರ್ಮಸ್ಥಳ ಜನಜಾಗೃತಿ ವೇದಿಕೆ ವತಿಯಿಂದ ಕಳಸದಲ್ಲಿ ಮಧ್ಯವರ್ಜನ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಶಿಬಿರದ ಗುಂಪು ಸಲಹೆ ಕಾರ್ಯಕ್ರಮದಲ್ಲಿ  ಶಾಸಕಿ ಶ್ರೀಮತಿ ನಯನ ಮೊಟ್ಟಮ್ಮ ರವರು ಪಾಲ್ಗೊಂಡು ಮಾತನಾಡುತ್ತಾ ; ಮದ್ಯಪಾನ ಹಾಗೂ ಮಾದಕ ವಸ್ತುಗಳು ಸಮಾಜದ ದೊಡ್ಡ ಪಿಡುಗು. ಮದ್ಯ ವ್ಯಸನಿಗಳು ಅದರಿಂದ ದೂರ ಆಗಿ ತಮ್ಮ ಆರೋಗ್ಯ ಕಾಪಾಡಿಕೊಂಡು ತಮ್ಮ ನಂಬಿರುವ ಹೆಂಡತಿ ಮಕ್ಕಳು ಕುಟುಂಬವನ್ನ ಪಾಲನೆ ಮಾಡುವತ್ತ ಗಮನಹರಿಸಬೇಕು ಎಂದು ಕರೆ ನೀಡಿದರು.

ಶ್ರೀ ಧರ್ಮಸ್ಥಳ ಶ್ರೀಮಂಜುನಾಥೇಶ್ವರ ಧರ್ಮೋತ್ತಾನ ಟ್ರಸ್ಟಿನ ಟ್ರಸ್ಟಿ ಆದ ಪ್ರಶಾಂತ್ ಚಿಪ್ರಗುತ್ತಿ ಶಿಬಿರಾರ್ಥಿಗಳಿಗೆ ಕೌನ್ಸಿಲಿಂಗ್ ಮಾಡುತ್ತಾ, ಭಗವಂತ ಶ್ರೀ ಮಂಜುನಾಥೇಶ್ವರನ ಸೃಷ್ಟಿಯಲ್ಲಿ ಮನುಷ್ಯನ ದೇಹವನ್ನು ನೀರು, ಹಾಲು, ಮಜ್ಜಿಗೆ,ಹಣ್ಣಿನ ರಸ, ಎಳೆನೀರು ಇದನ್ನು ಸೇವಿಸಲು ವಿನ್ಯಾಸಗೊಳಿಸಿದ್ದಾರೆ. ಮದ್ಯಪಾನ ಮಾಡಲು ನಮ್ಮ ಶರೀರವನ್ನು ವಿನ್ಯಾಸಗೊಳಿಸಿಲ್ಲ. ನಾವು ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದೇವೆ. ಅವರು ಉದಾಹರಣೆಯನ್ನು ಕೊಡುತ್ತಾ ನಾವು ಬಾಲ್ಯದಲ್ಲಿದ್ದಾಗ ಕೆಲವರು ಹಿಂದೆ ಪೆಟ್ರೋಲ್ ಬೈಕಿಗೆ ಸಿಮೆಣ್ಣೆ ಹಾಕಿ ಓಡಿಸುತ್ತಿದ್ದರು ಅದರಿಂದ ವಾಯುಮಾಲಿನ್ಯ ಹಾಗೂ ಬೈಕಿನ ಇಂಜಿನ್ ಬೇಗ ಹಾಳಾಗುತ್ತಿತ್ತು. ಹಾಗೆಯೇ ಯಾವ ಕಾರಣಕ್ಕಾಗಿ ಯಾವುದನ್ನು ವಿನ್ಯಾಸಗೊಳಿಸಿದ್ದಾರೋ ಅದನ್ನೇ ನಾವು ಹಾಕಬೇಕು. ಮದ್ಯಪಾನಕ್ಕಾಗಿ ಮಾದಕ ವಸ್ತುಗಳಿಗಾಗಿ ನಮ್ಮ ದೇಹ ವಿನ್ಯಾಸಗೊಂಡಿಲ್ಲ, ಮಾದಕ ವಸ್ತುಗಳ ಸೇವನೆ ಮನುಷ್ಯನನ್ನು ವಿನಾಶದತ್ತ ಕೊಂಡೊಯ್ಯುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಧ್ಯವರ್ಜನ ಶಿಬಿರದ ಅಧ್ಯಕ್ಷರಾದ ಧರಣೇಂದ್ರ, ಯೋಜನಾಧಿಕಾರಿ ಸತೀಶ್, ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಬ್ರಹ್ಮದೇವ, ವಿಶ್ವನಾಥಗೌಡ, ಶ್ರೇಣಕ್ ಹಾಗೂ ಇತರರು ಇದ್ದರು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ