October 5, 2024

ಮಾದಕ ದ್ರವ್ಯ ಸೇವನೆಯಿಂದ ಜೀವನ ನಾಶವಾಗುತ್ತದೆ.ಚಿಕ್ಕ ವಯಸ್ಸಿನಲ್ಲೇ ವಿದ್ಯಾರ್ಥಿಗಳು ಕೆಟ್ಟ ಚಟುವಟಿಕೆಗೆ ಬಲಿಯಾಗದೇ, ಸದೃಢ ಭವಿಷ್ಯದ ಬಗ್ಗೆ ಗಮನ ಹರಿಸುವುದು ಅತಿ ಮುಖ್ಯ ಎಂದು ಹಾಸನ ಪಾಳ್ಯದ ಆಪ್ತ ಸಮಾಲೋಚಕ ಫಾ.ಸಿರಿಲ್ ಆನಂದ್ ಹೇಳಿದರು.

ಬಣಕಲ್ ಕಪುಚಿನ್ ಕೃಷಿಕ ಸೇವಾಕೇಂದ್ರ, ಬಣಕಲ್ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜ್ ಹಾಗೂ ಬಣಕಲ್ ಪೊಲೀಸ್ ಠಾಣೆಯ ಸಂಯುಕ್ತ ಆಶ್ರಯದಲ್ಲಿ ಬಣಕಲ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಮಾದಕ ದ್ರವ್ಯ ನಿವಾರಣಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಾದಕ ದ್ರವ್ಯ ಸೇವನೆ ನಮ್ಮ ಸಮಾಜಕ್ಕೆ ಅಂಟಿದ ಜಟಿಲ ರೋಗವಾಗಿದೆ.ಕೆಲ ಮಕ್ಕಳು ಕ್ಷಣಿಕ ಸುಖಕ್ಕಾಗಿ ತಾವು ಹಾಳಾಗುವುದರೊಂದಿಗೆ ಪೋಷಕರ ನೆಮ್ಮದಿ ಹಾಳು ಮಾಡುತ್ತಾರೆ.ಮಕ್ಕಳು ಇಂತಹ ದುಶ್ಚಟಗಳಿಗೆ ಬಲಿಯಾಗದೇ ತಮ್ಮ ಉತ್ತಮ ಭವಿಷ್ಯ ರೂಪಿಸುವಲ್ಲಿ ಚಿಂತಿಸುವ ಅಗತ್ಯವಿದೆ.ಉತ್ತಮ ಸಮಾಜ ಕಟ್ಟುವಲ್ಲಿ ಇಂದಿನ ಮಕ್ಕಳ ಪಾತ್ರ ಬಹುಮುಖ್ಯ.ಯುವ ಪೀಳಿಗೆಯು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕು’ಎಂದರು.

ಬಣಕಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜೈಶಂಕರ್  ಮಾತನಾಡಿ ; ಇಂದಿನ ಯುವಕರು ದುಶ್ಚಟಗಳಿಂದ ದೂರವಿರಬೇಕು.ಸಮಾಜಕ್ಕೆ ಮಾದರಿಯಾಗಿ ಮೊಬೈಲ್ ದಾಸರಾಗದೇ ಉತ್ತಮ ಪುಸ್ತಕಗಳನ್ನು ಓದುವ ಮೂಲಕ  ಉತ್ತಮ ದಾರಿಯಲ್ಲಿ ನಡೆಯಬೇಕು’ಎಂದರು.

ಬಣಕಲ್ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಕೌಶಿಕ್ ಮಾತನಾಡಿ ‘ಮಾದಕ ದ್ರವ್ಯಗಳನ್ನು ಕದ್ದು ಮುಚ್ಚಿ  ಸೇವಿಸುವುದು ಕಾನೂನು ಬಾಹಿರವಾಗಿದೆ.ಇವುಗಳ ಸೇವನೆಯಿಂದ ಶರೀರ, ಮನಸು ಹಾಳಾಗುತ್ತದೆ.ಡ್ರಗ್ಸ್ ಮಾರಾಟ ಮಾಡುವವರ ಬಗ್ಗೆ ಮಾಹಿತಿ ಪೊಲೀಸರಿಗೆ ಗೌಫ್ಯವಾಗಿ ತಿಳಿಸಿದರೆ ಇಂತಹವುಗಳನ್ನು ನಿಷೇಧಿಸಲು ಸಾಧ್ಯವಾಗುತ್ತದೆ.ಬೋಗ ಸುಖದ ಅಗತ್ಯ ಮತ್ತು ಮಾದಕತೆಯ ಅಗತ್ಯ ಸಹಜವಾಗಿಯೇ ಸಮಾಜದಲ್ಲಿ ಹೆಚ್ಚಾಗುತ್ತಿದೆ.ಇಂತಹ ಅಪರಾಧ ತಡೆಯಲು ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು.ಮಾದಕ ವಸ್ತುಗಳನ್ನು ವಿರೋಧಿಸಲು ಮಕ್ಕಳು ಇಂದೇ ಪ್ರತಿಜ್ಞೆ ಮಾಡಿ’ಎಂದರು.

ಈ ಸಂದರ್ಭದಲ್ಲಿ ಬಣಕಲ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಿ.ಎಚ್.ಶ್ರೀನಿವಾಸ್, ಸಮಿತಿ ಉಪಾಧ್ಯಕ್ಷ ಜಖಾವುಲ್ಲಾ, ಶಿಕ್ಷಕರಾದ ವಲ್ಸಮ್ಮ ಪೌಲ್ಸನ್,ಪ್ರವೀಣ್, ಪ್ರತೀಕ್, ವಿಮುಕ್ತಿ ಸಂಸ್ಥೆಯ ಸಂಯೋಜಕಿ ವಿಂದ್ಯಾ ಯೋಗೀಶ್, ಸಿದಂತ್ ಪುತ್ತೂರು, ಬಿ.ಸುಕನ್ಯಾ, ಡಿ.ಪಿ.ಪ್ರಿಯದರ್ಶಿನಿ, ಎಚ್.ಎಚ್.ಅಕ್ಷತಾ,ರವೀಂದ್ರ, ಸುರೇಶ್ ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ