October 5, 2024

ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಹೊಸನಗರ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಸಹಕಾರಿ ಧುರೀಣ ಮುಗ್ರಹಳ್ಳಿ ಎಂ ಎಂ ಪರಮೇಶ್ ಸತತ ನಾಲ್ಕನೇ ಬಾರಿಗೆ ಅವಿರೋಧ ಆಯ್ಕೆಯಾಗುವ ಮೂಲಕ ದಾಖಲೆ ಮಾಡಿದ್ದಾರೆ.

ಸಹಕಾರಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಪರಮೇಶ್ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಮುಗ್ರಹಳ್ಳಿ ಮೂಲದವರು.

1980ನೇ ಸಾಲಿನಲ್ಲಿ  ಮುಗ್ರಹಳ್ಳಿ ಗ್ರಾಮದಿಂದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‍ಪೇಟೆಗೆ ಉದ್ಯೋಗವನ್ನರಸಿ ಹೋಗಿ ಅಲ್ಲಿಯೇ ನೆಲೆಸಿದ್ದಾರೆ. ರಿಪ್ಪನ್ ಪೇಟೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ತಮ್ಮ ವೃತ್ತಿಜೀವನದೊಂದಿಗೆ ಜನಸಾಮಾನ್ಯರ ಒಡನಾಡಿಯಾಗಿ 1991 ನೇ ಸಾಲಿನಲ್ಲಿ ರಿಪ್ಪನ್ ಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ ಮೊದಲಬಾರಿಗೆ ಚುನಾಯಿತರಾದರು. ಇದರ ಜೊತೆಗೆ 1994 ರಲ್ಲಿ ರಿಪ್ಪನ್ ಪೇಟೆ ಗ್ರಾಮಪಂಚಾಯತ್ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸಾರ್ವಜನಿಕ ವಲಯದ ಭರವಸೆಯ ನಾಯಕರೆನಿಸಿಕೊಳ್ಳುತ್ತಾರೆ.

ಕ್ರಿಯಾಶೀಲಾತ್ಮಕ ಆಡಳಿತ ಚಟುವಟಿಕೆಗಳಿಂದ ಗಮನಸೆಳೆದ ಎಂ ಎಂ ಪರಮೇಶ್ 1999 ರಲ್ಲಿ ರಿಪ್ಪನ್ ಪೇಟೆ ಸಹಕಾರ ಸಂಘದ ಅಧ್ಯಕ್ಷರಾಗಿ ಗದ್ದಿಗೆ ಏರುತ್ತಾರೆ. ಆ ಕಾಲದಲ್ಲಿ ಸುಮಾರು 40 ಲಕ್ಷದಷ್ಟು ನಷ್ಟದಲ್ಲಿದ್ದ ಸಂಘವನ್ನು ಪುನಶ್ಚೇತನಗೊಳಿಸುವ ನಿರಂತರ ಪ್ರಯತ್ನ ಫಲನೀಡಿದ್ದು ಪ್ರಸ್ತುತ ಹೊಸನಗರ ತಾಲ್ಲೂಕಿನಲ್ಲಿಯೇ ಹೆಚ್ಚು ಆರ್ಥಿಕ ವಹಿವಾಟು ನೆಡೆಸುತ್ತಿರುವ ಸಂಘ ಎಂಬ ಹೆಗ್ಗಳಿಕೆ ಹೊಂದಿದ್ದು ಉತ್ತಮ ಸಹಕಾರಿ ಸಂಘವೆಂಬ ಹಲವಾರು ಪ್ರಶಸ್ತಿಯನ್ನು ಪಡೆದುಕೊಂಡಿದೆ. ಸುಮಾರು 2 ಕೋಟಿ ರೂಪಾಯಿಗಳ ಸಂಘದ ಸ್ವಂತ ಕಟ್ಟಡವನ್ನು ಸರ್ಕಾರದ ಯಾವುದೇ ಸಹಾಯಧನವನ್ನು ಪಡೆಯದೆ ಮತ್ತು ಕಟ್ಟಡಕ್ಕೆ ಯಾವುದೇ ಸಾಲವನ್ನು ಪಡೆಯದೇ ದಾನಿಗಳಿಂದನೂ ಆರ್ಥಿಕ ನೆರವು ಪಡೆಯದೇ ಸಂಘದ ಸ್ವಂತ ಲಾಭದ ಬಂಡವಾಳದಿಂದ ಕಟ್ಟಿರುತ್ತಾರೆ.

ಶಿವಮೊಗ್ಗ ಜಿಲ್ಲಾ ಸಹಕಾರಿ ದಿಗ್ಗಜ ಡಾ.ಆರ್ ಎಂ ಮಂಜುನಾಥಗೌಡರ ಕಟ್ಟಾ ಬೆಂಬಲಿಗರಾಗಿದ್ದಾರೆ. ಆರ್ ಎಂ ಮಂಜುನಾಥಗೌಡರ ಬಳಗ ಸೇರಿದ ಇವರು 2009ರಲ್ಲಿ ಪ್ರಥಮ ಬಾರಿಗೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿರುತ್ತಾರೆ. ಮಂಜುನಾಥಗೌಡರ ಆಪ್ತವಲಯದಲ್ಲಿಯೇ ನಿಷ್ಠೆಹೊಂದಿರುವ ಪರಿಣಾಮ 2014, 2019 ಹಾಗೂ 2024 ರಲ್ಲಿ ಜಿಲ್ಲೆಯಲ್ಲಿಯೇ ಅವಿರೋಧವಾಗಿ ಆಯ್ಕೆಯಾದ ಏಕೈಕ ನಿರ್ದೇಶಕರಾಗಿ ದಾಖಲೆ ನಿರ್ಮಿಸಿದ್ದಾರೆ.

ಇವರ ಧರ್ಮಪತ್ನಿ ಶ್ರೀಮತಿ ವೇದಾವತಿ ಎಂ ಎಂ ಪರಮೇಶ್‍ರವರು ಪ್ರಸ್ತುತ ರಿಪ್ಪನ್ ಪೇಟೆ ಗ್ರಾಂಪಂಚಾಯತಿಯ ಸದಸ್ಯರಾಗಿ ಸೇವೆ ಸಲ್ಲಿಸಿತ್ತಿದ್ದಾರೆ. ಆರ್ ಎಂ ಮಂಜುನಾಥಗೌಡರ ಗರಡಿಯಲ್ಲಿ ಪಳಗಿದ ಎಂ ಎಂ ಪರಮೇಶ್‍ರವರು ಸಹಕಾರಿ ವಲಯದ ತಂತ್ರ ಪ್ರತಿತಂತ್ರ ಮೈಗೂಡಿಸಿಕೊಂಡಿದ್ದು ಪ್ರತಿಭಾರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ತನ್ನ ತಂಡದ ಎಲ್ಲಾ ಸದಸ್ಯರ ಗೆಲ್ಲಿಸುವ ಸಾಮಥ್ರ್ಯವನ್ನು ಹೊಂದಿದ್ದು 25 ವರ್ಷಕ್ಕಿಂತಲೂ ಹೆಚ್ಚು 9ನೇ ಬಾರಿಗೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆರ್ ಎಂ ಮಂಜುನಾಥಗೌಡರ ಬೆಂಬಲಿಗರಾಗಿ  ಪ್ರಸ್ತುತ ಈಗ ಕಾಂಗ್ರೇಸ್ ಪಕ್ಷದಲ್ಲಿ ಮುಖಂಡರಾಗಿದ್ದಾರೆ. ಪರಮೇಶ ಅವರಿಗೆ ಎಲ್ಲಾ ಪಕ್ಷಗಳ ಪಕ್ಷಾತೀತ   ಸಹಕಾರ ದೊರೆಯುತ್ತಿರುವ ಕಾರಣ ಸೋಲಿಲ್ಲದ ಸರದಾರರೆನಿಸಿಕೊಂಡಿದ್ದಾರೆ.

ಸಹಕಾರಿ ಕ್ಷೇತ್ರವಲ್ಲದೇ ಪ್ರಸ್ತುತ ಹೊಸನಗರ ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಮತ್ತು ಹೊಸನಗರ ತಾಲ್ಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಸಮಾಜದ ಸೇವೆ ಮಾಡುತ್ತಿದ್ದಾರೆ.

ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿದ್ದು ಅನೇಕ ಸಹಕಾರ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತೋಟೋತ್ಪನ್ನ ಬೆಳೆಗಳ ಸಂಸ್ಕರಣ ಅಭಿವೃಧ್ಧಿ ಮಾರಾಟ ಸಹಕಾರ ಸಂಘ, ವಿಶ್ವಮಾನವ ಪತ್ತಿನ ಸಹಕಾರ ಸಂಘ ರಿಪ್ಪನ್ ಪೇಟೆ, ಮಲೆನಾಡು ಬಾಳೆಕಾಯಿ ಮಾರಾಟ ಸಹಕಾರ ಸಂಘಗಳ ಸ್ಥಾಪಕರಾಗಿದ್ದು, ಶಿವಮೊಗ್ಗದ ಕೊಡಚಾದ್ರಿ ಗೃಹ ನಿರ್ಮಾಣ ಮತ್ತು ಮಾರಾಟ ಸಹಕಾರ ಸಂಘದ ಸಂಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದು ಮತ್ತು ಕರ್ನಾಟಕ ರಾಜ್ಯ ಅಡಿಕೆ ಮಾರಾಟ ಸಹಕಾರ ಸಂಘ ಇದರಲ್ಲಿ 10 ವರ್ಷ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಹೊಸನಗರದ ವ್ಯವಸಾಯೋತ್ಪನ್ನ ಮಾರುಕಟ್ಟೆಯು ಸುಮಾರು 45 ವರ್ಷಗಳಿಂದ ಮುಚ್ಚಿ ಹೊಗಿದ್ದನ್ನು ಪುನರ್ ಸ್ಥಾಪಿಸಿ ಕ್ರಿಯಾಶೀಲವಾಗುವಂತೆ ಮಾಡಿದ್ದಾರೆ. ಅನೇಕ ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿದ್ದಾರೆ.

ಇದೀಗ ಶಿವಮೊಗ್ಗ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ನಾಲ್ಕನೇ ಬಾರಿ  ಆಯ್ಕೆಯಾಗಿರುವ ಪರಮೇಶ್ ಅವರಿಗೆ ಕುಟುಂಬಸ್ಥರು, ಸ್ನೇಹಿತರು ಮತ್ತು ಮುಗ್ರಹಳ್ಳಿ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ