October 5, 2024

ಚಿಕ್ಕಮಗಳೂರು ಜಿಲ್ಲಾಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಡಾ. ಬಿ. ಗೋಪಾಲಕೃಷ್ಣ ಅವರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳ ಇತಿಹಾಸ ಪರಂಪರೆಯನ್ನು ದಾಖಲಿಸುವ ಮಹತ್ವದ ಯೋಜನೆಯನ್ನು ಕೈಗೆತ್ತಿಕೊಂಡು “ನಮ್ಮ ಊರು: ನಮ್ಮ ಬೇರು” ಶೀರ್ಷಿಕೆಯಲ್ಲಿ ಗ್ರಾಮ ಸಂಸ್ಕೃತಿಯ ಬೇರುಗಳನ್ನು ಅನ್ವೇಷಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜಿಲ್ಲೆಯಲ್ಲೆಲ್ಲಾ ತಾಲೂಕುಗಳ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಕಾರಾತ್ಮಕ ಸ್ಪಂದನೆಯಿಂದ ಈ ಯೋಜನೆಗೆ ವಿಶಿಷ್ಟ ರೀತಿಯ ಮಹತ್ವ ದೊರೆತಿದೆ. ಅವುಗಳಲ್ಲಿ ಮುಖ್ಯವಾದುದು ಹಲವಾರು ಹೊಸ ಶಾಸನಗಳ ಶೋಧನೆ.

ಕಡೂರು ತಾಲೂಕಿನ ಬಿಸಲೆರೆ ಗ್ರಾಮ ಪಂಚಾಯತಿ ಪಿಡಿಓ ನಂಜುಂಡಮ್ಮ ಮತ್ತವರ ಕಚೇರಿ ಸಹೋದ್ಯೋಗಿಗಳು ಗ್ರಾಮ ಸಂಸ್ಕೃತಿಯ ಪರಂಪರೆಯ ಅನ್ವೇಷಣಾ ಸಮಯದಲ್ಲಿ ದೊರೆತ ಶಾಸನವನ್ನು ಡಾ. ಮಂಜುಳಾ ಹುಲ್ಲಹಳ್ಳಿಯವರಿಗೆ ಕಳಿಸಿಕೊಟ್ಟರು. ಇದು ಈವರೆಗೆ ದಾಖಲಾಗದ ಶಾಸನವೆಂದು ಮನಗಂಡ ಮಂಜುಳಾ ಅವರು ಕೂಡಲೇ ಮೈಸೂರಿನ ಹಿರಿಯ ಶಾಸನತಜ್ಞರಾದ ಶ್ರೀ ಎಚ್. ಎಂ. ನಾಗರಾಜರಾವ್ ಅವರನ್ನು ಸಂಪರ್ಕಿಸಿದರು. ನಾಗರಾಜರಾವ್ ಅವರು ಈ ಶಾಸನವನ್ನುಬಹೊಸಗನ್ನಡಕ್ಕೆ ಪರಿವರ್ತಿಸಿ ಓದುವ ಮೂಲಕ ಹೊಯ್ಸಳ ಇತಿಹಾಸದ ಮಹತ್ವದ ಆಯಾಮದ ಮೇಲೆ ಬೆಳಕು ಹಾಯಿಸಿದ್ದಾರೆ.

ಹೊಯ್ಸಳ ರಾಜ್ಯದ ವಿಶಿಷ್ಟ ದೊರೆ ವೀರ ಎರೆಯಂಗ ಪೊಯ್ಸಳದೇವನು ಬೇಲೂರು ರಾಜಧಾನಿಯಿಂದ ರಾಜ್ಯವಾಳುವ ಸಂದರ್ಭದಲ್ಲಿ ಇವನ ಮೊದಲ ಮಗ ಒಂದನೇ ಬಲ್ಲಾಳ ಯುವರಾಜನಾಗಿರುತ್ತಾನೆ. ಆ ಸಮಯದಲ್ಲಿ ಅಂದರೆ, ಈ ಶಾಸನದ ಕಾಲವಾದ 12-05-1101ರಲ್ಲಿ ಪೊಯ್ಸಳದೇವನ ಬಿರುದಾವಳಿ ಮತ್ತು ಆತನ ಮನೋನಯನವಲ್ಲಭೆ ಎನಿಸಿದ ಬಾಚಲದೇವಿಯ ವರ್ಣನೆ ವಿಶೇಷವಾಗಿದೆ. ವಿಕ್ರಮಕಾಲದ [25] ವಿಷು ಸಂವತ್ಸರ, ಜೇಷ್ಟಮಾಸ, ಏಕಾದಶಿ, ಆದಿವಾರದಲ್ಲಿ ಶ್ರೀಮತು ಬಾಚಲದೇವಿಯರು ಬಿಸಿಲೆರೆಯನ್ನು ಆಳ್ವಿಕೆ ಮಾಡುತ್ತಿದ್ದುದನ್ನೂ ಉಲ್ಲೇಖಿಸುವ ಶಾಸನವು ಅವಳು ಕೆರೆಯನ್ನು ಕಟ್ಟಿಸಿ, ಬಾಚೇಶ್ವರ ದೇವಾಲಯವನ್ನು ನಿರ್ಮಾಣವನ್ನು ಮಾಡಿ ಬಿಟ್ಟ ದತ್ತಿಯ ವಿವರ ಹೊಂದಿದೆ.

ಚಿಕ್ಕಮಗಳೂರು ಸಂಸ್ಕೃತಿ ಪರಂಪರೆಯ ಅರಿವನ್ನು ಈ ಜಿಲ್ಲೆಯ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕೆನ್ನುವ ಹಂಬಲದಿಂದ “ನನ್ನ ಊರು ನನ್ನ ಬೇರು”ಎನ್ನುವ ಪ್ರಧಾನ ಶೀರ್ಷಿಕೆಯಲ್ಲಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳ ಸಂಸ್ಕೃತಿ ಪರಂಪರೆಯನ್ನು ಅನ್ವೇಷಿಸಲು ಅಗತ್ಯ ಕ್ರಮ ವಹಿಸುತ್ತಿರುವ ಈ ಸಂದರ್ಭದಲ್ಲಿ ಈ ಶಾಸನವನ್ನು ಶೋಧಿಸಿರುವ ನಂಜುಂಡಮ್ಮ ಅವರ ತಂಡವನ್ನು ಮತ್ತು ಇದನ್ನು ಅರ್ಥೈಸಿ ಕೊಟ್ಟಿರುವ ಶಾಸನತಜ್ಞ ನಾಗರಾಜರಾವ್ ಅವರನ್ನು, ಈ ಬಗೆಗೆ ಕಾಳಜಿ ವಹಿಸಿ ಶಾಸನಗಳ ಅನ್ವೇಷಣೆಗೆ ಪ್ರೋತ್ಸಾಹದ ಕೊಂಡಿಯಾಗಿರುವ ಡಾ. ಮಂಜುಳಾ ಹುಲ್ಲಹಳ್ಳಿ ಅವರನ್ನು ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ|| ಗೋಪಾಲಕೃಷ್ಣ ಅವರು ಅಭಿನಂದಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ