October 5, 2024

ಸರ್ಕಾರ ಮದ್ಯಪಾನದಿಂದ ಗಳಿಸುವ ಹಣವು ಅನೈತಿಕ ವರಮಾನವಾಗಿದ್ದು, ಸತ್ಯದ ಮಾರ್ಗದಲ್ಲಿ ಹಣವನ್ನು ಸಂಪಾದಿಸಬೇಕೆಂಬ ಮೌಲ್ಯಗಳನ್ನು  ನಾಶ ಮಾಡಿದಂತೆ ಆಗಿದೆ. ಸರಕಾರದ ಈ ನಡೆಗಳಿಂದ ಪ್ರೇರಣೆಗೊಂಡಂತ ಪ್ರಜೆಗಳು ಕೂಡ ಅನೈತಿಕ ಮಾರ್ಗದಲ್ಲಿ ಹಣವನ್ನ ಗಳಿಸುವಂತಹ ಕೆಲಸಕ್ಕೆ ಕೈ ಹಾಕೋ ಮನಸ್ಥಿತಿಯನ್ನು ಸರಕಾರವೇ ಬೆಳೆಸಿದಂತೆ ಆಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಟ್ರಸ್ಟಿನ  ಟ್ರಸ್ಟಿ ಆದ ಪ್ರಶಾಂತ್ ಚಿಪ್ರಗುತ್ತಿ  ಹೇಳಿದರು.

ಇವರು ಇತ್ತೀಚೆಗೆ ಕೊಪ್ಪ ತಾಲೂಕು ಕುಂಚೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಜನಜಾಗೃತಿ ವೇದಿಕೆಯ ವತಿಯಿಂದ 1799 ನೆ ಮದ್ಯವರ್ಜನ ಶಿಬಿರದ  ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಮದ್ಯಪಾನದಿಂದ ಸಮಾಜದಲ್ಲಿ ಹತ್ತು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಕೌಟುಂಬಿಕ ಮತ್ತು ಸಾಮಾಜಿಕ ಸಹಜೀವನ ನಾಶವಾಗುತ್ತಿದೆ. ಕೌಟುಂಬಿಕ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಮದ್ಯಪಾನಕ್ಕೆ ದಾಸನಾದ ವ್ಯಕ್ತಿ ಆರ್ಥಿಕ ನಷ್ಟ ಅನುಭವಿಸುವುದಲ್ಲದೇ  ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸಾಮಾಜಿಕ ಸ್ವಾಸ್ಥ್ಯ ಕದಡಲು ಕಾರಣವಾಗುತ್ತದೆ ಹಾಗಾಗಿ ಮಧ್ಯಪಾನವನ್ನು ಸರ್ಕಾರ ನಿಷೇಧಿಸಬೇಕೆಂದು ಒತ್ತಾಯಿಸಿದರು.

ಮುಖ್ಯ ಅತಿಥಿಗಳಾದ ಶಾಸಕರಾದ  ಟಿ.ಡಿ ರಾಜೇಗೌಡರು ಮಾತನಾಡಿ ಮದ್ಯಪಾನದಿಂದ ಆರೋಗ್ಯ ಮನಸ್ಸು ಎಲ್ಲವನ್ನು ಹಾಳು ಮಾಡುವುದರಿಂದ ಅದನ್ನು  ತ್ಯಜಿಸಬೇಕು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಪೂಜ್ಯ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಇಂತಹ ಶಿಬಿರಗಳನ್ನು ನಡೆಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ  ಜೆ.ಡಿ.ಎಸ್. ಮುಖಂಡರಾದ ಸುಧಾಕರ ಶೆಟ್ಟಿ, ಜಿಲ್ಲಾ ನಿರ್ದೇಶಕರು ಸದಾನಂದ ಬಂಗೇರ,  ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ ಗೌಡ, ಮದ್ಯವ್ಯರ್ಜನ ಶಿಬಿರದ ಅಧ್ಯಕ್ಷರಾದ ಬಾಲಕೃಷ್ಣ ಭಟ್ ಮತ್ತಿತರರು ಇದ್ದರು.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ