October 5, 2024

ಎಡಗೈ ವೇಗಿ ಅರ್ಶದೀಪ್​ ಸಿಂಗ್​(9ಕ್ಕೆ 4 ವಿಕೆಟ್​) ಅವರ ಮಾರಕ ಬೌಲಿಂಗ್​ ಮತ್ತು ಸೂರ್ಯಕುಮಾರ್​ ಯಾದವ್(50*) ಹಾಗೂ ಶಿವಂ ದುಬೆ(31*) ಜೋಡಿ​ಯ ಸಮಯೋಚಿತ ಬ್ಯಾಟಿಂಗ್​ ನೆರವಿನಿಂದ ಟಿ-20 ವಿಶ್ವಕಪ್ ನಲ್ಲಿ ಅಮೆರಿಕ  ವಿರುದ್ಧ ಭಾರತ ತಂಡ 7 ವಿಕೆಟ್​ಗಳ ಗೆಲುವು ಸಾಧಿಸಿದೆ. ಜತೆಗೆ ಈ ಗೆಲುವಿನೊಂದಿಗೆ ‘ಎ’ ವಿಭಾಗದಿಂದ ಮೊದಲ ತಂಡವಾಗಿ ಸೂಪರ್​-8 ಪ್ರವೇಶ ಪಡೆದಿದೆ.

ನ್ಯೂಯಾರ್ಕ್ ನ ನಾಸೌ ಕೌಂಟಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಅಮೆರಿಕ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 110 ರನ್​ ಬಾರಿಸಿತು. ಭಾರತ ಈ ಸಣ್ಣ ಮೊತ್ತವನ್ನು 18.2 ಓವರ್​ ಎದುರಿಸಿ 3 ವಿಕೆಟ್​ ಕಳೆದುಕೊಂಡು 111 ರನ್​ ಬಾರಿಸಿ ಗೆಲುವಿನ ದಡ ಸೇರಿತು. ಬಲಿಷ್ಠ ಭಾರತ ತಂಡಕ್ಕೆ ಅಮೇರಿಕಾ ಪ್ರಬಲ ಪೈಪೋಟಿ ನೀಡಿ ಕೊನೆಯ ಹಂತದವರೆಗೆ ಪಂದ್ಯವನ್ನು ಕೊಂಡೊಯ್ದು ಗಮನ ಸೆಳೆಯಿತು.

ಸೂರ್ಯದುಬೆ ಆಸರೆ

ಚೇಸಿಂಗ್​ ವೇಳೆ ಭಾರತ ಕೂಡ ಅಮೆರಿಕದಂತೆ ಆರಂಭಿಕ ಆಘಾತ ಎದುರಿಸಿತು. ವಿರಾಟ್​ ಕೊಹ್ಲಿ(0) ಮತ್ತು ರೋಹಿತ್​ ಶರ್ಮ(3) ರನ್​ ಗಳಿಸಿ ವಿಕೆಟ್​ ಕೈಚೆಲ್ಲಿದರು. ಬಳಿಕ ಬಂದ ಪಂತ್​ ಕೂಡ  18 ರನ್​ಗೆ ಆಟ ಮುಗಿಸಿದರು. ಪಾಕ್​ ಮೂಲದ ಅಲಿ ಖಾನ್​ ಎಸೆತಕ್ಕೆ ಕ್ಲೀನ್ ಬೌಲ್ಡ್​ ಆದರು. ಅಲ್ಪ ಮೊತ್ತಕ್ಕೆ ಮೂರು ವಿಕೆಟ್​ ಕಳೆದುಕೊಂಡ ಭಾರತ ರನ್ ಚೇಸ್ ಮಾಡಲು ತಿಣುಕಾಟ ನಡೆಸಿತ್ತು. ಆದರೆ, ಟಿ-20 ಸ್ಪೆಷಲಿಸ್ಟ್ ಸೂರ್ಯಕುಮಾರ್​ ಯಾದವ್​ ಒಂದು ಜೀವದಾನದ ನಡುವೆಯೇ ಸಮಯೋಚಿತ ಬ್ಯಾಟಿಂಗ್​ ನಡೆಸಿ ತಂಡಕ್ಕೆ ನೆರವಾದರು. ಇವರಿಗೆ ಮತ್ತೊಂದು ತುದಿಯಲ್ಲಿ ಶಿವಂ ದುಬೆ ಕೂಡ ಉತ್ತಮ ಸಾಥ್​ ನೀಡಿದರು.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್​ ನಡೆಸಲು ವಿಫಲವಾಗಿದ್ದ ಸೂರ್ಯಕುಮಾರ್​ ಮತ್ತು ದುಬೆ ಈ ಪಂದ್ಯದಲ್ಲಿ ಉತ್ತಮ ಜತೆಯಾಟ ನಡೆಸುವ ಮೂಲಕ ಗಮನಸೆಳೆದರು. ಸತತ ಬೌಂಡರಿ ಮತ್ತು ಸಿಕ್ಸರ್​ ಬಾರಿಸಿ ನೆರದಿದ್ದ ಪ್ರೇಕ್ಷರಕರಿಗೆ ಕೊನೆಯ ಕ್ಷಣದಲ್ಲಿ ಮನರಂಜನೆ ನೀಡಿದರು. ಜತೆಗೆ ಅರ್ಧಶತಕ ಬಾರಿಸಿ ಮಿಂಚಿದರು. ದುಬೆ ಮತ್ತು ಸೂರ್ಯ ಜೋಡಿ 4 ವಿಕೆಟ್​ಗೆ ಅಜೇಯ 72 ರನ್​ ಒಟ್ಟುಗೂಡಿಸಿತು. ಸೂರ್ಯಕುಮಾರ್​ 49 ಎಸೆತ ಎದುರಿಸಿ ತಲಾ 2 ಬೌಂಡರಿ ಮತ್ತು ಸಿಕ್ಸರ್​ ಬಾರಿಸಿ ಭರ್ತಿ 50 ರನ್​ ಗಳಿಸಿದರೆ, ದುಬೆ 35 ಎಸೆತಗಳಿಂದ 31 ರನ್​ ಬಾರಿಸಿದರು.

ಕೊಹ್ಲಿ ಮೊದಲ ಗೋಲ್ಡನ್ಡಕ್

ಐರ್ಲೆಂಡ್​ ಮತ್ತು ಪಾಕಿಸ್ತಾನ ವಿರುದ್ಧ ಬ್ಯಾಟಿಂಗ್​ ವೈಫಲ್ಯ ಕಂಡಿದ್ದ ಕೊಹ್ಲಿ ಈ ಪಂದ್ಯದಲ್ಲಿ ಗೋಲ್ಡನ್​ ಡಕ್​ ಸಂಕಟ್ಟಕ್ಕೆ ಸಿಲುಕಿದರು. ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಇದು ಕೊಹ್ಲಿಯ ಮೊದಲ ಗೋಲ್ಡನ್​ ಡಕ್​.

ಅರ್ಶದೀಪ್ಜೀವನಶ್ರೇಷ್ಠ ಬೌಲಿಂಗ್

ಎಡಗೈ ವೇಗಿ ಅರ್ಶ​ದೀಪ್​ ಸಿಂಗ್​ ಈ ಪಂದ್ಯದಲ್ಲಿ 4 ಓವರ್​ ಎಸೆದು ಕೇವಲ 9 ರನ್​ಗೆ 4 ವಿಕೆಟ್​ ಕಿತ್ತು ಜೀವನಶ್ರೇಷ್ಠ ಬೌಲಿಂಗ್​ ಪ್ರದರ್ಶನ ತೋರಿದರು. ಜತೆಗೆ ಟಿ20 ವಿಶ್ವಕಪ್​ನಲ್ಲಿ ಭಾರತ ಪರ ಶ್ರೇಷ್ಠ ಬೌಲಿಂಗ್​ ನಡೆಸಿದ ಆಟಗಾರ ಎನ್ನುವ ಹಿರಿಮೆಗೂ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಅಶ್ವಿನ್​ ಹೆಸರಿನಲ್ಲಿತ್ತು. ಅಶ್ವಿನ್​ ಅವರು 2014ರ ಟೂರ್ನಿಯಲ್ಲಿ 11ರನ್​ಗೆ 4 ವಿಕೆಟ್​ ಕೆಡವಿದ್ದರು.

United States Of America  (20 ovs maximum)
BATTING R B M 4s 6s SR
lbw b Arshdeep Singh 0 1 1 0 0 0.00
b Patel 24 30 57 0 2 80.00
c Pandya b Arshdeep Singh 2 5 4 0 0 40.00
c Mohammed Siraj b Pandya 11 22 29 0 1 50.00
c Mohammed Siraj b Arshdeep Singh 27 23 33 2 1 117.39
c †Pant b Pandya 15 12 25 1 1 125.00
c †Pant b Arshdeep Singh 10 10 16 0 1 100.00
not out 11 10 15 1 0 110.00
run out (†Pant/Mohammed Siraj) 2 7 11 0 0 28.57
Extras (lb 1, w 7) 8
TOTAL 20 Ov (RR: 5.50) 110/8
Fall of wickets: 1-0 (Shayan Jahangir, 0.1 ov), 2-3 (Andries Gous, 0.6 ov), 3-25 (Aaron Jones, 7.2 ov), 4-56 (Steven Taylor, 11.4 ov), 5-81 (Nitish Kumar, 14.4 ov), 6-96 (Corey Anderson, 16.5 ov), 7-98 (Harmeet Singh, 17.3 ov), 8-110 (Jasdeep Singh, 19.6 ov) • DRS
BOWLING O M R W ECON 0s 4s 6s WD NB
4 0 9 4 2.25 17 0 0 1 0
4 0 25 0 6.25 11 1 1 0 0
4 0 25 0 6.25 14 1 1 1 0
4 1 14 2 3.50 19 1 1 0 0
1 0 11 0 11.00 3 1 1 0 0
3 0 25 1 8.33 5 0 2 1 0

 

India  (T: 111 runs from 20 ovs)
BATTING R B M 4s 6s SR
c Harmeet Singh b Netravalkar 3 6 12 0 0 50.00
c †Gous b Netravalkar 0 1 1 0 0 0.00
b Ali Khan 18 20 38 1 1 90.00
not out 50 49 80 2 2 102.04
not out 31 35 51 1 1 88.57
Extras (lb 1, nb 1, w 2, pen 5) 9
TOTAL 18.2 Ov (RR: 6.05) 111/3
Fall of wickets: 1-6 (Virat Kohli, 0.2 ov), 2-15 (Rohit Sharma, 2.2 ov), 3-44 (Rishabh Pant, 7.3 ov) • DRS
BOWLING O M R W ECON 0s 4s 6s WD NB
4 0 18 2 4.50 13 0 1 0 0
3.2 0 21 1 6.30 8 2 0 1 0
4 0 24 0 6.00 11 1 1 0 1
4 0 25 0 6.25 8 1 1 0 0
3 0 17 0 5.66 8 0 1 1 0

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ