October 5, 2024

ಚದುರಂಗ ಪ್ರಾಚೀನ ಹಾಗೂ ಜನಪ್ರಿಯ ಹೊಂದಿರುವ ಆಟವಾಗಿದೆ. ಬುದ್ಧಿಶಕ್ತಿ ಹೆಚ್ಚಾಗಲು ಈ ಚದುರಂಗ ಆಟ ಅತ್ಯಂತ ಸಹಕಾರಿಯಾಗಿದೆ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.

ಅವರು ಶನಿವಾರ ಮೂಡಿಗೆರೆ ಪಟ್ಟಣದ ಬಿಜಿಎಸ್‌ ವಿಎಸ್ ಶಾಲೆ ಆವರಣದಲ್ಲಿ ಚಿಕ್ಕಮಗಳೂರು ಡಿಸ್ಟಿçಕ್ ಚೆಸ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಚದುರಂಗ ಆಟದಲ್ಲಿ ಕಪ್ಪು ಬಿಳಿ ಬಣ್ಣದ 16 ಕಾಯಿಗಳ ನಡುವೆ 64 ಚೌಕಾಕಾರದ ಕೋಣೆಯೊಳಗೆ ಇಬ್ಬರು ರಾಜರ ಸೈನ್ಯ ಸೆಳೆಸಾಡುವ ಜತೆಗೆ ರಾಜನನ್ನು ಸೆರೆ ಹಿಡಿಯುವ ತಂತ್ರಗಾರಿಕೆ ನಡೆಸಲು ಬುದ್ಧಿವಂತಿಕೆ ಬಳಸಬೇಕಾಗುತ್ತದೆ. ಇದರಿಂದ ಏಕಾಗ್ರತೆ ಹೆಚ್ಚುತ್ತದೆ. ಇಂತಹ ಆಟವನ್ನು ಎಲ್ಲಾ ಮಕ್ಕಳು ಆಡುವ ಮೂಲಕ ಬುದ್ಧಿವಂತಿಕೆ ಹಾಗೂ ಏಕಾಗ್ರತೆ ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಕಾಫಿ ಬೆಳೆಗಾರ, ವಿ.ಎಸ್.ಟ್ರಸ್ಟ್ ನ ಎನ್.ಎಲ್. ಪುಣ್ಯಮೂರ್ತಿ ಮಾತನಾಡಿ. ಬಹುತೇಕ ಮಕ್ಕಳಲ್ಲಿ ಚದುರಂಗ ಆಟವಾಡುವ ಬುದ್ಧಿವಂತಿಕೆ ಇರುತ್ತದೆ. ಆದರೆ ಅವರಿಗೆ ಕಲಿಯುವ ಹಾಗೂ ಪ್ರದರ್ಶಿಸಿಸುವ ಅವಕಾಶ ಹಾಗೂ ತರಬೇತಿ ಸಿಗದೇ ಎಲೆ ಮರೆಕಾಯಿಯಾಗಿಯೇ ಉಳಿಯುತ್ತಾರೆ. ಅಂತಹ ಪ್ರತಿಭೆಯುಳ್ಳ ಮಕ್ಕಳನ್ನು ಪೋಷಕರು ಹಾಗೂ ಶಿಕ್ಷಕರು ಗುರುತಿಸಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಮಗಳೂರು ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್‌ನ ಅಧ್ಯಕ್ಷ ನಯನ ತಳವಾರ ವಹಿಸಿದ್ದರು.

ತಾ.ಪಂ. ಮಾಜಿ ಅಧ್ಯಕ್ಷ ಕೆ.ಸಿ.ರತನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಬಿಜಿಎಸ್ ವಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಎಂ.ಆರ್.ಸಂದೇಶ್, ಪ್ರೌಢಶಾಲೆ ಪ್ರಾಂಶುಪಾಲ ಬಿ.ಆರ್.ರಮೇಶ್ ಉಪಸ್ಥಿತರಿದ್ದರು.

ಅಮರ್‌ನಾಥ್ ನಿರೂಪಿಸಿದರು, ಪ್ರಸನ್ನ ಗೌಡಹಳ್ಳಿ ಸ್ವಾಗತಿಸಿದರು.

ಸ್ಪರ್ಧೆಯಲ್ಲಿ ಜಿಲ್ಲೆ 300 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ