October 5, 2024

ಪಾಕಿಸ್ತಾನ ತಂಡ ಟಿ20 ವಿಶ್ವಕಪ್​ನ ತನ್ನ ಮೊದಲ ಪಂದ್ಯದಲ್ಲಿ ಕ್ರಿಕೆಟ್​ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ ಅಮೆರಿಕ ವಿರುದ್ಧವೇ ಸೋತಿದೆ. ಡಲ್ಲಾಸ್ ನಲ್ಲಿ ನಿನ್ನೆ ರಾತ್ರಿ ನಡೆದ ಎ ಗುಂಪಿನ ಈ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿನ ಪಂದ್ಯ ಟೈ ಆದ ಕಾರಣ ಸೂಪರ್​ ಓವರ್​ ಮೊರೆ ಹೋಗಲಾಯಿತು. ಅಂತಿಮವಾಗಿ ಪಾಕಿಸ್ತಾನವನ್ನು ಕಟ್ಟಿ ಹಾಕಿದ ಅಮೆರಿಕದ ತಂಡ ಜಯದ ಕೇಕೆ ಹಾಕಿತು. ಇದು ಅಮೆರಿಕ ತಂಡಕ್ಕೆ ಹಾಲಿ ವಿಶ್ವ ಕಪ್​ನಲ್ಲಿ ಸತತ ಎರಡನೇ ವಿಜಯವಾಗಿದ್ದು ಮೊದಲ ಪಂದ್ಯದಲ್ಲಿ ಕೆನಡಾ ವಿರುದ್ಧ ಗೆದ್ದಿದ್ದ ತಂಡ ಈಗ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.

ಟಾಸ್​ ಗೆದ್ದ ಅಮೆರಿಕ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಆರಂಭಿಕ ಬ್ಯಾಟಿಂಗ್ ವೈಫಲ್ಯ ಎದುರಿಸಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 159 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಅಮೆರಿಕದ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 3 ವಿಕೆಟ್​ ನಷ್ಟಕ್ಕೆ 159 ರನ್​ ಬಾರಿಸಿತು. ಕೊನೇ ಓವರ್​ನಲ್ಲಿ ಅಮೆರಿಕಕ್ಕೆ 15 ರನ್​ ಗೆಲುವಿಗೆ ಬೇಕಾಗಿತ್ತು. ಆದರೆ, 14 ರನ್ ಬಾರಿಸಿದ ಕಾರಣ ಪಂದ್ಯ ಸೂಪರ್​ ಓವರ್ ಮೂಲಕ ನಿರ್ಣಯಿಸುವ ಸ್ಥಿತಿಗೆ ತಲುಪಿತು.

ಅನುಭವಿ ಬೌಲರ್​ ಮೊಹಮ್ಮದ್ ಅಮೀರ್​ ದಾಳಿಯನ್ನು ಎದುರಿಸಿದ ಅಮೆರಿಕ ತಂಡ ಒಂದು ಸೂಪರ್ ಓವರ್​ನಲ್ಲಿ 19 ರನ್ ಬಾರಿಸಿತು. ಇದನ್ನು ಬೆನ್ನಟ್ಟಲು ಹೊರಟ ಪಾಕಿಸ್ತಾನ 1 ವಿಕೆಟ್ ನಷ್ಟ ಮಾಡಿಕೊಂಡು ಕೇವಲ 13 ರನ್ ಬಾರಿಸಿ ಐದು ರನ್​ಗಳ ಪರಾಜಯಕ್ಕೆ ಗುರಿಯಾಯಿತು.

ಪಾಕಿಸ್ತಾ ತಂಡಕ್ಕೆ ಇದು ಹಾಲಿ ವಿಶ್ವ ಕಪ್​ನಲ್ಲಿ ಮೊದಲ ಪಂದ್ಯವಾಗಿತ್ತು. ಅದರಲ್ಲೇ ಸೋಲುವ ಮೂಲಕ ಹೀನಾಯ ಅರಂಭ ಮಾಡಿತು. ಅದೂ ಅಮೆರಿಕದ ವಿರುದ್ಧ ಸೋಲುವ ಮೂಲಕ ತೀವ್ರ ಮುಖಭಂಗ ಅನುಭವಿಸುವಂತಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಪವರ್ ಪ್ಲೇನಲ್ಲಿ 30 ರನ್ ಗಳಿಸಿ ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್ ಮತ್ತು ಉಸ್ಮಾನ್ ಖಾನ್ ಅವರ ವಿಕೆಟ್ ಗಳನ್ನು ಕಳೆದುಕೊಂಡಿತು. ಮತ್ತೊಂದೆಡೆ ನಾಯಕ ಬಾಬರ್ ಅಝಾಮ್ ಒತ್ತಡದಲ್ಲಿ ಉತ್ತಮ ಆರಂಭ ನೀಡಿದರು. ಬಾಬರ್ ಮತ್ತು ಶದಾಬ್ ಖಾನ್ ನಾಲ್ಕನೇ ವಿಕೆಟ್​ಗೆ 8 ಓವರ್​ಗಳಲ್ಲಿ 72 ರನ್​ಗಳ ಜೊತೆಯಾಟ ನೀಡಿದರು.

ಶದಾಬ್ 25 ಎಸೆತಗಳಲ್ಲಿ 4 ಮತ್ತು 3 ಸಿಕ್ಸರ್​ಗಳೊಂದಿಗೆ 40 ರನ್ ಗಳಿಸಿದರು. ಬಾಬರ್ 23 ಎಸೆತಗಳಲ್ಲಿ 44 ರನ್ ಸಿಡಿಸಿ ಔಟಾದರು.

ಗುರಿ ಬೆನ್ನಟ್ಟಿದ ಅಮೆರಿಕ ಪರ 38 ಎಸೆತಗಳಲ್ಲಿ 50 ರನ್ ಗಳಿಸಿದ ಮೊನಾಂಕ್ ಮಿಂಚಿದರು. ಜೋನ್ಸ್  26 ಎಸೆತಗಳಲ್ಲಿ 36 ರನ್ ಗಳಿಸಿ ಔಟಾಗದೆ ಉಳಿದರು.

ಮಿಂಚಿದ ಮೂಡಿಗೆರೆಯ ನಾಸ್ತುಶ್ ಕೆಂಜಿಗೆ

ಅಮೇರಿಕಾ ಪರ ಬೌಲಿಂಗ್ ಆರಂಭಿಸುವ ಶ್ರೇಯ ಪಡೆದ ಮೂಡಿಗೆರೆ ತಾಲ್ಲೂಕು ಕೆಂಜಿಗೆ ಗ್ರಾಮದ ನಾಸ್ತುಶ್ ಪಾಕಿಸ್ತಾನದ ಪ್ರಮುಖ ಮೂರು ವಿಕೆಟ್ ಕಿತ್ತು ಮಿಂಚಿದರು. ಮೊದಲ ಓವರ್ ನಲ್ಲಿ ಯಾವುದೇ ವಿಕೆಟ್ ಇಲ್ಲದೇ 9 ರನ್ ನೀಡಿದ ನಾಸ್ತುಶ್ ಎರಡನೇ ಓವರ್ ನಲ್ಲಿ ಉಸ್ಮಾನ್ ಖಾನ್ ಅವರ ವಿಕೆಟ್ ಪಡೆದರು. ಉಸ್ಮಾನ್ ಕ್ಯಾಚಿತ್ತು ನಿರ್ಗಮಿಸಿದರು. ನಾಸ್ತುಶ್ ತಾನೆಸೆದ ಮೂರನೇ ಓವರ್ ನಲ್ಲಿ ಯಾವುದೇ ವಿಕೆಟ್ ಇಲ್ಲದೇ 8 ನೀಡಿದ್ದರು. ಆದರೆ ನಾಸ್ತುಶ್ ಕೆಂಜಿಗೆ ಎಸೆದ ತಮ್ಮ ನಾಲ್ಕನೇ ಹಾಗೂ ಇನ್ನಿಂಗ್ಸ್ ನ 13ನೇ ಓವರ್ ಪಂದ್ಯದ ಗತಿಯನ್ನೇ ಬದಲಿಸಿತು.

12 ಓವರ್ ಗಳಲ್ಲಿ 93 ರನ್ ಗಳಿಸಿ ಆರಂಭಿಕ ಆಘಾತದಿಂದ ಚೇತರಿಸಿಕೊಂಡು ಬೃಹತ್ ಮೊತ್ತದ ಸೂಚನೆ ನೀಡಿದ್ದ ಪಾಕ್ ಗೆ ಈ ಓವರ್ ನಲ್ಲಿ ನಾಸ್ತುಶ್ ಆಘಾತ ನೀಡಿದರು. ಪ್ರಮುಖ ಎರಡು ವಿಕೆಟ್ ಕಿತ್ತು ಪಾಕಿಸ್ತಾನದ ಬ್ಯಾಟಿಂಗ್ ಬೆನ್ನುಲುಬು ಮುರಿದಿದ್ದರು. 25 ಎಸೆತಗಳಲ್ಲಿ 40 ರನ್ ಗಳಿಸಿ ಆಡುತ್ತಿದ್ದ ಶಾಬಾದ್ ಖಾನ್ ಅವರನ್ನು ಕ್ಯಾಚ್ ನೀಡುವಂತೆ ಮಾಡಿದರೆ, ನಂತರ ಬಂದ ಆಜಂ ಖಾನ್ ರನ್ನು ಖ್ಯಾತೆ ತೆರೆಯುವ ಮುನ್ನವೇ ನಾಸ್ತುಶ್ ಎಲ್ ಬಿ ಡಬ್ಲು ಬಲೆಗೆ ಬೀಳಿಸಿದರು.

ಅಂತಿಮವಾಗಿ ನಾಸ್ತುಶ್ ತಮ್ಮ ನಿಗದಿತ 4 ಓವರ್ ಗಳಲ್ಲಿ 30 ರನ್ ಗಳಲ್ಲಿ ನೀಡಿ ಪ್ರಮುಖ 3 ವಿಕೆಟ್  ಗಳನ್ನು ಉರುಳಿಸಿ ಪಾಕ್ ಇನ್ನಿಂಗ್ಸ್ ಗೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾದರು.

ನಾಸ್ತುಶ್ ಮೂಡಿಗೆರೆ ತಾಲ್ಲೂಕು ಕೆಂಜಿಗೆ ಗ್ರಾಮದ ಕಾಫಿ ಬೆಳೆಗಾರ ಮತ್ತು ಬರಹಗಾರ ಡಾ. ಪ್ರದೀಪ್ ಕೆಂಜಿಗೆ ಹಾಗೂ ಶ್ರೀಮತಿ ಶೃತಕೀರ್ತಿಯವರ ಪುತ್ರ. ಪ್ರಸ್ತುತ ಅವರು ಅಮೇರಿಕಾದಲ್ಲಿ ನೆಲೆಸಿ ಅಲ್ಲಿನ ರಾಷ್ಟ್ರಿಯ ತಂಡದ ಸದಸ್ಯರಾಗಿ ಕ್ರಿಕೆಟ್ ನಲ್ಲಿ ಮಿಂಚುತ್ತಿದ್ದಾರೆ.

ನಾಸ್ತುಶ್ ಹೆಸರನ್ನು ಟಿ.ವಿ. ಲೈವ್ ನಲ್ಲಿ ಕೆಂಜಿಗೆ ಎಂದೇ ಪ್ರಚುರಪಡಿಸುತ್ತಿದ್ದುದು ಮತ್ತು ನಾಸ್ತುಶ್ ತನ್ನ ಜರ್ಸಿಯಲ್ಲಿ ಕೆಂಜಿಗೆ ಎಂದೇ ಬರೆದುಕೊಂಡಿದ್ದು, ಅವರಿಗೆ ತಾಯ್ನೆಲ ಮತ್ತು ಹುಟ್ಟೂರಿನ ಬಗ್ಗೆ ಇರುವ ಅಭಿಮಾನಕ್ಕೆ ಸಾಕ್ಷಿಯಾಗಿತ್ತು ಇದರೊಂದಿಗೆ  ಮಲೆನಾಡಿನ ಪುಟ್ಟ ಊರು ಕೆಂಜಿಗೆಯ ಹೆಸರು ಅಂತರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುವಂತೆ ಮಾಡಿತ್ತು.

ಅಮೇರಿಕಾ ತಂಡದಲ್ಲಿ ಬಹುಮಂದಿ ಭಾರತೀಯ ಸಂಜಾತರೇ ಇದ್ದುದು ಮತ್ತೊಂದು ವಿಶೇಷ

Pakistan  (20 ovs maximum)
BATTING R B M 4s 6s SR
c Taylor b Netravalkar 9 8 5 0 1 112.50
lbw b Jasdeep Singh 44 43 76 3 2 102.32
c Kumar b Kenjige 3 3 5 0 0 100.00
c Taylor b Ali Khan 11 7 11 0 1 157.14
c Netravalkar b Kenjige 40 25 35 1 3 160.00
lbw b Kenjige 0 1 2 0 0 0.00
lbw b Netravalkar 18 14 27 3 0 128.57
not out 23 16 25 1 2 143.75
not out 3 3 11 0 0 100.00
Extras (lb 4, w 4) 8
TOTAL 20 Ov (RR: 7.95) 159/7
Fall of wickets: 1-9 (Mohammad Rizwan, 1.2 ov), 2-14 (Usman Khan, 2.3 ov), 3-26 (Fakhar Zaman, 4.4 ov), 4-98 (Shadab Khan, 12.4 ov), 5-98 (Azam Khan, 12.5 ov), 6-125 (Babar Azam, 15.5 ov), 7-139 (Iftikhar Ahmed, 18.1 ov) • DRS
BOWLING O M R W ECON 0s 4s 6s WD NB
4 0 30 3 7.50 10 1 2 0 0
4 0 18 2 4.50 13 0 1 0 0
4 0 30 1 7.50 8 2 1 2 0
4 0 34 0 8.50 9 2 2 1 0
3 0 37 1 12.33 4 2 3 1 0
1 0 6 0 6.00 3 1 0 0 0
United States Of America  (T: 160 runs from 20 ovs)
BATTING R B 4s 6s SR
c Mohammad Rizwan b Naseem Shah 12 16 1 0 75.00
c Mohammad Rizwan b Mohammad Amir 50 38 7 1 131.57
b Haris Rauf 35 26 5 1 134.61
not out 36 26 2 2 138.46
not out 14 14 1 0 100.00
Extras (lb 1, w 11) 12
TOTAL 20 Ov (RR: 7.95) 159/3
Fall of wickets: 1-36 (Steven Taylor, 5.1 ov), 2-104 (Andries Gous, 13.1 ov), 3-111 (Monank Patel, 14.1 ov) • DRS
BOWLING O M R W ECON 0s 4s 6s WD NB
4 0 33 0 8.25 13 5 1 2 0
4 0 25 1 6.25 12 2 0 3 0
4 0 26 1 6.50 9 3 0 2 0
4 0 37 1 9.25 9 4 1 1 0
3 0 27 0 9.00 4 0 2 1 0
1 0 10 0 10.00 2 2 0 0 0

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ