October 5, 2024

ಮೂಡಿಗೆರೆ ತಾಲೂಕು ಬಣಕಲ್ ಹೋಬಳಿಯ ಹೆಸಗೂಡು ಗ್ರಾಮದ ರೈತ ಕುಟುಂಬದ, ಎಚ್. ಎಸ್. ರಾಮೇಗೌಡ (ಹೆಸಗೂಡು ರಾಮಣ್ಣ) ಹಾಗೂ ಮಮತಾ ಅವರ ಪುತ್ರ ಧ್ಯಾನ್ ಆರ್ ಗೌಡ ಇತ್ತೀಚೆಗೆ ಪ್ರಕಟವಾದ ನೀಟ್ ಪರೀಕ್ಷೆ ಫಲಿತಾಂಶದಲ್ಲಿ 720 ಅಂಕಗಳಿಗೆ 691 ಅಂಕಗಳನ್ನು ಪಡೆದು ಓಬಿಸಿ ವರ್ಗದಲ್ಲಿ 1400 ನೇ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಹಾಗೂ ಒಟ್ಟಾರೆ ರಾಷ್ಟ್ರಮಟ್ಟದಲ್ಲಿ 3900 ನೇ ಶ್ರೇಣಿಯನ್ನು ಪಡೆದಿರುತ್ತಾರೆ. ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ಅತ್ಯನ್ನತ ಸಾಧನೆ ಎಂದು ತಿಳಿದುಬಂದಿದೆ.

ಇವರು ಬೆಂಗಳೂರಿನ ಪ್ರತಿಷ್ಠಿತ  Edushrine  ಅಕಾಡೆಮಿಯಲ್ಲಿ ದ್ವಿತೀಯ ಪಿ.ಯು.ಸಿ P.C.M.B. ವ್ಯಾಸಂಗ ಮಾಡಿದ್ದು,  ಇವರು ತಮ್ಮ 6 ನೆಯ ತರಗತಿಯಿಂದ ಪ್ರಥಮ ಪಿ.ಯು.ಸಿ. ವರೆಗಿನ  ತಮ್ಮ ವಿದ್ಯಾಭ್ಯಾಸವನ್ನು ಜವಾಹರ್ ನವೋದಯ ವಿದ್ಯಾಲಯ ಬಾಳೆಹೊನ್ನೂರು ಇಲ್ಲಿ ವ್ಯಾಸಂಗ ಮಾಡಿರುತ್ತಾರೆ.

ಇವರು ನೀಟ್ ಅಲ್ಲದೇ ಸಿ.ಇ.ಟಿ. ಮತ್ತು ಜೆಇಇ ಪರೀಕ್ಷೆಯಲ್ಲಿಯೂ ಉತ್ತಮ ಸಾಧನೆ ತೋರಿದ್ದಾರೆ.

ಪುಟ್ಟ ಹಳ್ಳಿಯ ಕೃಷಿ ಕುಟುಂಬದ ವಿದ್ಯಾರ್ಥಿಯ ಸಾಧನೆಗೆ ಕೆಂಪೇಗೌಡ ಒಕ್ಕಲಿಗರ ವೇದಿಕೆ ಮೂಡಿಗೆರೆ ತಾಲೂಕು ಹಾಗೂ  ಒಕ್ಕಲಿಗರ ಸಂಘ ಸೇರಿದಂತೆ ವಿವಿಧ ಸಂಘಸಂಸ್ಥೆಗಳು ತಮ್ಮ ಅಭಿನಂದನೆ ಸಲ್ಲಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ