October 5, 2024

2024ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಭಾರತದಲ್ಲಿ 7 ಹಂತದಲ್ಲಿ ನಡೆಯುತ್ತದೆ. ಆದರೆ ದೇಶದಲ್ಲಿ ಈ ಹಿಂದಿನ ಕಾಲದ ಚುನಾವಣೆ ಒಂದೇ ದಿನ ಇಡೀ ದೇಶದಲ್ಲಿ ನಡೆಸಲಾಗುತ್ತಿತ್ತು. ಈಗ ಚುನಾವಣಾ ಆಯೋಗದ ಈ ರೀತಿ ತೀರ್ಮಾನವನ್ನು ನೋಡಿದರೆ ಹಲವು ಅನುಮಾನಗಳು ಮೂಡುತ್ತವೆ ಎಂದು ಹಸಿರು ಸೇನೆ ಚಿಕ್ಕಮಗಳೂರು ಜಿಲ್ಲಾ ಸಂಚಾಲಕ ಡಿ.ಎಸ್. ರಮೇಶ್ ಗೌಡ ದಾರದಹಳ್ಳಿ ಆರೋಪಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ; ಭಾರತ ದೇಶ ಈಗ ಹಿಂದಿನಿಗಿಂತಲು ಹೆಚ್ಚು ತಂತ್ರಜ್ಞಾನ ಹೊಂದಿದೆ ಮತ್ತು ಸಂಪರ್ಕ ವ್ಯವಸ್ಥೆ ಜಾಸ್ತಿ ಆಗಿದೆ ಇಂಥ ಸಮಯದಲ್ಲೂ ಕೂಡ ಚುನಾವಣೆಯನ್ನು ಇಷ್ಟು ದೀರ್ಘ ಕಾಲ ನಡೆಸುವುದು ಎಷ್ಟು ಸಮಂಜಸ ಎನ್ನುವ ಪ್ರಶ್ನೆ ಮೂಡುತ್ತಿದೆ. ಚುನಾವಣೆ ಘೋಷಣೆ ಆಗಿ 3 ತಿಂಗಳ ಕಳೆದಿವೆ ದೇಶದಲ್ಲಿ ಸುದೀರ್ಘ ಕಾಲ ನೀತಿ ಸಂಹಿತೆ ಜಾರಿಯಾಗಿದೆ ಇದರಿಂದ ಇಡೀ ದೇಶದ ಅಭಿವೃದ್ದಿ ಕಾರ್ಯಗಳು ನಿಂತು ಹೋಗಿವೆ. ದೇಶದಲ್ಲಿ ನಡೆದ 5 ನೇ ಹಂತದ ಚುನಾವಣೆಯಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಕೇವಲ 50% ಶೇಕಡಾ ಮತದಾನ ನಡೆದಿದೆ ಇಷ್ಟು ಕಾಲ ಅವಕಾಶ ನೀಡಿದರು ಮತದಾನದ ಪ್ರಮಾಣ ಏರಿಕೆ ಆಗಿಲ್ಲ.

ಭಾರತ ದೇಶದ ಈಗಿನ ಪರಿಸ್ಥಿತಿಗೆ 2 ಅಥವಾ 3 ಹಂತದಲ್ಲಿ ಚುನಾವಣಾ ಆಯೋಗ ಚುನಾವಣೆ ಮಾಡಿ ಮುಗಿಸಬಹುದಿತ್ತು. ಈ ಬಗ್ಗೆ ರಾಜಕೀಯ ಪಕ್ಷಗಳು, ಆಳುವ ಸರ್ಕಾರಗಳು, ಚುನಾವಣಾ ಆಯೋಗ ಮರುಚಿಂತನೆ ನಡೆಸಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ ;  ಸರ್ಕಾರಗಳ ಉದ್ದೇಶಪೂರ್ವಕ ವಿಳಂಬ ಧೋರಣೆಗೆ ಖಂಡನೆ

ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳು ಚುನಾವಣೆ ನಡೆಸುವುದಾಗಿ ಈ ಹಿಂದೆ ಅಧಿಕಾರದಲ್ಲಿ ಇದ್ದ ಸರ್ಕಾರ ಮತ್ತು ಈಗ ಇರುವ ಕಾಂಗ್ರೇಸ್ ಸರ್ಕಾರ ಬೆಂಗಳೂರು ಬಿ.ಬಿ.ಎಂ.ಪಿ ಚುನಾವಣೆ ಮತ್ತು ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲುಕು ಪಂಚಾಯಿತಿ ಚುನಾವಣೆ ನಡೆಸುವ ಬಗ್ಗೆ ಯಾವುದೇ ದೃಢ ನಿರ್ಧಾರ ತೆಗೆದುಕೊಂಡಿಲ್ಲ. ಈ ಚುನಾವಣೆ ಪಕ್ಷದ ಚಿಹ್ನೆ ಹೆಸರಿನಲ್ಲಿ ನಡೆಯುವುದರಿಂದ ಅಧಿಕಾರದಲ್ಲಿ ಇರುವ ಪಕ್ಷದ ಸರ್ಕಾರಕ್ಕೆ ತನ್ನ ಸಾಮಥ್ರ್ಯ ಗೊತ್ತಾಗಲಿದೆ ಎಂದು ವಿನಾ ಕಾರಣ ಸಮಸ್ಯೆಗಳನ್ನು ಮುಂದಿಟ್ಟು ಚುನಾವಣೆ ವಿಳಂಬ ಮಾಡುತ್ತಿದ್ದಾರೆ.
ಸ್ಥಳೀಯ ಸಂಸ್ಥೆಗಳ ಮೀಸಲಾತಿ ವಿಚಾರದಲ್ಲಿ ಗೊಂದಲಗಳನ್ನು ಸರಿಪಡಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ನ್ಯಾಯಾಲಯದಲ್ಲಿ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ ಹಲವಾರು ಭಾರಿ ಸರ್ಕಾರ ಕೋರ್ಟ್ ನಿಂದನೆಗೆ ಒಳಗಾಗಿದೆ. ಈ ಹಿಂದೆ ಬಿ.ಜೆ.ಪಿ ಸರ್ಕಾರದ ಆಡಳಿತದಲ್ಲಿ ಒಂದು ವರ್ಷ ಹಿಂದೆಯು ನ್ಯಾಯಾಲಯ ಅವಧಿ ಮೀರಿ ಚುನಾವಣೆಯನ್ನು ಪದೇ-ಪದೇ ಮುಂದೂಡಿದಕ್ಕೆ ಸರ್ಕಾರಕ್ಕೆ 5 ಲಕ್ಷ ದಂಡ ವಿಧಿಸಿದೆ. ಈಗ ಅಧಿಕಾರದಲ್ಲಿ ಇರುವ ಕಾಂಗ್ರೇಸ್ ಸರ್ಕಾರ ಕೂಡ ಚುನಾವಣೆಯನ್ನು ಸಕಾಲಕ್ಕೆ ನಡೆಸುವ ಮನಸ್ಸು ಮಾಡುತ್ತಿಲ್ಲ ಇದನ್ನು ನೋಡಿದರೇ ಎಲ್ಲಾ ಪಕ್ಷಗಳು ವಿಕೇಂದ್ರಿಕರಣೆ ವ್ಯವಸ್ಥೆಗೆ ತಿಲಾಂಜಲಿ ಹಾಕಿದಂತೆ ನಡೆದುಕೊಳ್ಳುತ್ತಿವೆ.
ದೇಶದಲ್ಲಿ ನಿಧಾನಗತಿಯಲ್ಲಿ ಸರ್ವಾಧಿಕಾರದ ಆಡಳಿತ ಬರುವ ಮುನ್ಸೂಚನೆ ಕಾಣುತ್ತಿದೆ ಕಾರಣ ಸ್ಥಳೀಯ ಸಂಸ್ಥೆಗಳೇ ಪ್ರಜಾಪ್ರಭುತ್ವದ ಮೆಟ್ಟಿಲುಗಳು ಈಗ ಈ ವ್ಯವಸ್ಥೆ ಹಾಳು ಮಾಡಲು ಎಲ್ಲಾ ಸರ್ಕಾರಗಳು ಎಲ್ಲಾ ಪಕ್ಷಗಳು ಮುಂದಾಗಿವೆ. 24-05-2024 ರಿಂದ ಉಚ್ಛನ್ಯಾಯಾಲಯದಲ್ಲಿ ಚುನಾವಣೆ ನಡೆಸುವ ವಿಚಾರಣೆ ನಡೆದ ಸಂದರ್ಭದಲ್ಲಿ ಕೂಡ ಸರ್ಕಾರಕ್ಕೆ ಈ ಹಿಂದೆ ದಂಡ ವಿಧಿಸಿದರು ಬುದ್ದಿ ಬಂದಿಲ್ಲ ಎಂದು ನ್ಯಾಯಾಲಯ ತನ್ನ ಅಸಮಾಧಾನ ಹೊರಹಾಕಿದೆ ಕಾರಣ ಮೀಸಲಾತಿ ವಿಚಾರವನ್ನು ಬಗೆಹರಿಸಲು ಸರ್ಕಾರಕ್ಕೆ ಸಾಧ್ಯ ಆಗದೆ ಇರುವುದು ಸರ್ಕಾರದ ವೈಪಲ್ಯವನ್ನು ಖಂಡಿಸಿವೆ. ಆದ್ದರಿಂದ ಆದಷ್ಟು ಬೇಗ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ನಡೆಸಬೇಕೆಂದು ಡಿ.ಎಸ್. ರಮೇಶ್ ಗೌಡ ಒತ್ತಾಯಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ