October 5, 2024

ಸಾಂದರ್ಭಿಕ ಚಿತ್ರ

ಮರಗಸಿ ಮಾಡುವಾಗ ಮರದಿಂದ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೂಡಿಗೆರೆ ಸಮೀಪದ ಬಿದರಹಳ್ಳಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಈ ದುರ್ಘಟನೆ ನಡೆದಿದೆ.

ಬಿದರಹಳ್ಳಿ ಗ್ರಾಮದ ಸಣ್ಣ ಬೆಳೆಗಾರರಾದ ಶ್ರೀಮತಿ ಜಯಮ್ಮ ಎಂಬುವವರ ತೋಟದಲ್ಲಿ ಮರಗಸಿ ಮಾಡುತ್ತಿದ್ದ ವೇಳೆ ಸುನಿಲ್ (27 ವರ್ಷ) ಎಂಬುವವರು ಮರದಿಂದ ಬಿದ್ದು ಮೃತಪಟ್ಟಿರುತ್ತಾರೆ.

ಮೂಲತಃ ಸಕಲೇಶಪುರ ತಾಲ್ಲೂಕಿನ ಕೌಡಳ್ಳಿ ಗ್ರಾಮದ ಸುನಿಲ್ ಮೂಡಿಗೆರೆ ಸಮೀಪದ ಲೋಕವಳ್ಳಿ ಗ್ರಾಮದ ತನ್ನ ಹೆಂಡತಿಯ ಮನೆಯಲ್ಲಿ ಇದ್ದುಕೊಂಡು ಸುತ್ತಲ ಪ್ರದೇಶದಲ್ಲಿ ತೋಟದ ಕೆಲಸಕ್ಕೆ ಹೋಗುತ್ತಿದ್ದರು. ಸುನಿಲ್ ತನ್ನ ಪತ್ನಿ, ಇಬ್ಬರು ಚಿಕ್ಕ ಮಕ್ಕಳನ್ನು ಅಗಲಿದ್ದಾರೆ.

ಈ ಬಗ್ಗೆ ಮೃತ ಸುನೀಲ್ ಪತ್ನಿ ಮಂಜುಳಾ ಅವರು ಮೂಡಿಗೆರೆ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.

ಮಂಜುಳಾ ಅವರು ನೀಡಿರುವ ದೂರಿನಂತೆ ; ದಿನಾಂಕ: 29/05/2024 ರಂದು ನನ್ನ ಗಂಡ ಬಿದರಹಳ್ಳಿ ಜಯಮ್ಮ ರವರ ತೋಟಕ್ಕೆ ಮರಗಸಿ ಕೆಲಸಕ್ಕೆ ಹೋಗಿದ್ದು, ಮರಗಸಿ ಮಾಡುವಾಗ ಮರದಿಂದ ಬಿದ್ದು ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ,  ಮರಗಸಿ ಕೆಲಸ ಮಾಡಲು ಕರೆದುಕೊಂಡು ಹೋದ ತೋಟದ ಮಾಲೀಕರು ಯಾವುದೇ ಸುರಕ್ಷತಾ ಕ್ರಮ ಕೈ ಗೊಳ್ಳದೆ ನಿರ್ಲಕ್ಷತದಿಂದ ಮರವನ್ನು ಹತ್ತಿಸಿದ್ದು ತನ್ನ ಗಂಡ ಮರದಿಂದ ಬಿದ್ದು ಸಾವನಪ್ಪಿದ್ದು,  ತನ್ನ ಗಂಡನ ಸಾವಿಗೆ ಕಾರಣರಾದ ತೋಟದ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಿರುತ್ತಾರೆ.

ಮಂಜುಳಾ  ಅವರು ನೀಡಿರುವ ದೂರಿನ ಮೇರೆಗೆ ಮೂಡಿಗೆರೆ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ತೋಟದ ಮಾಲೀಕರು ಕಾರ್ಮಿಕ ವಿಮೆ ಮಾಡಿಸಲು ಬೆಳೆಗಾರರ ಸಂಘ ಒತ್ತಾಯ

ಈ ಸಂದರ್ಭದಲ್ಲಿ ಮಾತನಾಡಿದ ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಅವರು ; ಬಿದರಹಳ್ಳಿ ಗ್ರಾಮದಲ್ಲಿ ಕಾರ್ಮಿಕರೋರ್ವರು ಮರಗಸಿ ಮಾಡುವಾಗ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ. ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಇಂತಹ ಘಟನೆಗಳು ಪದೇ ಪದೇ ಸಂಭವಿಸುತ್ತಿವೆ. ಇದರಿಂದ ಬೆಳೆಗಾರರು ಮತ್ತು ಕಾರ್ಮಿಕರ ಕುಟುಂಬಗಳು ನಷ್ಟಕ್ಕೊಳಗಾಗುತ್ತಿವೆ. ಕಾರ್ಮಿಕರು ತಮ್ಮ ಅಮೂಲ್ಯ ಜೀವ ಕಳೆದುಕೊಳ್ಳುತ್ತಿದ್ದಾರೆ.

ತೋಟದ ಮಾಲೀಕರು ತಮ್ಮ ತೋಟಕ್ಕೆ ಕಾರ್ಮಿಕ ವಿಮೆ ಮಾಡಿಸಿದ್ದರೆ ಇದರಿಂದ ಆಕಸ್ಮಿಕ ಸಾವು ನೋವುಗಳು ಸಂಭವಿಸಿದಾಗ ಕಾರ್ಮಿಕರ ಕುಟುಂಬಕ್ಕೆ ಆಸರೆಯಾಗುತ್ತದೆ ಜೊತೆಗೆ ತೋಟದ ಮಾಲೀಕರಿಗೂ ನಷ್ಟವನ್ನು ಹೊಂದುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಬೆಳೆಗಾರರ ಸಂಘ ಸಾಕಷ್ಟು ಮಾಹಿತಿ ಮತ್ತು ಮುನ್ನೆಚ್ಚರಿಕೆ ನೀಡುತ್ತಿದ್ದು, ಬೆಳೆಗಾರರು ತಪ್ಪದೇ ಕಾರ್ಮಿಕ ವಿಮೆ ಮಾಡಿಸಬೇಕು ಎಂದು ಸಲಹೆ ನೀಡಿದ್ದಾರೆ.

ಮರಗಸಿ ಮಾತ್ರವಲ್ಲ ವರ್ಷವಿಡೀ ತೋಟದಲ್ಲಿ ನಿರಂತರ ಕೆಲಸಗಳು ಇದ್ದು, ಯಾವ ಸಂದರ್ಭದಲ್ಲಿಯಾದರೂ ಕಾರ್ಮಿಕರಿಗೆ ಅಪಾಯ ಉಂಟಾದಾಗ ಕಾರ್ಮಿಕ ವಿಮೆ ಅನುಕೂಲರವಾಗುತ್ತದೆ ಎಂದಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ