October 5, 2024

ಶ್ರೀ ಕ್ಷೇತ್ರ ಧರ್ಮಸ್ಥಳ ಜನ ಜಾಗೃತಿ ವೇದಿಕೆ ಟ್ರಸ್ಟ್ ನ ಚಿಕ್ಕಮಗಳೂರು ಜಿಲ್ಲಾ ಪದಾಧಿಕಾರಿಗಳ ಸಭೆಯು ಜಿಲ್ಲಾ ಗ್ರಾಮ ಅಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ನೆರವೇರಿತು.

ಜನಜಾಗೃತಿ ವೇದಿಕೆಯ ಜಿಲ್ಲಾ ಸ್ಥಾಪಕ ಅಧ್ಯಕ್ಷರಾದ ಪ್ರಶಾಂತ್ ಚಿಪ್ರಗುತ್ತಿ ಮಾತನಾಡಿ ಸಮಾಜದಲ್ಲಿ ಭಯ ಇರುವುದು ಅಜ್ಞಾನದಿಂದ, ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದಂತೆ ಜ್ಞಾನದಿಂದ ಅಭಯ, ಅಜ್ಞಾನದಿಂದ ಭಯ. ಈ ನಿಟ್ಟಿನಲ್ಲಿ ಪರಮಪೂಜ್ಯನ್ಯ ಶ್ರೀ ಡಾ. ಡಿ ವೀರೇಂದ್ರ ಹೆಗ್ಗಡೆಯವರು ವಿದ್ಯಾದಾನ, ಅನ್ನದಾನ ಹಾಗೂ ಹಲವಾರು ದಾನಗಳ ಜೊತೆಗೆ ಜನಜಾಗೃತಿ ವೇದಿಕೆಯನ್ನು ರಚಿಸಿ ಇದರ ಮುಖಾಂತರ ಜನಗಳಿಗೆ ಸರಿಯಾದ ಜ್ಞಾನವನ್ನು ನೀಡಿ ಅಭಯದಾನವನ್ನು ನೀಡುತ್ತಿದ್ದಾರೆ. ಪದಾಧಿಕಾರಿಗಳಾದ ನಾವುಗಳು  ಹೆಚ್ಚು ಹೆಚ್ಚು ಜ್ಞಾನದ ಪ್ರಸಾರವನ್ನು ಸಮಾಜದಲ್ಲಿ  ಮಾಡಿ ಶ್ರೀ ವೀರೇಂದ್ರ  ಹೆಗ್ಗಡವರು ಕಂಡಂತಹ ಸ್ವಾಸ್ಥ್ಯ ಸಮಾಜದ ಕನಸನ್ನ ನನಸು ಮಾಡಬೇಕೆಂದು ಕರೆ ನೀಡಿದರು.

ಪ್ರಾದೇಶಿಕ ನಿರ್ದೇಶಕರಾದ ಗೀತಾ ರವರು ಮಾತನಾಡಿ ಗ್ರಾಮ ಅಭಿವೃದ್ಧಿ ಯೋಜನೆಯಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ  ಅಭಿವೃದ್ಧಿ  ಕಂಡಿದ್ದು ಇದು  ಶ್ರೀ ವೀರೇಂದ್ರ ಹೆಗ್ಗಡೆಯವರ  ಕಳಕಳಿಯ ಶ್ರಮದ ಒಂದು ಭಾಗವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಜನಜಾಗೃತಿ ವೇದಿಕೆಯ ನಾಗರಾಜ್ ವೇದಿಕೆಯ ವಿಚಾರಗಳ ಬಗ್ಗೆ ಹಾಗೂ  ವರ್ಷದ  ಕ್ರಿಯಾ ಯೋಜನೆ ಬಗ್ಗೆ ಮಾಹಿತಿ ನೀಡಿದರು.   ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಎ.ಸಿ. ಚಂದ್ರಪ್ಪ, ಜಿಲ್ಲಾ  ನಿಕಟ ಪೂರ್ವ ಅಧ್ಯಕ್ಷರಾದ  ಅರವಿಂದ ಸೋಮಯಾಜಿ, ಜಿಲ್ಲಾ ನಿರ್ದೇಶಕರಾದ ಸದಾನಂದ ಬಂಗೇರ, ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ಬಾಲಕೃಷ್ಣ ಹಾಗೂ ಇನ್ನಿತರು ಉಪಸ್ಥಿತರಿದ್ದರು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ