October 5, 2024

ಬೆಂಗಳೂರು ನಗರದ ಮೃತ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಒಬ್ಬರ ಗುರುತಿನ ಚೀಟಿ ಬಳಸಿಕೊಂಡು ಸಾರ್ವಜನಿಕರಿಂದ ಸಂಚಾರ ನಿಯಮ ಉಲ್ಲಂಘನೆ ಶುಲ್ಕ ವಸೂಲಿ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಮೂವರನ್ನು ಬಂಧಿಸಲಾಗಿದೆ.

ಆರೋಪಿಗಳನ್ನು ಇಸ್ಮಾಯಿಲ್ ಅಲಿ, ರಂಜನ್ ಕುಮಾರ್ ಪುರ್ಬೆ ಮತ್ತು ಸುಬೀರ್ ಎಂದು ಗುರುತಿಸಲಾಗಿದೆ,  ಆರೋಪಿಗಳು ಇಂಟರ್‌ನೆಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡಿರುವ ಹೆಡ್ ಕಾನ್‌ಸ್ಟೆಬಲ್ ಐಡಿಯನ್ನು ಬಳಸುತ್ತಿದ್ದರು ಮತ್ತು ಸಂಚಾರ ಉಲ್ಲಂಘನೆಯ ದಂಡದ ಮೊತ್ತವನ್ನು ಪಾವತಿಸಲು ಸಾರ್ವಜನಿಕರನ್ನು ವಾಟ್ಸಾಪ್‌ನಲ್ಲಿ ಸಂಪರ್ಕಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಂಚಕರು ಬೆಂಗಳೂರು ಟ್ರಾಫಿಕ್ ಪೊಲೀಸ್ ವೆಬ್‌ಸೈಟ್‌ನಲ್ಲಿ ಫೈನ್ ವಿಭಾಗದಲ್ಲಿ ಒಂದಷ್ಟು ವಾಹನಗಳ ನೋಂದಣಿ ಸಂಖ್ಯೆಗಳನ್ನು ಹಾಕಿ ಶೋಧಿಸಿದ್ದಾರೆ. ಆಗ ದಂಡ ಬಾಕಿರುವ ವಾಹನಗಳ ಸಂಖ್ಯೆಗಳನ್ನು ಗುರುತಿಸಿಕೊಂಡು, ಅವುಗಳನ್ನು ಕರ್ನಾಟಕ ಸಾರಿಗೆ ಇಲಾಖೆಯ ವೆಬ್‌ಸೈಟ್‌ಗಳಲ್ಲಿ ದಾಖಲಿಸಿ, ವಾಹನಗಳ ಮಾಲೀಕರ ವಿಳಾಸ, ಮೊಬೈಲ್ ನಂಬರ್ ಪಡೆದುಕೊಳ್ಳುತ್ತಿದ್ದರು. ಬಳಿಕ ತಾವು ಮಾಹಿತ ಸಂಗ್ರಹಿಸಿದ ವಾಹನ ಮಾಲೀಕರ ವಾಟ್ಸ್​ಆ್ಯಪ್​ಗೆ ನಾವು ಟ್ರಾಫಿಕ್ ಪೊಲೀಸರು ಎಂದು ಹೇಳಿಕೊಂಡು ದಂಡ ಕಟ್ಟುವಂತೆ ಕ್ಯೂಆರ್ ಕೋಡ್ ಸಮೇತ ಸಂದೇಶ ಹಾಗೂ ಮೃತ ಭಕ್ತರಾಮ್ ಗುರುತಿನ ಚೀಟಿ ಕೂಡ ಕಳುಹಿಸಿದ್ದರು.

ಮೃತ ಹೆಡ್ ಕಾನ್ ಸ್ಟೇಬಲ್ ಪುತ್ರಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮೂವರು ಆರೋಪಿಗಳನ್ನು ಕೋಲ್ಕತ್ತಾದಲ್ಲಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ