October 5, 2024

ಅಡುಗೆ ಮನೆಯಲ್ಲಿ ಅಡಗಿ ಕುಳಿತ್ತಿದ್ದ ಕಾಳಿಂಗ ಸರ್ಪವೊಂದನ್ನು ಸೆರೆಹಿಡಿಯಲಾಗಿದೆ.

ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲ್ಲೂಕಿನ ಶೆಟ್ಟಿಕೊಪ್ಪ ಗ್ರಾಮದಲ್ಲಿ ಕಾಳಿಂಗ ಸರ್ಪವೊಂದನ್ನು ಸೆರೆಹಿಡಿಯಲಾಗಿದೆ.

ಶೆಟ್ಟಿಕೊಪ್ಪ ಗ್ರಾಮದ ಮಂಜುನಾಥಗೌಡ ಎಂಬುವವರ ಮನೆಯ ಅಡುಗೆ ಕೋಣೆಯಲ್ಲಿ ಅವಿತು ಕುಳಿತ್ತಿದ್ದ ಕಾಳಿಂಗ ಸರ್ಪವನ್ನು ಉರಗ ತಜ್ಞರು ಸೆರೆ ಹಿಡಿದಿದ್ದಾರೆ.

ಮಂಜುನಾಥಗೌಡ ಅವರ ಮನೆಯ ಹಿಂಬಾಗಿಲು ತೆರೆದ ತಕ್ಷಣ ಕಾಳಿಂಗ ಸರ್ಪ ಮನೆಯೊಳಗೆ ಪ್ರವೇಶಿಸಿದೆ. ಇದನ್ನು ಕಂಡು ಮನೆಮಂದಿ ಮನೆಯಿಂದ ಹೊರ ಓಡಿ ಬಂದಿರುತ್ತಾರೆ.

ನಂತರ ಉರಗ ತಜ್ಞ ಸ್ನೇಕ್ ಹರೀಂದ್ರ ಅವರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಹರೀಂದ್ರ ಅವರು ಮನೆಯೊಳಗೆ ಪ್ರವೇಶಿಸಿ ನಂತರ ಅಡುಗೆ ಮನೆಯೊಳಗೆ ಅವಿತು ಕುಳಿತ್ತಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸೆರೆಹಿಡಿದಿದ್ದಾರೆ.

ಮಲೆನಾಡು ಭಾಗದಲ್ಲಿ ಅದರನ್ನು ಕಾಡಂಚಿನ ಗ್ರಾಮಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಕಾಳಿಂಗ ಸರ್ಪಗಳು ಸುರಕ್ಷಿತ ಸ್ಥಳ ಹುಡುಕಿ ಊರಕಡೆ ಬರುವುದು ಸಾಮಾನ್ಯವಾಗಿದ್ದು, ಕಾಡಂಚಿನ ನಿವಾಸಿಗಳು ಆದಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ಉರಗ ತಜ್ಞ ಹರೀಂದ್ರ ಸಲಹೆ ನೀಡಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ