October 5, 2024

ಆಸೆಯನ್ನು ಬಿಡಬೇಕೆಂದ ಆಯ್ದಕ್ಕಿ ಲಕ್ಕಮ್ಮನ ವಚನಗಳು ಬುದ್ಧನ ಪ್ರಮುಖ ಬೋಧನೆಯನ್ನು ನೆನಪಿಸುತ್ತದೆ ಎಂದು ವಾಣಿಜ್ಯ ತೆರಿಗೆ ಅಧಿಕಾರಿ ಕಾವ್ಯಾ ಗಂಗಾಧರ್ ನುಡಿದರು.

ಅಕ್ಕಮಹಾದೇವಿ ಮಹಿಳಾ ಸಂಘ ಜ್ಯೋತಿನಗರದ ಶರಣೆ ಆಯ್ದಕ್ಕಿ ಲಕ್ಕಮ್ಮ ಗುಂಪಿನ ಅಗೆ ಹುಣ್ಣಿಮೆಯನ್ನು ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯಭವನದಲ್ಲಿ ನಿನ್ನೆ ಸಂಜೆ ಉದ್ಘಾಟಿಸಿ ಅವರು ಮಾತನಾಡಿ ಈಸಕ್ಕಿ ಆಸೆ ನಮಗೇಕೆ ಎಂದ ಶರಣೆ ನಮಗಿಂದು ಆದರ್ಶವಾಗಬೇಕೆಂದರು.

ಆಸೆ, ಭಕ್ತಿ ಮತ್ತು ಕಾಯಕ ಲಕ್ಕಮ್ಮನ ವಚನಗಳ ಪ್ರಮುಖ ಸಂಗತಿಯಾಗಿತ್ತು. ಆಸೆಯನ್ನು ಬಿಟ್ಟರೆ ಸಂತೃಪ್ತಿಜೀವನ ಸಾಧ್ಯ.  ಕಾಯಕದಿಂದ ಮುಕ್ತಿ ಎಂದು ಸಾರಿದಾಕೆ.  ಭಕ್ತಿಮಾರ್ಗದಲ್ಲಿ ನಡೆದಾಕೆ ಎಂದು ಕಾವ್ಯ ವಿವರಿಸಿದರು.

ಅನ್ನಕ್ಕೆ ಬೇಕಾದ ಅಕ್ಕಿಯನ್ನು ಆಯ್ದುತಂದು ಜೀವನ ಸಾಗಿಸಿದಂತಹ ಮಹಾಸಾಧ್ವಿ. ಆಕೆಯ ಪತಿ ಮಾರಯ್ಯ ಒಮ್ಮೆ ಹೆಚ್ಚು ಅಕ್ಕಿ ಆಯ್ಕುಕೊಂಡು ಬಂದಾಗ ‘ಆಸೆಎಂಬುದು ಅರಸನಿಗಲ್ಲದೆ ಶಿವಶರಣರಿಗೆ ಉಂಟೇ..’ ಎಂದು ಆಸೆ ಮತ್ತು ಸಂಗ್ರಹವನ್ನು ತಿರಸ್ಕರಿಸಿದ ಲಕ್ಕಮ್ಮನ ಈ ವಚನ ಹೆಚ್ಚು ಜನಪ್ರಿಯ.  ಅಗೆಹುಣ್ಣಿಮೆ ಇಂದು ಗೌತಮಬುದ್ಧನ ಜನ್ಮದಿನವೂ ಹೌದು.  ಆಸೆಯೆ ದುಃಖಕ್ಕೆ ಮೂಲಕಾರಣ ಎಂಬುದು ಆತನ ಪ್ರಮುಖ ಬೋಧನೆ.  ಇಬ್ಬರ ಬೋಧನೆಗಳಲ್ಲಿ ಸಾಮ್ಯತೆಯನ್ನು ಗಮನಿಸಬಹುದೆಂದರು.

ವಚನ ಎಂದರೆ ಮಾತು. ಮಾತಿನ ಮೂಲಕವೇ ಅನುಭವಮಂಟಪದಲ್ಲಿ ವಿಚಾರಮಂಥನ ನಡೆಸಿ ಸಮಾಜಸುಧಾರಣೆಗೆ ಶ್ರಮಿಸಿದರು ಶರಣರು.  ಪುರುಷನ ಯಶಸ್ಸಿ ಹಿಂದೆ ಹೆಣ್ಣು ಇರುವ ಹಾಗೆ ಆಯ್ದಕ್ಕಿಲಕ್ಕಮ್ಮ  ತನ್ನ ಪತಿ ಮಾರಯ್ಯನಿಗೂ ಮಾರ್ಗದರ್ಶಕಳಾಗಿದ್ದಳು.  ಅನುಭವ ಮಂಟಪದ ಚರ್ಚೆಯಲ್ಲೆ ನಿರತನಾದ ಪತಿಯನ್ನು ಎಚ್ಚರಿಸಿ ಕಾಯಕಕ್ಕೆ ಕಳುಹಿಸುತ್ತಿದ್ದ ಪರಿ ಮಹತ್ವದ್ದು ಎಂದ ಕಾವ್ಯಾ,  ಇಷ್ಟದೇವರಾದ ಅಮರೇಶ್ವರಲಿಂಗ ನಾಮಾಂಕಿತದಲ್ಲಿ  25 ರಿಂದ 30 ವಚನಗಳನ್ನು ರಚಿಸಿರುವುದು ಲಭ್ಯವಿದೆ ಎಂದರು.

ಸಾಧನೆಗೆ ನಿರಂತರ ಪ್ರಯತ್ನ ಇದ್ದಾಗ ಸಾಧ್ಯ. 12ನೆಯ ಶತಮಾನದ ಅನುಭವ ಮಂಟಪದಲ್ಲಿ ಮಹಿಳಾ ಶಕ್ತಿ ಎಂದರೆ ಅಕ್ಕಮಹಾದೇವಿ. ಕನ್ನಡದ ಮೊದಲ ಕವಿಯತ್ರಿ  435ಕ್ಕೂ ಹೆಚ್ಚು ವಚನಗಳನ್ನು ರೂಪಿಸಿದ್ದಾರೆ. ಶರಣರು ಭಕ್ತಿ ಮತ್ತು ಕಾಯಕದ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದರು.

ಅಕ್ಕಮಹಾದೇವಿ ಸಂಘ ಕಳೆದ 14 ವರ್ಷದಿಂದ ಅನೇಕ ಕ್ಷೇತ್ರದಲ್ಲಿ ಕೆಲಸಮಾಡಿದ ಅನುಭವಿಗಳನ್ನು  ಕರೆಸಿ ಒಳ್ಳೆಯ ಮಾಹಿತಿಗಳನ್ನು ನೀಡುತ್ತಿರುವುದು ಸ್ತುತ್ಯಾರ್ಹ.  ಸಮಾಜಕ್ಕೆ ತಮ್ಮಿಂದ ಕೈಲಾದ ಸಹಾಯ ಮಾಡಿದಾಗ ತೃಪ್ತಿ.  ಮಹಿಳೆಯರಿಗೆ ಸ್ವ-ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಅಕಾಶಗಳಿವೆ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಯಮುನಾಸಿ.ಶೆಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಪ್ರತಿಯೊಬ್ಬರೂ ಆಸಕ್ತಿ ವಹಿಸಬೇಕು.  ಸಮಾಜದಲ್ಲಿ ಬರುವ ಎಡರು ತೊಡರುಗಳನ್ನು ಎದುರಿಸಿ ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳಬೇಕು. ಸಂಘಟಿತರಾದಾಗ ಮತ್ತಷ್ಟು ಬಲ ಬರುತ್ತದೆ ಎಂದರು.

ಖಜಾಂಚಿ ಭಾರತಿಶಿವರುದ್ರಪ್ಪ, ಸಹಕಾರ್ಯದರ್ಶಿ ನಾಗಮಣಿಕುಮಾರ್, ನಿರ್ದೇಶಕಿ ಹೇಮಲತಾ ವೇದಿಕೆಯಲ್ಲಿದ್ದರು.  ಗುಂಪಿನ ಮುಖಂಡೆ ಲತಾಪ್ರಸನ್ನ ಪ್ರಾಸ್ತಾವಿಸಿ ನಾಯಕತ್ವ ವಹಿಸಿಕೊಳ್ಳುವ ಅವಕಾಶವನ್ನು ಸದಸ್ಯರು ಬಳಕೆಮಾಡಿಕೊಳ್ಳಬೇಕೆಂದರು.

ಸದಸ್ಯರುಗಳಾದ ಚೂಡಮಣಿ ಸ್ವಾಗತಿಸಿ, ಸವಿತಾಚಂದ್ರು ವಂದಿಸಿದರು.  ಚೈತ್ರಾಪ್ರಕಾಶ ಪರಿಚಯಿಸಿ, ಶೋಭಾ ಸತೀಶ್ ನಿರೂಪಿಸಿದರು. ಗಿರಿಜಾ ಮತ್ತು ಭಾರತಿ ಪ್ರಾರ್ಥಿಸಿದರು.

ಲತಾಶೇಖರ್ ನಿರ್ದೇಶನದ ‘ಮನಸ್ಸಿನಂತೆ ಮಹಾದೇವ’ ಕಿರುನಾಟಕವನ್ನು ಮಮತಾ ಮತ್ತು ಸವಿತಾ ತಂಡ ಪ್ರಸ್ತುತಪಡಿಸಿತು.  ಮಂಜುಳಾಹರೀಶ್ ಮತ್ತು ಪೂಜಾಲೋಕೇಶ್ ತಂಡದ ಜಾನಪದನೃತ್ಯ ಆಕರ್ಷಕವಾಗಿತ್ತು.  ವಿವಿಧ ಆಟೋಟಸ್ಪರ್ಧಾ ವಿಜೇತರಿಗೆ ಲತಾಪ್ರಸನ್ನ ಬಹುಮಾನ ವಿತರಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ