October 5, 2024

ವಾಯ್ಸ್ ಸಂಸ್ಥೆ ಮತ್ತು ಅರಿವು ಬಾಳಿನ ಉಳಿವು ಸಮಾನ ಮನಸ್ಕ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮೂಡಿಗೆರೆಯ ಲ್ಯಾಂಪ್ಸ್ ಸೊಸೈಟಿ ಸಭಾಂಗಣದಲ್ಲಿ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.

ಸಮಾರಂಭದಲ್ಲಿ ನಮ್ಮೂರ ಮಕ್ಕಳ ಬರವಣಿಗೆ ಎಂಬ ಕಿರುಕವನ ಪುಸ್ತಕವನ್ನು ಅತಿಥಿಗಳಾದ ಎಂ.ಎಸ್ ನಾಗರಾಜು ಹಸೇನರ್ ಬೀಳಗುಳ ರಕ್ಷಿತ್ ಬಾಳೂರು ಕೃಷ್ಣಪ್ಪ ಮತ್ತು ಆಲ್ವಿನ್ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆ ಮಾಡಿದರು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಎಂ ಎಸ್ ನಾಗರಾಜ್ ರವರು ಮಕ್ಕಳ ಭಾವನಾತ್ಮಕ ವಿಷಯಗಳು ಮತ್ತು ಅವರು ಬರೆದ ಕವನಗಳು ಹಾಗೂ ಬರಹಗಳ ಪುಸ್ತಕವನ್ನು ಬಿಡುಗಡೆ ಮಾಡುವುದು ತುಂಬಾ ಸಂತೋಷ ತಂದಿದೆ ಒಂದು ತಿಂಗಳ ಕಾಲ ನಡೆದ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಕ್ಕಳು ಕವನ ಮತ್ತು ಬರಹಗಳನ್ನು ಬರೆದು ಪುಸ್ತಕ ರೂಪಕ ನೀಡಿ ಮಾಡಿರುವುದು ಶ್ಲಾಘನೀಯ ಎಂದರು.

ಕಾಫಿನಾಡು ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಹಸೈನಾರ್ ಬಿಳುಗುಳ ರವರು ಮಕ್ಕಳಿಗೆ ಸಮಾಜ ಮುಖಿ ಕೆಲಸ ಕಾರ್ಯಗಳಿಗೆ ನಾವು ಯಾವಾಗಲೂ ಸಿದ್ದರಾಗಿರುತ್ತೇವೆ ಮತ್ತು ಯಾವುದೇ ತುರ್ತು ಸಂದರ್ಭದಲ್ಲಿ ನಮ್ಮನ್ನು ಸಂಪರ್ಕಿಸಿ ನಿಮಗೆ ನೆರವಾಗಲು ನಾವು ಸದಾ ಸಿದ್ದ ಎಂದರು.

ಭಾರತೀಯ ಸ್ಕೌಟ್ಸ್ ಅಂಡ್ ಗೈಡ್ ಸಹಕಾರ್ಯದರ್ಶಿ ರಕ್ಷಿತ್ ಬಾಳೂರ್ ರವರು ಮಾತನಾಡಿ ಜೀವನದಲ್ಲಿ ಹೋರಾಟಗಳು ಎದುರಾದಾಗ ಛಲ ಬಿಡದೆ ಮುಂದೆ ಸಾಗಬೇಕು ಮತ್ತು ಇಂತಹ ಅನೇಕ ಶಿಬಿರಗಳಲ್ಲಿ ಪಾಲ್ಗೊಂಡು ಹೆಚ್ಚಿನ ಮಾಹಿತಿ ಮತ್ತು ತರಬೇತಿಯನ್ನು ತರಬೇತಿಗಳನ್ನು ಪಡೆದುಕೊಳ್ಳಿ ಎಂದರು.

ಲ್ಯಾಂಪ್ಸ್ ಸಿಇಒ ಕೃಷ್ಣಪ್ಪ ರವರು ಜೀವನದಲ್ಲಿ ಏರುಪೇರು ಸಹಜ ಆದರೆ ಬಾಲ್ಯ ಮತ್ತೆ ಮರುಕಳಿಸುವುದಿಲ್ಲ ನೀವು ಬಾಲ್ಯದಲ್ಲಿ ಏನನ್ನು ಕಲಿಯುತ್ತಿರೋ ಅದು ನಿಮಗೆ ಮುಂದಿನ ದಿನಗಳಲ್ಲಿ ಉನ್ನತ ಹುದ್ದೆ ಮತ್ತು ಸ್ಥಾನ ಮಾನ ಸಿಗಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಡಾಕ್ಟರ್ ಅನುಷ್ ಮಕ್ಕಳು ಕಲಿಯುತ್ತ ನಲಿಯುತ್ತ ಬಹಳಷ್ಟು ವಿಚಾರಗಳನ್ನು ಬೇಸಿಗೆ ಶಿಬಿರದಲ್ಲಿ ಕಲಿತುಕೊಂಡಿದ್ದಾರೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮೂಡಿಗೆರೆ ತಾಲೂಕಿನ ಆಣಜೂರು ಗ್ರಾಮದ ರಶ್ಮಿ ಅವರನ್ನು ಕಬ್ಬಡಿ ಪಟು ಮತ್ತು ಅಲ್ವಿನ್ ಕಾರ್ ರೇಸರ್ ಹಾಗೂ ಗೀತಾ ಅಣ್ಣಪ್ಪ ಹಳ್ಳಿಕೆರೆ ಬಾಳೂರು ಇವರನ್ನು ಸನ್ಮಾನಿಸಲಾಯಿತು.

ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು ಪೋಷಕರು ಮತ್ತು ಮಕ್ಕಳ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡರು ಮಕ್ಕಳ ಮನೋ ಧೈರ್ಯ ಹೆಚ್ಚಾಗಿದ್ದು ಜೀವನದ ಮೌಲ್ಯಗಳನ್ನು ಶಿಬಿರದಲ್ಲಿ ಮಕ್ಕಳು ಬಹಳಷ್ಟು ಕಲಿತಿದ್ದಾರೆ ಮತ್ತು ಅದನ್ನು ಅಳವಡಿಕೆ ಮಾಡಲು ಸಾಧ್ಯವಾಗಿದೆ ಎಂದರು

ಈ ಕಾರ್ಯಕ್ರಮಕ್ಕೆ ಸಹಕರಿಸಿದ ವಿಮುಕ್ತಿ ಸೇವಾ ಕೇಂದ್ರ ಬನಕಲ್ ಹಾಗು ಎಲ್ಲಾ ಸಂಘ ಸಂಸ್ಥೆ ಗಳಿಗೆ ಧನ್ಯವಾದ ಹೇಳಲಾಯಿತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಹಾಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ನೃತ್ಯ ನಾಟಕ ಹಾಗೂ ಕಿರು ನಾಟಕವನ್ನು ಪ್ರದರ್ಶನ ಮಾಡಿದರು

ಈ ಕಾರ್ಯಕ್ರಮದಲ್ಲಿ ಆಯೋಜಕರಾದ ನವೀನ್ ಆನೆದಿಬ್ಬ ಶಿಬಿರ ಶಿಕ್ಷಕರಾದ ಆದಿ. ವಿಜಯಲಕ್ಷ್ಮಿ,. ಮಧುಚಂದ್ರ .ಸುನೀತ .ಉಷಾ. ಮೋನಿಷಾ. ದೀಕ್ಷಿತ್ ಮತ್ತು ಲ್ಯಾಂಪ್ ಸೊಸೈಟಿ ಅಧ್ಯಕ್ಷರಾದ ವಿಜಯೇಂದ್ರ ಆಟೋ ಕೇರ್ ಮಾಲೀಕರಾದ ಅಲ್ವಿನ್ ಹಾಗೂ ಶಿಬಿರದ ಮಕ್ಕಳು ಮತ್ತು ಪೋಷಕರು ಇತರರು ಹಾಜರಿದ್ದರು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ