October 5, 2024

ಪಶುಸಂಗೋಪನಾ ಇಲಾಖೆಯ ನಿರ್ಲಕ್ಷ್ಯದಿಂದ ಗಾಯಗೊಂಡಿದ್ದ ಹೋರಿಯೊಂದು ಜೀವಕಳೆದುಕೊಂಡಿರುವ ಘಟನೆ ನಡೆದಿದೆ.

ಮೂಡಿಗೆರೆ ಪಟ್ಟಣದಲ್ಲಿ ವೇಣುಗೋಪಾಲ ದೇವಸ್ಥಾನದ ಸಮೀಪ ಎರಡು ಬೀದಿದನಗಳು ಪರಸ್ಪರ ಕಾದಾಟ ನಡೆಸಿದ ಪರಿಣಾಮ ಒಂದು ಹೋರಿ ತೀವ್ರ ಗಾಯಗೊಂಡಿತ್ತು.

ಇದನ್ನು ಗಮನಿಸಿದ ಸ್ಥಳೀಯ ಯುವಕರು ಪಶುಆಸ್ಪತ್ರೆಗೆ ಮಾಹಿತಿ ನೀಡಿದರು. ಆದರೆ ಎಷ್ಟೇ ಹೊತ್ತಾದರು ಪಶು ಅಂಬುಲೆನ್ಸ್ ಸ್ಥಳಕ್ಕೆ ಬಾರದೇ ಇದ್ದಾಗ ಯುವಕರು ಸ್ವತಃ ತಾವೇ ವಾಹನದಲ್ಲಿ ಗಾಯಗೊಂಡ ಗೋವನ್ನು ಪಶು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಅಲ್ಲಿಯೂ ವೈದ್ಯರು ಸಕಾಲಕ್ಕೆ ಬಾರದೇ ಗೋವು ಸಾವನ್ನಪ್ಪಿದೆ.

ಈ ಬಗ್ಗೆ ಬಜರಂಗದಳ ಮೂಡಿಗೆರೆ ನಗರ ಸಂಯೋಜಕರು ಧನು. ತಾಲೂಕು ಗೋ ರಕ್ಷಕ್ ಪ್ರಮುಖ್ ಮನೋಜ್. ಸಪ್ತಹಿಕ್ ಮಿಲನ್ ಪ್ರಮುಖ್ ಪ್ರಸನ್ನ. ಸುರಕ್ಷಾ ಪ್ರಮುಖ್ ನಿತಿನ್. ನಗರ ವಿದ್ಯಾರ್ಥಿ ಪ್ರಮುಖ್ ಮನೋಜ್ ಮುಂತಾದವರು ಪಶು ಇಲಾಖೆ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ನಂತರ ಮೃತ ಗೋವನ್ನು ಪಟ್ಟಣದ ಬೀಜುವಳ್ಳಿ ಸಮೀಪ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಸರ್ಕಾರ ಪಶುಗಳ ತುರ್ತು ಚಿಕಿತ್ಸೆಗಾಗಿ ಅಂಬುಲೆನ್ಸ್ ನೀಡಿದ್ದರೂ ಸಹ ಮೂಡಿಗೆರೆಯಲ್ಲಿ ಪಶು ಆಸ್ಪತ್ರೆಯ ಕೂಗಳತೆ ದೂರದಲ್ಲಿ ಗಾಯಗೊಂಡಿದ್ದ ಗೋವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಬಗ್ಗೆ ಭಜರಂಗದಳದ ಕಾರ್ಯಕರ್ತರು ತಮ್ಮ ಅಸಮಧಾನ ಹೊರಹಾಕಿದ್ದು, ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ