October 5, 2024

ಮೂಡಿಗೆರೆ ತಾಲೂಕಿನ ಹೆಸಗಲ್ ಗ್ರಾಮದಲ್ಲಿ 2 ದಿನ ನಡೆಯುವ ಶ್ರೀ ಮಾರಮ್ಮ ದೇವಿ ಉತ್ಸವ ಹಾಗೂ ಕೆಂಡೋತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಹೆಸಗಲ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಈ ಕೆಂಡೋತ್ಸವವನ್ನು 3 ವರ್ಷಕ್ಕೊಮ್ಮೆ ಅದ್ದೂರಿಯಾಗಿ ಆಚರಿಸುತ್ತಾರೆ. ಸೋಮವಾರ ಗ್ರಾಮದ ದೇವತೆ ಶ್ರೀ ಮಾರಮ್ಮ ದೇವಿ ಸನ್ನಿಧಿಗೆ ಸುತ್ತಮುತ್ತ ಗ್ರಾಮದಲ್ಲಿ ನೆಲೆಸಿರುವ ದುರ್ಗಿ, ಚೌಡಮ್ಮ, ಮಠದ ಭೂತಪ್ಪ, ರಾಹು ಭೂತಪ್ಪ ದೈವವನ್ನು ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮೂಲಕ ಕರೆ ತರಲಾಯಿತು. ಬಳಿಕ ಶ್ರೀ ಮಾರಮ್ಮ ಸೇರಿದಂತೆ ಎಲ್ಲಾ ಗ್ರಾಮದ ದೇವರಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ಗ್ರಾಮಕ್ಕೆ ಒಳಿತಾಗುವ ಜತೆಗೆ ಉತ್ತಮ ಮಳೆ ಬಳೆಯಾಗುವಂತೆ ಭಕ್ತರು ಪ್ರಾರ್ಥನೆ ಸಲ್ಲಿಸಿದರು.. ಮಂಗಳವಾರ ಬಲಿ ಪೂಜೆ ಸೇರಿದಂತೆ ವಿಶೇಷ ಪೂಜಾ ಕಾರ್ಯ ನಡೆಯಲಿದ್ದು, ಬೆಳಗ್ಗೆ 11 ಗಂಟೆಗೆ ಕೆಂಡೋತ್ಸವ ಆಚರಣೆ ನೆರವೇರಿಸಿದ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಶ್ರೀ ಮಾರಮ್ಮ ದೇವಸ್ಥಾನದ ಸಮಿತಿ ಸದಸ್ಯರು ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ