October 5, 2024

ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೂಡಿಗೆರೆ ಮತ್ತು ಕಳಸ ತಾಲೂಕು ವ್ಯಾಪ್ತಿಯಲ್ಲಿ ಶೇ.91.52 ರಷ್ಟು ಫಲಿತಾಂಶ ದಾಖಲಿಸಿ, ಮೂಡಿಗೆರೆ ತಾಲ್ಲೂಕು ಚಿಕ್ಕಮಗಳೂರು ಜಿಲ್ಲೆಯಲ್ಲಿ 4 ನೇ ಸ್ಥಾನದಲ್ಲಿದ್ದು, 10 ಸರಕಾರಿ ಶಾಲೆ ಶೇ.100 ಫಲಿತಾಂಶ ಪಡೆದುಕೊಂಡಿದೆ.

ಮೂಡಿಗೆರೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಎಸ್.ಉಜ್ವಲ್ 615 ಅಂಕ ಪಡೆದು ಮೂಡಿಗೆರೆ ಮತ್ತು ಕಳಸ ತಾಲ್ಲೂಕು ವ್ಯಾಪ್ತಿಗೆ ಪ್ರಥಮ ಸ್ಥಾನ ಗಳಿಸಿದ್ದಾನೆ.

ಕಳಸ ಜೆಇಎಂ ಪ್ರೌಢಶಾಲೆಯ ಎಸ್.ಶ್ರವಣಿ 611, ಕಳಸ ಪ್ರಬೋಧಿನಿ ಶಾಲೆಯ ಕೆ.ಸಿ.ಸಿಂಚನ 611, ಮೂಡಿಗೆರೆ ಬೆಥನಿ ಶಾಲೆಯ ಸಿಯೋಲ್ ಕಾರ್ಲೋ 606, ಕಳಸ ಜೆಇಎಂ ಶಾಲೆಯ ಎಸ್.ಬಿ.ಜ್ಯೋತಿಶ್ರೀ 605, ಪ್ರಾರ್ಥನಾ ಮಹೇಶ್ 605 ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

ಸರ್ಕಾರಿ ಪ್ರೌಢ ಶಾಲೆಗಳಾದ ಅಂಗಡಿ, ಬೆಟ್ಟಗೆರೆ, ದಾರದಹಳ್ಳಿ, ಬಾಳೆಹೊಳೆ, ಕುದುರೆಮುಖ, ಜಿಜಿಜೆಸಿ ಮೂಡಿಗೆರೆ, ಅಂಬೇಡ್ಕರ್ ವಸತಿ ಶಾಲೆ ಕಳಸ, ಇಂದಿರಾಗಾಂಧಿ ವಸತಿ ಶಾಲೆ ಕೋಳೂರು, ಮುರಾರ್ಜಿ ವಸತಿ ಶಾಲೆ ಬಿದರಹಳ್ಳಿ ಮತ್ತು ಮೂಡಿಗೆರೆ ಒಟ್ಟು 10 ಸರಕಾರಿ ಶಾಲೆ ಶೇ.100 ಫಲಿತಾಂಶ ಪಡೆದಿದ್ದಲ್ಲದೇ, ಅನುದಾನಿತ ಶಾಲೆಯಾದ ಜಾವಳಿಯ ಎಸ್‍ಎಲ್‍ಆರ್‍ಜಿ ಪೌಢಶಾಲೆ, ಅನುದಾನಿತ ರಹಿತ ಶಾಲೆಯಾದ ವಿದ್ಯಾಭಾರತಿ ಪ್ರೌಢಶಾಲೆ ಬಣಕಲ್, ಜೆಇಎಂ ಪ್ರೌಢಶಾಲೆ ಕಳಸ, ಪ್ರಭೋಧಿನಿ ಪ್ರೌಢಶಾಲೆ ಕಳಸ ಶೇ.100 ಫಲಿತಾಂಶ ಪಡೆದಿವೆ.

ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿರುವ ಉಜ್ವಲ್ ಎಸ್. ಮೂಡಿಗೆರೆ ತಾಲ್ಲೂಕಿನ ಬೈದುವಳ್ಳಿ ಗ್ರಾಮದ ಕೃಷ್ಣಮೂರ್ತಿ ಅವರ ಮೊಮ್ಮಗ, ಶ್ರೀನಿವಾಸ್ ಮತ್ತು ನಯನಾಕ್ಷಿ ಅವರ ಪುತ್ರ.

ಬೆಂಗಳೂರು ಮೂಲದ ಅವರ ತಂದೆ ಪ್ರಸ್ತುತ ಮೂಡಿಗೆರೆ ತಾಲ್ಲೂಕಿನ ಊರುಬಗೆಯಲ್ಲಿ ಜಮೀನು ಖರೀದಿಸಿ ಕೃಷಿ ಮಾಡುತ್ತಿದ್ದು, ತನ್ನ ಮಗನನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂಬ ಕಾಳಜಿಯಿಂದ ಮೂಡಿಗೆರೆ ಸರ್ಕಾರಿ ಪ್ರೌಢಶಾಲೆಗೆ ಸೇರಿಸಿದ್ದರು. ಇದೀಗ ಉಜ್ವಲ್ 625ಕ್ಕೆ 615 ಅಂಕಗಳನ್ನು ಗಳಿಸಿ ಮೂಡಿಗೆರೆ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾನೆ. ಮಗನ ಸಾಧನೆಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ