October 5, 2024

ರಾಜ್ಯದ ಮಲೆನಾಡು ಭಾಗದಲ್ಲಿ ಬಿಸಿಲಿನ ತಾಪಕ್ಕೆ ತೋಟಗಾರಿಕಾ ಬೆಳೆಗಳು ಸುಟ್ಟು ಕರಕಲಾಗುತ್ತಿವೆ. ತೀವ್ರ ತಾಪಮಾನದ ಏರಿಕೆಯಿಂದಾಗಿ ಕಾಫಿ, ಅಡಿಕೆ ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ತಾಪಮಾನದ ಮಟ್ಟವು 38 ಡಿಗ್ರಿ ಸೆಲ್ಸಿಯಸ್‌ಗೆ ಏರಿರುವುದರಿಂದ ವಾಣಿಜ್ಯ ಬೆಳೆಗಳಾದ ಕಾಫಿ, ಅಡಿಕೆ ಮತ್ತು ಕಾಳುಮೆಣಸಿಗೆ ತೀವ್ರ ಹಾನಿಯಾಗಿದೆ. ತೇವಾಂಶದ ಕೊರತೆಯಿಂದಾಗಿ ಮೊಳಕೆಯೊಡೆಯಲು ಪ್ರಾರಂಭಿಸಿದ ಎಳೆ ಅಡಿಕೆಗಳು ಬೀಳಲು ಪ್ರಾರಂಭಿಸಿವೆ.

ಮಲೆನಾಡಿನಲ್ಲಿ ಪ್ರಮುಖವಾಗಿ ಬೆಳೆಯುವ ಬೆಳೆಗಳೆಂದರೆ ಕಾಫಿ, ಅಡಿಕೆ, ಕಾಳುಮೆಣಸು. ಈ ಬೆಳೆಗಳಿಗೆ ಬೇಸಿಗೆಯಲ್ಲಿ ನೀರಿನ ಅವಶ್ಯಕತೆ ತುಂಬಾ ಇದೆ. ತೇವಾಂಶದ ಕೊರತೆ ಆದರೆ ಮುಂದಿನ ವರ್ಷದ ಫಸಲಿನ ಮೇಲೆ ಪರಿಣಾಮ ಬೀರಲಿದೆ. ಮಲೆನಾಡು ಭಾಗದಲ್ಲಿ ಒಂದೆರಡು ಬಾರಿ ಪೂರ್ವ ಮುಂಗಾರು ಮಳೆಯಾಗಿದ್ದರೂ, ಬಿಸಿಲಿನ ತಾಪವು ತೇವಾಂಶವನ್ನು ಶೂನ್ಯಗೊಳಿಸಿದೆ. ಹೀಗಾಗಿ ಬೆಳೆಗಳ ಮೇಲೆ ಪರಿಣಾಮ ಬೀರಿದೆ.

ಸುಡುವ ಬಿಸಿಲು ಮೊಳಕೆಯೊಡೆದ ಕಾಫಿ ಬೀಜಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ಬಿಸಿಲಿನ ಝಳಕ್ಕೆ ಕಾಫಿ ಬೀಜಗಳು ಕಪ್ಪಾಗುತ್ತವೆ ಮತ್ತು ಬಲಿಯುವ ಮುನ್ನವೇ ಉದುರುತ್ತವೆ. ಹೀಗಾಗಿ ಇಳುವರಿಯಲ್ಲಿ ತೀವ್ರ ಕುಸಿತ ಉಂಟಾಗಿದೆ.   ಕಾಫಿ ಗಿಡಗಳು ಶಾಖ ಮತ್ತು ಬಿಸಿಲಿನ  ತಾಪದಿಂದ ಒಣಗಲು ಪ್ರಾರಂಭಿಸಿವೆ. ಕೆಲವು ಕಡೆ ಅರೇಬಿಕಾ ಕಾಫಿ ಗಿಡಗಳು ಮತ್ತು ಕಾಳು ಮೆಣಸು ಬಳ್ಳಿಗಳು ಒಣಗಿ ನಿಂತಿವೆ.

ಮುಂದಿನ ವರ್ಷದ ಬೆಳೆಗಳ ಇಳುವರಿಯಲ್ಲಿ ತೀವ್ರ ಕುಸಿತ ಉಂಟಾಗಲಿದೆ. ಇದೇ ರೀತಿಯ ಹವಾಮಾನ ಮುಂದುವರಿದರೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ.

ಈಗ ರೊಬಸ್ಟಾ ಕಾಫಿಗೆ ಉತ್ತಮ ಬೆಲೆಯಿದ್ದು, ರೈತರು ಬೆಲೆಗೆ ಪೂರಕವಾಗಿ ಫಸಲನ್ನು ಪಡೆಯಲಾಗದೇ ಬೆಲೆಯೇರಿಕೆಯ ಲಾಭವನ್ನು ಪಡೆಯಲು ವಿಫಲರಾಗುತ್ತಿದ್ದಾರೆ.

ಕಾಫಿ ತೋಟಗಳಲ್ಲಿ ಸೂರ್ಯನ ಕಿರಣಗಳು ಬಿದ್ದು ಹಾನಿಯಾಗುವುದರಿಂದ ಮರಕಸಿಯನ್ನು ಮುಂದೂಡುವುದು ಒಳಿತು. ಮಳೆ ಅಭಾವ, ಬಿಸಿಲಿನ ತಾಪದಿಂದ ಕಾಳುಮೆಣಸಿನ ಬಳ್ಳಿಗಳ ಬೆಳವಣಿಗೆ ಕುಂಠಿತವಾಗಿದ್ದು, ಎಲೆಗಳು ಉದುರಲಾರಂಭಿಸಿವೆ. ಬಳ್ಳಿಗಳ ಆರೋಗ್ಯದ ಬಗ್ಗೆ ಬೆಳೆಗಾರರು ಆತಂಕದಲ್ಲಿದ್ದಾರೆ ಮತ್ತು ಮುಂಬರುವ ವರ್ಷದಲ್ಲಿ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಬೆಳೆಗಾರರೊಬ್ಬರು ಹೇಳುತ್ತಾರೆ.

ಈ ನಡುವೆ ಮೇ 7 ರಿಂದ ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಅಲ್ಪಸ್ವಲ್ಪ ಫಸಲಾದರೂ ಉಳಿಯಬಹುದೇ ಎಂದು ರೈತರಲ್ಲಿ ಕೊಂಚ ಭರವಸೆ ಮೂಡಿಸಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ