October 5, 2024

ಚಪ್ಪರ ಶಾಸ್ತ್ರದ ಊಟದಲ್ಲಿ ಸಿಹಿತಿಂಡಿ ಇರಲಿಲ್ಲ ಎಂಬ ನೆಪಮಾಡಿಕೊಂಡು ಮದುವೆ ದಿನವೇ ವರನ ಕಡೆಯವರು ಕಿರಿಕ್ ಮಾಡಿ ಮದುವೆ ಮುರಿದು ಬಿದ್ದ ಪ್ರಸಂಗ ನಡೆದಿದೆ. ವರನ ಕಡೆಯವರಿಗೆ ಸಿಹಿತಿಂಡಿ ನೀಡಿಲ್ಲದ ಕಾರಣ ಹೇಳಿ ನನಗೆ ಈ ಮದುವೆ ಬೇಡ ಎಂದು ವರ ಗಲಾಟೆ ಮಾಡಿ ಕೊನೆಗೆ ತನಗೆ ಮದುವೆಯೇ ಬೇಡ ಎಂದು ತೆರಳಿದ್ದಾನೆ.

ಕೊಡಗು ಜಿಲ್ಲೆಯಲ್ಲಿ ಸೋಮವಾರ ಪೇಟೆಯ ಜಾನಕಿ ಕನ್ವೆನ್ಶನ್‌ ಹಾಲ್‌ನಲ್ಲಿ ಘಟನೆ ನಡೆದಿದೆ. ಹಾನಗಲ್ಲು ಗ್ರಾಮದ ಸಿದ್ಧಾರ್ಥ ಬಡಾವಣೆಯ ಯುವತಿ ಮತ್ತು ತುಮಕೂರು ಜಿಲ್ಲೆಯ ಯುವಕ ನೊಂದಿಗೆ ಮೇ 5ರಂದು ಭಾನುವಾರ ಮದುವೆ ನಿಶ್ಚಯಾಗಿವಾಗಿತ್ತು. ಆದರೆ ರಾತ್ರೋ ರಾತ್ರಿ ವರ ಉಂಗುರ ಕಳಚಿಕೊಟ್ಟು ಹೋಗಿದ್ದಾನೆ.

ಆದರೆ ವಧುವಿನ ಕಡೆಯವರು ಹೇಳುವಂತೆ ವಿವಾಹಕ್ಕೂ ಮೊದಲು ವರನ ಕಡೆಯವರಿಂದ ವರದಕ್ಷಿಣೆ ಕೊಡುವಂತೆ ಒತ್ತಾಯವು ಕೇಳಿ ಬಂದಿತ್ತು ಎನ್ನಲಾಗಿದೆ. ಚಿನ್ನಾಭರಣ ಮತ್ತು ಬೆಂಗಳೂರಿನಲ್ಲಿ ಸೈಟ್ ಕೊಡುವಂತೆ ವರನ ಪೋಷಕರು ಒತ್ತಾಯಿಸಿದ್ದರು. ಮದುವೆ ದಿನ ಚಿನ್ನ ಕೊಟ್ಟಿಲ್ಲ ಎಂದು ಊಟದ ನೆಪ ಹೇಳಿ ಗಲಾಟೆ ತೆಗೆದು ಮದುವೆ ಬೇಡ ಎಂದು ಬಿಟ್ಟು ಹೋಗಿದ್ದಾರೆ ಎಂದು ವಧುವಿನ ಪೋಷಕರು ಆರೋಪಿಸಿದ್ದಾರೆ.

ವರನ ಕಡೆಯವರು ಶನಿವಾರ ಸಂಜೆಯೇ ತುಮಕೂರಿನಿಂದ ಮಂಟಪಕ್ಕೆ ಆಗಮಿಸಿದ್ದರು. ಮದುವೆಯ ಹಿಂದಿನ ದಿನ ಚಪ್ಪರ ಶಾಸ್ತ್ರದಲ್ಲಿ ವರ ಕಡೆಯವರಿಗೆ ಊಟದಲ್ಲಿ ಸಿಹಿತಿಂಡಿ ನೀಡಿಲ್ಲ, ಎಂದು  ಗಲಾಟೆ ತೆಗೆದಿದ್ದಾರೆ. ನಂತರ ಈ ಮದುವೆ ಗಲಾಟೆಯು ಪೊಲೀಸ್‌ ಠಾಣೆಯ ಮೆಟ್ಟಿಲೇರಿದಾಗ, ರಾತ್ರಿ ಮದುವೆಯೇ ಬೇಡ ಎಂದು ವರ ಉಂಗುರ ಕಳಚಿಕೊಟ್ಟಿದ್ದಾನೆ.

ಇದೆಲ್ಲ ಘಟನೆಯಿಂದ ಬೇಸತ್ತ ವಧು ಕೂಡ ಈ ಮದುವೆಯೇ ಬೇಡ, ಈಗಲೇ ಈ ರೀತಿ ವರ್ತಿಸುವ ಗಂಡು ನನಗೂ ಬೇಡಪ್ಪಾ ಎಂದು ಪೊಲೀಸರೆದುರು ಹೇಳಿಕೆ ನೀಡಿದ್ದಾಳೆ. ಹೀಗಾಗಿ ಗುರು ಹಿರಿಯರೆಲ್ಲರೂ ಸೇರಿ ನಿಶ್ಚಯಿಸಿದ ವಿವಾಹ ಕಾರ್ಯವು ಸಿಹಿ ತಿಂಡಿ ವಿಚಾರವಾಗಿ ಮುರಿದು ಬಿದ್ದಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ