October 5, 2024

ಮೂಡಿಗೆರೆ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಅಧಿಕಗೊಳ್ಳುತ್ತಿದ್ದು, ಇದನ್ನು ನಿಯಂತ್ರಿಸಲು ಮೂಡಿಗೆರೆ ಪಿಎಸ್‍ಐ ಶ್ರೀನಾಥ್‍ರೆಡ್ಡಿ ಹಾಗೂ ಸಿಬ್ಬಂದಿ ಗುರುವಾರ ಪಟ್ಟಣದ ಪ್ರಮುಖ ರಸ್ತೆಗಳಿಗೆ ತೆರಳಿ, ವಾಹನಗಳ ಸುಗಮ ಪಾರ್ಕಿಂಗ್ ವ್ಯವಸ್ಥೆಗೆ ಕ್ರಮ ಕೈಗೊಂಡರು.

ಪಟ್ಟಣದ ಕೆ.ಎಂ.ರಸ್ತೆ, ಎಂ.ಜಿ ರಸ್ತೆ, ಜೆ.ಎಂ.ರಸ್ತೆ, ಆಜಾದ್ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ತರಕಾರಿ ಅಂಗಡಿ ಎದುರು ರಸ್ತೆಗೆ ತರಕಾರಿ ಇಟ್ಟುಕೊಂಡಿರುವುದು, ದಿನಸಿ, ಬೇಕರಿ ಅಂಗಡಿಗಳ ಎದುರು ಇಟ್ಟಿರುವ ಹಾಲಿನ ಬಾಕ್ಸ್‍ಗಳು, ಪಾರ್ಕಿಂಗ್‍ಗೆ ಸಮಸ್ಯೆಯಾಗುತ್ತಿರುವ ಹೊಟೇಲ್‍ಗಳ ಬೋರ್ಡ್‍ಗಳನ್ನು ಸಂಪೂರ್ಣ ತೆರವುಗೊಳಿಸಲಾಯಿತು. ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳು ಪ್ರವೇಶಿಸದಂತೆ ಕ್ರಮ ಕೈಗೊಳ್ಳಲಾಯಿತು.

ಪಟ್ಟಣದ ಜೆ.ಎಂ.ರಸ್ತೆ, ದೊಡ್ಡಿಬೀದಿ, ಛತ್ರಮೈಧಾನ, ಪರಿಮಳಮ್ಮ ದೇವಸ್ಥಾನ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ವಾಹನ ಮಾಲೀಕರು ರಸ್ತೆ ಬದಿಯಲ್ಲಿಯೇ ವಾರ ಹಾಗೂ ತಿಂಗಳುಗಟ್ಟಲೆ ವಾಹ ಪಾರ್ಕಿಂಗ್ ಮಾಡುತ್ತಿದ್ದು, ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು. ಆ ರಸ್ತೆಗಳಿಗೆ ತೆರಳಿ, ತಿಂಗಳುಗಟ್ಟಲೆ ನಿಲ್ಲಿಸಿದ್ದ ವಾಹನಗಳನ್ನು ತೆರವುಗೊಳಿಸಿ ಎಚ್ಚರಿಕೆ ನೀಡಲಾಯಿತು. ಇನ್ನು ಮುಂದೆ ರಸ್ತೆಯಲ್ಲಿ ತಿಂಗಳುಗಟ್ಟಲೆ ವಾಹನ ಪಾರ್ಕಿಂಗ್ ಮಾಡಿರುವ ದೂರುಗಳು ಬಂದರೆ ದೊಡ್ಡ ಮಟ್ಟದ ದಂಡ ವಿಧಿಸಲಾಗುವುದು ಎಚ್ಚರಿಕೆ ನೀಡಲಾಯಿತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ