October 5, 2024

ಭಾರತೀಯ ಸಂಸ್ಕೃತಿ ಪರಂಪರೆಯ ಹಿಂದೆ ತುಂಬಾ ದೊಡ್ಡ ವೈಜ್ಞಾನಿಕ ಹಿನ್ನೆಲೆ ಇದ್ದು ಇದನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ನೀಡಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ  ಎಂದು ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದ ಸ್ವಾಮೀಜಿಯವರು ಹೇಳಿದರು.

ಅವರು ಚಿಕ್ಕಮಗಳೂರು ತಾಲ್ಲೂಕಿನ ಆಣೂರು ಗ್ರಾಮದಲ್ಲಿ  ನೂತನವಾಗಿ ನಿರ್ಮಾಣವಾಗಿರುವ ಶ್ರೀ ಅಮೃತೇಶ್ವರ ದೇವರ ದೇವಸ್ಥಾನದ ಶ್ರೀ ಬ್ರಹ್ಮಕಲಶ ಕಾರ್ಯಕ್ರಮ ಉದ್ಘಾಟಿಸಿ ಧಾರ್ಮಿಕ ಪ್ರವಚನ ನೀಡುತ್ತಿದ್ದರು.

ನಮ್ಮ ಸಂಸ್ಕೃತಿಯ ಹಿಂದೆ ಇರುವ ವಿಜ್ಞಾನ ಇಡೀ ಜಗತ್ತಿಗೆ ಮಾದರಿ ಆದದ್ದು, ಅದರ ತಿಳಿಯುವಿನ ಅವಶ್ಯಕತೆ ನಮಗೆ ಅಗತ್ಯವಾಗಿದೆ, ಇಂದಿನ ಆಧುನಿಕ ವೇಗದ ಜೀವನಕ್ರಮದಲ್ಲಿ ನಮಗೆ ನಮ್ಮ ಕಲೆ ಸಂಸ್ಕೃತಿ ಸಂಪ್ರಾದಾಯಗಳ ಬಗ್ಗೆ ಗಮನ ಹರಿಸಲು ಯಾರಿಗೂ ಸೈರಣೆ ಇಲ್ಲದಾಗಿದೆ. ದಾವಂತದ ಬದುಕಿಗೆ ಕೊಂಚ ಕಡಿವಾಣ ಹಾಕಿ ನಮ್ಮ ಹಿರಿಯರ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು, ಉಳಿಸಿ ಬೆಳೆಸುವ ಕಡೆಗೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ  ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಧರ್ಮೋತ್ತಾನ ಟ್ರಸ್ಟ್ ನ  ಟ್ರಸ್ಟಿಯಾದ ಪ್ರಶಾಂತ್ ಚಿಪ್ರಗುತ್ತಿ ಮಾತನಾಡಿ ; ದೇವಸ್ಥಾನಕ್ಕೆ ಬರುವುದು ನಮ್ಮನ್ನು ನಾವು ಶುದ್ಧೀಕರಣ ಮಾಡಿಕೊಳ್ಳಲು. ಪೂಜೆ ಒಂದು ಸುಧಾರಣಾ ಕ್ರಮ. ಮನುಷ್ಯ ವ್ಯಕ್ತಿಗತವಾಗಿ ಸುಧಾರಣೆ ಆದರೆ ಸಮಾಜವು ದೇಶವು ಜಗತ್ತು  ತನ್ನಷ್ಟಕ್ಕೆ ತಾನೇ  ಸುಧಾರಣೆ ಆಗುತ್ತ ಒಂದು ದಿನ ಬದಲಾವಣೆ ಆಗುತ್ತದೆ. ಇದನ್ನು ಆಧ್ಯಾತ್ಮಿಕತೆ ಹೇಳಿಕೊಡುತ್ತದೆ. ಆಧ್ಯಾತ್ಮಿಕತೆಯಿಂದ  ಮಾತ್ರ ಜಗತ್ತಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯ ಎಂದು ಹೇಳಿದರು.

ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ರಾಮಚಂದ್ರರಾವ್ ಮಾತನಾಡಿ ಕೇವಲ 13 ತಿಂಗಳಿನಲ್ಲಿ  ಎರಡು ಕೋಟಿ ರೂಪಾಯಿಯಲ್ಲಿ ಅದ್ಭುತವಾದ ದೇವಸ್ಥಾನವನ್ನು ಮಾಡಿರುವುದು  ಹೆಮ್ಮೆಯ ವಿಷಯ. ಇದರಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ದೊರಕಲಿ ಎಂದು ಹೇಳಿದರು.

ಶೃಂಗೇರಿ ಆದಿಚುಂಚನಗಿರಿ  ಶಾಖ ಮಠದಾಶಿ ಶ್ರೀ ಗುಣನಾಥ ಸ್ವಾಮೀಜಿ, ದೇವಸ್ಥಾನ ವ್ಯವಸ್ಥಾಪನ ಸಮಿತಿಯ  ಅಧ್ಯಕ್ಷರಾದ ಮಂಜುನಾಥ್ ಗೌಡ, ರಕ್ಷಣಾ ವೇದಿಕೆಯ ಶಶಿ, ವಕೀಲರಾದ ಶಿವಕುಮಾರ್ ಹಾಗೂ ಇನ್ನಿತರ ಪ್ರಮುಖರು ಗ್ರಾಮಸ್ಥರು  ನಾಡಿಗೆ ಸಂಬಂಧಪಟ್ಟ ಭಕ್ತರು ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ