October 5, 2024

ಚಿಕ್ಕಮಗಳೂರು ಜಿಲ್ಲೆಯ ಜನರು ಈ ತನಕ 2 ಉಪ ಚುನಾವಣೆ ಸಹಿತ 19 ಲೋಕಸಭಾ ಚುನಾವಣೆಗಳನ್ನು ಕಂಡಿದ್ದಾರೆ. 2009ರ ಪುನರ್ ವಿಗಂಡಣೆಯಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರವಾಗಿ ಬದಲಾಗುವ ಮುಂಚೆ 1967ಕ್ಕೂ ಹಿಂದೆ ಹಾಸನ-ಚಿಕ್ಕಮಗಳೂರು, ನಂತರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು ಕಾರ್ಕಳ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಇದಾಗಿತ್ತು.

ಪ್ರಸ್ತುತ ಉಡುಪಿ ಚಿಕ್ಕಮಗಳೂರು ಎಂಬ ಹೆಸರಿನಿಂದ ಕರೆಯಲ್ಪಡುತ್ತಿರುವ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾರ್ಕಳ, ಕಾಪು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ ವಿಧಾನಸಭಾ ಕ್ಷೇತ್ರಗಳಿವೆ.

* 1952ರಲ್ಲಿ ಮೊದಲ ಮಹಾಚುನಾವಣೆ ನಡೆದಾಗ ಹಾಸನ-ಚಿಕ್ಕಮಗಳೂರು ಕ್ಷೇತ್ರದಲ್ಲಿ 3,54,206 ಮತದಾರರಿದ್ದು, 1,71,850 ಮಂದಿ ಮತದಾರರು ಹಕ್ಕು ಚಲಾಯಿಸಿದ್ದರು. ಕಾಂಗ್ರೆಸ್‍ನ ಹೆಚ್.ಸಿದ್ದನಂಜಪ್ಪ ಜಯ ಗಳಿಸಿದ್ದರು.

ಸಿದ್ದನಂಜಪ್ಪ

* 1957ರಲ್ಲಿ ನಡೆದ 2ನೇ ಲೋಕಸಭಾ ಚುನಾವಣೆಯಲ್ಲಿ ಹೆಚ್.ಸಿದ್ದನಂಜಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದರು.

* 1962ರಲ್ಲಿ ನಡೆದ ಚುನಾವಣೆಯಲ್ಲಿ 4,33,487 ಮತದಾರರಲ್ಲಿ 2,41,184 ಮತಗಳು ಚಲಾವಣೆಯಾಗಿತ್ತು. ಅದರಲ್ಲಿ ಕಾಂಗ್ರೇಸ್‍ನ ಹೆಚ್.ಸಿದ್ದನಂಜಪ್ಪ 1,04,898 ಮತಗಳನ್ನು ಗಳಿಸಿ ಮೂರನೆ ಬಾರಿ ಲೋಕಸಭೆ ಪ್ರವೇಶಿಸಿದರು.

ಎಂ.ಹುಚ್ಚೇಗೌಡ

* 1967ರಲ್ಲಿ ಹಾಸನ ಜಿಲ್ಲೆಯಿಂದ ಬೇರ್ಪಡಿಸಿಕೊಂಡು ಪ್ರತ್ಯೇಕ ಚಿಕ್ಕಮಗಳೂರು ಕ್ಷೇತ್ರವೆಂದು ನಾಮಕರಣಗೊಂಡ ನಂತರ ನಡೆದ ಚುನಾವಣೆಯಲ್ಲಿ 4,07,267 ಮತದಾರರಲ್ಲಿ 2,60,483 ಮತ ಚಲಾವಣೆ ಯಾಗಿತ್ತು. ಅದರಲ್ಲಿ 1,06,812 ಮತ ಪಡೆದು ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಸ್ಪರ್ಧಿಸಿದ್ದ ಮಾಕೋನಹಳ್ಳಿ ಎಂ.ಹುಚ್ಚೇಗೌಡ ಪ್ರಥಮ ಪ್ರಯತ್ನದಲ್ಲಿಯೇ ಲೋಕಸಭೆಗೆ ಆಯ್ಕೆಯಾಗಿದ್ದರು.

ಡಿ.ಬಿ. ಚಂದ್ರೇಗೌಡ

* 1971ರ ಚುನಾವಣೆಯಲ್ಲಿ 4,56,969 ಮತದಾರರಿದ್ದು, 2,61,299 ಮತದಾರರು ಹಕ್ಕು ಚಲಾಯಿಸಿದ್ದರು. ಅದರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದ ಯುವ ನಾಯಕ ರಾಗಿದ್ದ ದಾರದಹಳ್ಳಿಯ ಡಿ.ಬಿ.ಚಂದ್ರೇಗೌಡ 1,88,151 ಮತಗಳಿಕೆ ಮೂಲಕ ಜಯ ಗಳಿಸಿದ್ದರು.

* 1977ರ ಚುನಾವಣೆಯಲ್ಲಿ 5,34,676 ಮತದಾರರಿದ್ದರು. ಅವರಲ್ಲಿ 3,51,910 ಮಂದಿ ಮತದಾನ ನಡೆಸಿದ್ದರು. ಕಾಂಗ್ರೇಸ್‍ನ ಡಿ.ಬಿ.ಚಂದ್ರೇಗೌಡ 2,08,239 ಮತಗಳಿಸಿ ಎರಡನೆ ಭಾರಿ ಆಯ್ಕೆಗೊಂಡರು. ತುರ್ತು ಪರಿಸ್ಥಿತಿಯ ಕಾರಣದಿಂದ ಸೋತು ಹೋಗಿದ್ದ ಶ್ರೀಮತಿ ಇಂದಿರಾಗಾಂಧಿಯವರು ಚಿಕ್ಕಮಗಳೂರಿನಿಂದ ಸ್ಪರ್ಧಿಸಲು ಮುಂದಾದಾಗ ಅವರ ಸ್ಪರ್ಧೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ಡಿ.ಬಿ. ಚಂದ್ರೇಗೌಡರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

* 1978ರಲ್ಲಿ ನಡೆದ ಉಪಚುನಾವಣೆಯಲ್ಲಿ ಒಟ್ಟು 5,95,393 ಮತಗಳಿದ್ದು, 4,53,465 ಮತ ಚಲಾವಣೆಯಾಗಿದ್ದವು. ಈ ಐತಿಹಾಸಿಕ ಚುನಾವಣೆಯಲ್ಲಿ ಕಾಂಗ್ರೇಸ್‍ನಿಂದ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ 2,49,376 ಮತ ಗಳಿಸಿ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದ ವಿರೇಂದ್ರ ಪಾಟೀಲ್‍ರವರೆದುರು ಜಯ ಗಳಿಸಿದ್ದರು.

* 1980ರ ಚುನಾವಣೆಗೆ 6,30,138 ಮತದಾರರಿದ್ದು, 3,84,830 ಮತ ಚಲಾವಣೆಯಾಗಿತ್ತು. ಇದರಲ್ಲಿ ಕಾಂಗ್ರೇಸ್‍ನ ಡಿ.ಎಂ.ಪುಟ್ಟೇಗೌಡ ಮಾಕೋನಹಳ್ಳಿ ಇವರು 2,39,522 ಮತದೊಂದಿಗೆ ಜಯ ಗಳಿಸಿದ್ದರು.

* 1984ರ ಚುನಾವಣೆಯಲ್ಲಿ 6,77,667 ಮತದಾರರಲ್ಲಿ 4,44,583 ಮಂದಿ ಮತದಾರರು ಮತ ಚಲಾಯಿಸಿದ್ದರು. ಈ ಪೈಕಿ 2,68,912 ಮತಗಳನ್ನು ಪಡೆದ ಕಾಂಗ್ರೇಸ್‍ನ ಡಿ.ಕೆ.ತಾರಾದೇವಿ ದಾರದಹಳ್ಳಿ ಇವರು ಜಯಶೀಲರಾಗಿ ಲೋಕಸಭೆ ಪ್ರವೇಶ ಪಡೆದಿದ್ದರು.

* 1989ರ ಚುನಾವಣೆಯಲ್ಲಿ 9,40,328 ಮತದಾರರಲ್ಲಿ 6,70,322 ಮತಗಳು ಚಲಾವಣೆಯಾಗಿತ್ತು. 3,03,195 ಮತಗಳೊಂದಿಗೆ ಕಾಂಗ್ರೇಸ್‍ನ ಡಿ.ಎಂ.ಪುಟ್ಟೇಗೌಡ ಅವರು ಎರಡನೇ ಬಾರಿಗೆ ಆಯ್ಕೆಯಾಗಿದ್ದರು.

* 1991ರ ಚುನಾವಣೆಯಲ್ಲಿ 9,49,376 ಮತದಾರರಲ್ಲಿ 5,18,734 ಮತ ಚಲಾವಣೆಯಾಗಿತ್ತು. ಕಾಂಗ್ರೇಸ್‍ನ ಡಿ.ಕೆ.ತಾರಾದೇವಿ 2,17,309 ಮತಗಳೊಂದಿಗೆ ಎರಡನೇ ಬಾರಿ ಚುನಾಯಿತರಾಗಿದ್ದರು.

* 1996ರ ಚುನಾವಣೆಯಲ್ಲಿ 9,96,548 ಮತದಾರರಲ್ಲಿ 6,49,775 ಮತ ಚಲಾವಣೆ ಯಾಗಿತ್ತು. ಜನತಾ ದಳದ ಬಿ.ಎಲ್.ಶಂಕರ್ 1,95,857 ಮತ ಪಡೆದು ಸಂಸತ್ ಪ್ರವೇಶಿಸಿದ್ದರು.

* 1998ರ ಚುನಾವಣೆಯಲ್ಲಿ 10,50,631 ಮತದಾರರಿದ್ದು, 7,27,521 ಮತ ಚಲಾವಣೆಯಾಗಿತ್ತು. ಅದರಲ್ಲಿ ಬಿಜೆಪಿಯ ಡಿ.ಸಿ.ಶ್ರೀಕಂಠಪ್ಪ 3,16,137
ಮತಗಳಿಸಿ ಆಯ್ಕೆಯಾಗಿದ್ದರು.

* 1999ರ ಚುನಾವಣೆಯಲ್ಲಿ 10,50,838 ಮತದಾರರಲ್ಲಿ 7,41,895 ಮತ ಚಲಾವಣೆ ಯಾಗಿದ್ದವು. ಬಿಜೆಪಿಯ ಡಿ.ಸಿ.ಶ್ರೀಕಂಠಪ್ಪ 3,24,470 ಮತಗಳಿಸಿ ಪುನರಾಯ್ಕೆಯಾದರು.

* 2004ರ ಚುನಾವಣೆಯಲ್ಲಿ 11,21,327 ಮತದಾರರಿದ್ದರು. ಅವರಲ್ಲಿ 8,19,309 ಮಂದಿ ಮತ ಚಲಾಯಿಸಿದ್ದರು. ಬಿಜೆಪಿಯ ಡಿ.ಸಿ.ಶ್ರೀಕಂಠಪ್ಪ 3,41,391 ಮತದೊಂದಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು.

ಉಡುಪಿ-ಚಿಕ್ಕಮಗಳೂರು

* 2009ರ ಚುನಾವಣೆಯಲ್ಲಿ ಕ್ಷೇತ್ರ ಪುನರ್ ವಿಂಗಡಣೆಯ ಕಾರಣದಿಂದ ಚಿಕ್ಕಮಗಳೂರು ಕ್ಷೇತ್ರ ಉಡುಪಿ ಕ್ಷೇತ್ರದೊಂದಿಗೆ ಸೇರಿಕೊಂಡು ಉಡುಪಿ-ಚಿಕ್ಕಮಗಳೂರು ಕ್ಷೇತ್ರವೆಂದು ನಾಮಕರಣ ಗೊಂಡಿತು. ಈ ಚುನಾವಣೆಯಲ್ಲಿ 12,24,335 ಮತದಾರರಲ್ಲಿ 8,34,355 ಮತ ಚಲಾಯಿಸಿದ್ದರು. ಬಿಜೆಪಿಯ ಡಿ.ವಿ. ಸದಾನಂದಗೌಡ 4,01,441 ಮತಗಳಿಸಿ ಚುನಾಯಿತರಾದರು.

* ಸದಾನಂದಗೌಡರು ಮುಖ್ಯಮಂತ್ರಿಯಾದ ಕಾರಣದ ತೆರವಾದ ಸಂಸತ್ ಸ್ಥಾನಕ್ಕೆ ನಡೆದ 2012ರ ಉಪಚುನಾವಣೆಯಲ್ಲಿ 12,03,466 ಮತದಾರರಿದ್ದರು. ಅವರಲ್ಲಿ 8,52,824 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಕಾಂಗ್ರೇಸ್ ಕೆ.ಜಯಪ್ರಕಾಶ್ ಹೆಗ್ಡೆ 3,98,723 ಮತಗಳಿಸಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

* 2014ರ ಚುನಾವಣೆಯಲ್ಲಿ 9,95,588 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಬಿ.ಜೆ.ಪಿ.ಯ ಶೋಭಾ ಕರಂದ್ಲಾಜೆಯವರು 5,81,168 ಮತಗಳನ್ನು ಪಡೆದು ಕಾಂಗ್ರೇಸ್ ಕೆ.ಜಯಪ್ರಕಾಶ್ ಹೆಗ್ಡೆಯವರನ್ನು ಪರಾಭವ ಗೊಳಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು.

* 2019ರ ಚುನಾವಣೆಯಲ್ಲಿ ಒಟು 11,51,010 ಮತದಾರರು ಹಕ್ಕು ಚಲಾಯಿಸಿದ್ದರು. ಬಿ.ಜೆ.ಪಿ.ಯ ಶೋಭಾ ಕರಂದ್ಲಾಜೆಯವರು 7,18,916 ಮತಗಳನ್ನು ಪಡೆದು ಜೆ.ಡಿ.ಎಸ್. ಕಾಂಗ್ರೇಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರನ್ನು ಪರಾಭವಗೊಳಿಸಿ ಎರಡನೇ ಬಾರಿಗೆ ಸಂಸದರಾಗಿದ್ದರು.

ಇದೀಗ ಕ್ಷೇತ್ರದಲ್ಲಿ 20ನೇ ಬಾರಿಗೆ ಲೋಕಸಭಾ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಬಿ.ಜೆ.ಪಿ ಮತ್ತು ಜೆ.ಡಿ.ಎಸ್. ಮೈತ್ರಿ ಅಭ್ಯರ್ಥಿಯಾಗಿ ಕೋಟಾ ಶ್ರೀನಿವಾಸ ಪೂಜಾರಿ ಕಾಂಗ್ರೇಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆಯವರ ನಡುವೆ ನೇರಾ ಹಣಾಹಣಿ ಏರ್ಪಟ್ಟಿದೆ. ಮುಂದಿನ ಸಂಸದರು ಯಾರಾಗುತ್ತಾರೆ ಎಂಬುದಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.
*********

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ