October 5, 2024

ಹಣ,ಮದ್ಯ ಮುಂತಾದ ಆಮೀಷಗಳಿಗೆ ಒಳಗಾಗಿ ಮತಗಳನ್ನು ಮಾರಾಟ ಮಾಡಿಕೊಳ್ಳಬೇಡಿ ಎಂದು ಜಾಗೃತ ಮತದಾರರ ವೇದಿಕೆ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಪಲ್ಗುಣಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಮಹೇಂದ್ರ ಕುಮಾರ್ ಅವರು ; ಎಂಜಲು ಕಾಸಿಗಾಗಿ ನಿಮ್ಮ ಅಮೂಲ್ಯವಾದ ಮತವನ್ನು ಮಾರಬೇಡಿ. ಇಂತ ಪ್ರವೃತ್ತಿಯನ್ನು ಬಿಡಬೇಕು. ಒಂದು ಮತಕ್ಕೆ ಬಾರಿ ಬೆಲೆ ಇದೆ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು.

ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಜಾತಿಯತೆ ಮಾಡಿ ದೇಶ ಒಡೆಯಬೇಡಿ. ಜನರ ನಡುವಿನ ಸಾಮರಸ್ಯ ಕದಡಬೇಡಿ. ದೇಶದ ಹಿತದೃಷ್ಟಿಯಿಂದ ಸರ್ವ ಸಮರ್ಥ ಅಭ್ಯರ್ಥಿಯನ್ನು ಆಯ್ಕೆಮಾಡಬೇಕು.

ಮತದಾನ ಮಾಡದೇ ಅಲೆಯಲು ಹೊರ ಊರುಗಳಿಗೆ ತೆರಳಬೇಡಿ. ಮೊದಲು ಮತದಾನ ಮಾಡಿ.

ಉತ್ತಮ ಅಭ್ಯರ್ಥಿ ಆಯ್ಕೆ ಆಗಬೇಕಾದರೆ ದೇಶದಲ್ಲಿ  ಶೇ 90 % ಮತದಾನ ಆಗಬೇಕು.  ವಿದ್ಯಾವಂತರೇ ಮತದಾನದಿಂದ ಹೊರಗುಳಿಯುತ್ತಿದ್ದು, ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ದೇಶದಲ್ಲಿ ಕಡ್ಡಾಯ ಮತದಾನ ಕಾನೂನು ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಮುಂಬರುವ ಸರ್ಕಾರಗಳು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ