October 5, 2024

ಸಂವಿದಾನ ಶಿಲ್ಪಿ ಭಾರತ ರತ್ನ ಡಾ. ಅಂಬೇಡ್ಕರ್ ಬದುಕಿದ್ದಾಗ ಅವರನ್ನು ಕಾಂಗ್ರೆಸ್  ಅವಮಾನಿಸಿದ್ದು. ಜನಸಂಘ. ಬಿಜೆಪಿ. ಅವರ ತತ್ವ ಸಿದ್ಧಾಂತ ಮತ್ತು ಪಾಂಡಿತ್ಯವನ್ನು ವಿಶ್ವಕ್ಕೆ ಸಾರುತಿದ್ದು. ಪಕ್ಷವು ವಿಕಸಿತ ಭಾರತದಲ್ಲಿ ದಲಿತರ ಏಳಿಗೆ ಹಾಗೂ ನಾಯಕತ್ವಕ್ಕಾಗಿ  ಶ್ರಮಿಸುತ್ತಿದ್ದು.  ರಾಷ್ಟ್ರಪತಿ ಸೇರಿದಂತೆ ಅನೇಕ ಸ್ಥಾನಮಾನಗಳನ್ನು ದಲಿತರಿಗೆ ನೀಡಿದ್ದು. ಮಾಜಿ ಶಾಸಕ ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸುತ್ತಿರುವುದಾಗಿ ಮೂಡಿಗೆರೆ ತಾಲ್ಲೂಕು ಬಿ.ಜೆ.ಪಿ. ವಕ್ತಾರ ವಿನಯ್ ಹಳೇಕೋಟೆ ತಿಳಿಸಿದರು.

ಅವರು ಈ ಬಗ್ಗೆ ಹೇಳಿಕೆಯಲ್ಲಿ ತಿಳಿಸಿ ಮಾಜಿ ಶಾಸಕ ಎಂಪಿ ಕುಮಾರಸ್ವಾಮಿ ಇತ್ತೀಚೆಗೆ ಕಳಸದಲ್ಲಿ ದಲಿತರು ಬಿಜೆಪಿ ಕಚೇರಿಯನ್ನು ತುಳಿಯುವಂತೆ ನಾನೇ ಮಾಡಿದ್ದು ಎಂದು ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದ್ದು. ನೀವುಗಳು ಈ ಹಿಂದೆ ಪಕ್ಷಕ್ಕೆ ಬರುವ ಮುಂಚೆ  ನಮ್ಮಲ್ಲಿ ಸಾವಿರಾರು ದಲಿತ ನಾಯಕರು ನಿಮಗಿಂತಲು ಹೆಚ್ಚು ಬುದ್ದಿವಂತರಿದ್ದರು. ಪಕ್ಷವನ್ನು ಸಂಘಟಿಸಿದ್ದರು ಎಂದರು.

ಗೆದ್ದಲು ಹುಳುವಿನ ರೀತಿ ನೀವು ಬಿಜೆಪಿ ಪಕ್ಷಕ್ಕೆ ಆಗಮಿಸಿದ್ದು ಏನು ಇಲ್ಲದ ನಿಮ್ಮನ್ನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಐದು ಬಾರಿ ವಿಧಾನಸಭೆ ಟಿಕೆಟ್ ನೀಡಿ ಮೂರು ಬಾರಿ ಶಾಸಕನನ್ನಾಗಿ ಮಾಡಿದ್ದು ಬಿಜೆಪಿ ಪಕ್ಷ. ನಿಮ್ಮ ವೈಯಕ್ತಿಕ ದಂಧೆಗಳು ಮತ್ತು ಭ್ರಷ್ಟಾಚಾರದಿಂದ ಈ ಬಾರಿ ಟಿಕೆಟ್ ಅನ್ನು ನಿರಾಕರಿಸಿದ್ದು. ಇತ್ತೀಚಿಗೆ  ನೀವು ಭ್ರಷ್ಟ ರಾಜಕೀಯ ಪಕ್ಷವೊಂದನ್ನು ಸೇರುವಾಗ ಈ  ಹಿಂದೆಯೇ ನನ್ನದು ಕಾಂಗ್ರೆಸ್‌ ಮನಸ್ಥಿತಿ ಎಂದಿದ್ದೀರಿ. ದೇಶ ಒಡೆದ ಕೋಮುವಾದಿಗಳು, ಭ್ರಷ್ಟಾಚಾರಿಗಳು ಆ ಪಕ್ಷದಲ್ಲೇ ಇರುವುದು ಸೂಕ್ತ.

ನೀವೀಗ ರಾಜಕೀಯ ರಂಗಕ್ಕೆ ತಿರಸ್ಕೃತರಾಗಿದ್ದು. ಬೇರೆ ಪಕ್ಷದಲ್ಲಿ ಒಂದು ಬಾರಿ ಶಾಸಕನಾಗುವ ಶಕ್ತಿಯು ನಿಮ್ಮಲ್ಲಿಲ್ಲ, ನಿಮ್ಮ ಹಳಸಲು ಹೇಳಿಕೆಗಳು ಎಲ್ಲಿಯೂ ಈಗ ಸಲ್ಲುವುದಿಲ್ಲ. ಕಾಂಗ್ರೆಸ್ ಪಕ್ಷ ಸುಳ್ಳು ಗ್ಯಾರಂಟಿಗಳ ಹೆಸರಲ್ಲಿ ಜನರನ್ನು ಒಂದು ಬಾರಿ ಮೋಸ ಮಾಡಬಹುದು ಎರಡನೇ ಬಾರಿ ಸಾಧ್ಯವಿಲ್ಲ ಈ ಬಾರಿಯ ಲೋಕಸಭಾ ಚುನಾವಣಾ ಸೇರಿದಂತೆ ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಗೆಲುವು  ಶತಸಿದ್ಧ ಎಂದು ತಿಳಿಸಿದ್ದಾರೆ.

ಬಿ.ಜೆ.ಪಿ. ಪಕ್ಷವೂ ಬಡವರ ಮತ್ತು ದೀನ ದಲಿತರ ಏಳಿಗೆಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸುತ್ತಿದೆ. ದೇಶದ ಕೋಟ್ಯಾಂತರ ಜನರು ಕೇಂದ್ರ ಸರ್ಕಾರದ ಜನಪರವಾದ ಯೋಜನೆಗಳ ಲಾಭ ಪಡೆದು ಆರ್ಥಿಕ ಅಭಿವೃದ್ಧಿ ಹೊಂದುತ್ತಿದ್ದಾರೆ. ಕಾಂಗ್ರೇಸ್ ಕೇವಲ ದಲಿತರ ಹೆಸರೇಳಿಕೊಂಡು ರಾಜಕೀಯ ಮಾಡಿತೇ ಹೊರತು ದಲಿತರ ಉದ್ದಾರಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಲಿಲ್ಲ ಎಂದು ವಿನಯ್ ಆರೋಪಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ